ಪೊಲೀಸ್ ಅಧಿಕಾರಿಗೆ ಜೀವ ಬೆದರಿಕೆ – ಅಪ್ರಾಪ್ತ ಸೇರಿ ಇಬ್ಬರ ಬಂಧನ
ಮಂಗಳೂರು: ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಬೊಂಡಂತಿಲ ನಿವಾಸ ಮಹಮ್ಮದ್ ಶಾಫಿಕ್ ಎಂದು ಗುರುತಿಸಲಾಗಿದ್ದು ಇನ್ನೋರ್ವ ಬಾಲಕ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದವನಾಗಿದ್ದಾನೆ
2019 ಡಿಸೆಂಬರ್ 26ರಂದು ಸಿ ಎ ಎ ಮತ್ತು ಎನ್ ಆರ್ ಸಿ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸ್ ನಿರೀಕ್ಷಕರಾದ ಶಾಂತರಾಮ್ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದಾರೆ. ಆರೋಪಿಗಳು ಒಳಸಂಚನ್ನು ರೂಪಿಸಿಕೊಂಡು ದ್ವೇಷ ಸಾಧಿಸಲು ಮತ್ತು ಸರಕಾರದ ಕರ್ತವ್ಯವನ್ನು ಸುಲಲಿತವಾಗಿ ನಿರ್ವಹಿಸುವಲ್ಲಿ ಅಡ್ಡಿಯನ್ನು ಉಂಟು ಮಾಡಿರುತ್ತಾರೆ ಎಂದು ಮಂಗಳೂರು ಪೂರ್ವ ಠಾಣೆಯಲ್ಲಿ ದೂರನ್ನು ನೀಡಿರುತ್ತಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸ್ ಆಯುಕ್ತರು ಈ ಪ್ರಕರಣದ ಮುಂದಿನ ತನಿಖೆಯನ್ನು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ವರ್ಗಾಯಿಸುತ್ತಾರೆ.
ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ವಿಕಾಸ್ ರವರ ಮತ್ತು ಉಪ ಪೊಲೀಸ್ ಆಯುಕ್ತರಾದ ವಿನಯ್ ಎ ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಿ ಸಿ ಗಿರೀಶ್, ಉಪನಿರೀಕ್ಷಕರಾದ ರೇಖಾ, ಮತ್ತು ಸಿಬಂದಯವರಾದ ಮಾಯಾ ಪ್ರಭು, ವಿಜಯ ಶೆಟ್ಟಿ, ಅಭಿಷೇಕ್ ಎ ಆರ್, ಮಂಜುನಾಥ, ರಾಜಪ್ಪ ಮತ್ತು ಅಪ್ಪಣ್ಣ ಇವರುಗಳು ಅಗಸ್ಟ್ 30 ರಂದು ಆರೋಪಿ ಮಹಮ್ಮದ್ ಶಾಫಿಕ್ ನನ್ನು ಬಂಧಿಸಿದ್ದಾರೆ.