ಪೈಪ್ ಕಂಪೋಸ್ಟ್ ನಿಂದ ತ್ಯಾಜ್ಯಮುಕ್ತ ಮಜೂರು ಗ್ರಾ.ಪಂ- ವಿನಯಕುಮಾರ್ ಸೊರಕೆ

Spread the love

ಪೈಪ್ ಕಂಪೋಸ್ಟ್ ನಿಂದ ತ್ಯಾಜ್ಯಮುಕ್ತ ಮಜೂರು ಗ್ರಾ.ಪಂ- ವಿನಯಕುಮಾರ್ ಸೊರಕೆ

ಉಡುಪಿ :- ಮಜೂರು ಗ್ರಾಮವನ್ನು ತ್ಯಾಜ್ಯಮುಕ್ತ ಗ್ರಾಮವನ್ನಾಗಿಸಲು ಎಲ್ಲ ಮನೆಗಳಲ್ಲಿ ಪೈಪ್ ಕಂಪೋಸ್ಡ್ ವ್ಯವಸ್ಥೆಯನ್ನು ಅಳವಡಿಸಲು ಪೈಪ್‍ಗಳನ್ನು ಒದಗಿಸಲು ಶಾಸಕರ ಅನುದಾನ ಒದಗಿಸುವುದಾಗಿ ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಅವರಿಂದು ಉಡುಪಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೋದ್ಯೋಗ ತರಬೇತಿ ಸಂಸ್ಥೆಯಲ್ಲಿ ಜನಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಸುಗ್ರಾಮ- ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

vinaykumar-sorake-waste-management-talk vinaykumar-sorake-waste-management-talk-1

ಚುನಾಯಿತ ಮಹಿಳಾ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಪಂಚಾಯಿತಿಯಲ್ಲಿರುವ ಸವಾಲುಗಳು, ಅನುದಾನ ಹಾಗೂ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಶಾಸಕರೊಂದಿಗೆ ಸಂವಾದ ನಡೆಸುವಾಗ ಮನೆಗಳಲ್ಲಿ ಹಸಿಕಸ ಹಾಗೂ ಕೊಳೆಯುವ ಕಸ ಬಳಸಲು ಪೈಪ್ ಅಳವಡಿಕೆಗೆ ನೆರವಾಗಿ ಎಂದು ಕೋರಿದರು.

ಸಮಸ್ಯೆಗೆ ಸ್ಪಂದಿಸಿದ ಶಾಸಕರು ತಕ್ಷಣವೇ ತಮ್ಮ ಅನುದಾನದಿಂದ ಮಜೂರು ಗ್ರಾಮಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದರು. ಪಂಚಾಯಿತಿ ವ್ಯವಸ್ಥೆ ಸಬಲೀಕರಣದಿಂದ ಜನಸಾಮಾನ್ಯರಿಗೆ ನೆರವಾಗಿದ್ದು, ಮೀಸಲಾತಿಯಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಮಹಿಳೆಯರು ಆಡಳಿತ ಕ್ಷೇತ್ರಕ್ಕೆ ಕಾಲಿಟ್ಟದ್ದರಿಂದ ಕರ್ತವ್ಯದಲ್ಲಿ ಬದ್ಧತೆ, ದುಶ್ಚಟಮುಕ್ತ ಸಮಾಜ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ಚಾಲನೆ ದೊರೆತಿದೆ ಎಂದೂ ಅವರು ನುಡಿದರು. ಸುಗ್ರಾಮದಿಂದ ಗ್ರಾಮಗಳು ಸುಭಿಕ್ಷವಾಗಲಿ ಎಂದು ಶಾಸಕರು ಹಾರೈಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ಅವರು, ಸರ್ಕಾರಗಳು ಮಹಿಳೆಯರನ್ನು ಸಬಲಗೊಳಿಸುವುದರಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಹೆಣ್ಮಕ್ಕಳು ಮನೆಗೆ ಆಸ್ತಿ ಎಂಬ ಭಾವನೆ ಮೂಡಿದೆ. ಅವರು ಸುಶಿಕ್ಷಿತರಾಗುವುದರಿಂದ ಸಮಾಜ ಉತ್ತಮಗೊಂಡಿದ ಎಂದರು.

ಜನಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶೀನಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಸಂವಾದ ನಡೆಸಿಕೊಟ್ಟರು.


Spread the love