Home Mangalorean News Kannada News ಪೊಲೀಸ್ ದೌರ್ಜನ್ಯಕ್ಕೆ: ಎಸ್ಸೆಸ್ಸೆಫ್ ಖಂಡನೆ, ಶಾಂತಿ ಕಾಪಾಡಲು ಮನವಿ

ಪೊಲೀಸ್ ದೌರ್ಜನ್ಯಕ್ಕೆ: ಎಸ್ಸೆಸ್ಸೆಫ್ ಖಂಡನೆ, ಶಾಂತಿ ಕಾಪಾಡಲು ಮನವಿ

Spread the love

ಪೊಲೀಸ್ ದೌರ್ಜನ್ಯಕ್ಕೆ: ಎಸ್ಸೆಸ್ಸೆಫ್ ಖಂಡನೆ, ಶಾಂತಿ ಕಾಪಾಡಲು ಮನವಿ

ಮಂಗಳೂರು: ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಪೋಲಿಸರು ದೌರ್ಜನ್ಯ ಎಸಗಿರುವುದನ್ನು ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಖಂಡಿಸಿದ್ದಾರೆ.
ಇಲ್ಲಿ ಯಾವುದೇ ಪ್ರತಿಭಟನೆ ನಡೆದಾಗ ಸಾಮಾನ್ಯವಾಗಿ ಸಂಬಂಧಪಟ್ಟವರು ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟು ಅಹವಾಲು ಆಲಿಸುವ ಪರಿಪಾಠ ರೂಢಿಯಲ್ಲಿದೆ. ಅಥವಾ ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸುವ ಕ್ರಮವೂ ಸ್ವಾಭಾವಿಕ. ಆದರೆ ಮಂಗಳೂರಿನಲ್ಲಿ ಪ್ರತಿಭಟನಾನಿರತರನ್ನು ಪೋಲಿಸರು ಅಪ್ರಚೋದಿತರಾಗಿ ಥಳಿಸುವುದು ವಿಡಿಯೋ ದೃಶ್ಯಾವಳಿಯಲ್ಲಿ ಕಂಡುಬರುತ್ತಿದೆ. ರಾಜ್ಯದ ಅಧಿಕಾರರೂಢ ಪಕ್ಷದ ಸ್ಥಳೀಯ ಮುಸ್ಲಿಂ ಮುಖಂಡರು ಈ ಬಗ್ಗೆ ಮೌನ ಮುರಿಯಬೇಕು. ಪೊಲೀಸರ ಇಂತಹ ವರ್ತನೆಯಿಂದ ಅಲ್ಪಸಂಖ್ಯಾತರಲ್ಲಿ ಅಭದ್ರತಾ ಭಾವ ಬೆಳೆಯುವ ಅಪಾಯವಿದೆ. ಆದುದರಿಂದ ದೌರ್ಜನ್ಯವೆಸಗಿರುವ ಪೊಲಿಸರ ವಿರುದ್ಧ ರಾಜ್ಯಸರಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಇಂತಹ ಸಂದರ್ಭಗಳನ್ನು ಕೋಮುಶಕ್ತಿಗಳು ದುರುಪಯೋಗ ಪಡಿಸದಂತೆ ಸಮುದಾಯದ ಎಲ್ಲರೂ ಎಚ್ಚರ ವಹಿಸಬೇಕು, ಶಾಂತಿ ಕಾಪಾಡಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Spread the love

Exit mobile version