ಪೊಲೀಸರ ಮೇಲೆ ಹಲ್ಲೆ ಆರೋಪ; ಚಡ್ಡಿ ಗ್ಯಾಂಗ್ ನ ಇಬ್ಬರ ಮೇಲೆ ಗುಂಡು ಹಾರಾಟ

Spread the love

ಪೊಲೀಸರ ಮೇಲೆ ಹಲ್ಲೆ ಆರೋಪ; ಚಡ್ಡಿ ಗ್ಯಾಂಗ್ ನ ಇಬ್ಬರ ಮೇಲೆ ಗುಂಡು ಹಾರಾಟ

ಮಂಗಳೂರು: ಸ್ಥಳ ಮಹಜರಿಗೆ ಕೊಂಡೊಯ್ದ ವೇಳೆ ಚಡ್ಡಿ ಗ್ಯಾಂಗ್ ತಂಡದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದ ವೇಳೆ ಅವರ ಮೇಲೆ ಪೋಲಿಸರು ಗುಂಡು ಹಾರಿಸಿದ್ದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಮೂಲ್ಕಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ

ಮಂಗಳೂರಿನ ಕೋಟೆಕಣಿಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ವೃದ್ದ ದಂಪತಿಯನ್ನು ಬೆದರಿಸಿ ಹಲ್ಲೆಗೈದು, ಹಣ ಮತ್ತು ಒಡವೆಗಳೊಂದಿಗೆ ಮನೆಯಲಿದ್ದ ಕಾರಿನ ಜೊತೆ ಪರಾರಿಯಾಗದ್ದ ಚಡ್ಡಿ ಗ್ಯಾಂಗ್ ನ ನಾಲ್ವರು ಆರೋಪಿಗಳನ್ನು ಘಟನೆ ನಡೆದ ಕೇವಲ ಐದು ಗಂಟೆಗಳಲ್ಲಿ ಹಾಸನ ಪೋಲಿಸರ ಸಹಕಾರದೊಂದಿಗೆ ಸಕಲೇಶಪುರದಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದರು.

ಬುಧವಾರ ಬೆಳಿಗ್ಗೆ ಸ್ಥಳ ಮಹಜರಿಗಾಗಿ ನಗರದ ಹೊರವಲಯದ ಮೂಲ್ಕಿಗೆ ಆರೋಪಿಗಳನ್ನು ಕೊಂಡೊಯ್ದ ವೇಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಎಸ್ ಐ ಮೇಲೆ ಹಲ್ಲೆ ಯತ್ನಿಸಿದ್ದು ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದು ಇಬ್ಬರು ಆರೋಪಿಗಳಿಗೆ ಗಾಯಗಳಾಗಿದ್ದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ


Spread the love