Home Mangalorean News Kannada News ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ

ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ

Spread the love

ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ಗೆ ಹೊರ ಜಿಲ್ಲೆಗಳಿಂದ ನೇಮಕವಾದ ಪೊಲೀಸ್ ಸಿಬ್ಬಂದಿಗಳಿಗೆ 10 ದಿವಸಗಳ ಕಾಲ ತುಳು ಭಾಷೆಯ ತರಭೇತಿ ಕಾರ್ಯಾಗಾರ ನಡೆಯಿತು. ಸುಮಾರು 42 ಶಿಬಿರಾರ್ಥಿಗಳಿದ್ದ 3ನೇ ತಂಡದ ತುಳು ಭಾಷೆಯ ತರಭೇತಿ ಶಿಬಿರದ ಸಮಾರೋಪ ಸಮಾರಂಭವು ಮಾನ್ಯ ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಚಂದ್ರಶೇಖರ್ ಐಪಿಎಸ್, ಮಾನ್ಯ ಪೊಲೀಸ್ ಕಮಿಷನರ್ ಮಂಗಳೂರು ನಗರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

tulu-speaking-training-police

ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಚಂದ್ರಹಾಸ ರೈ, ರಿಜಿಸ್ಟ್ರ್ಟಾರ್, ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ಡಾ|| ಉದಯ ಎಂ.ಎ. ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರುರವರು ಉಪಸ್ಥಿತರಿದ್ದರು. ಅಂತೆಯೇ ಪೊಲೀಸ್ ಅಧಿಕಾರಿಗಳಾದ ಶ್ರೀ ಶಾಂತರಾಜು, ಡಿಸಿಪಿ(ಕಾ&ಸು) ಹಾಗೂ ಡಾ|| ಸಂಜೀವ ಎಂ. ಪಾಟೀಲ, ಡಿಸಿಪಿ(ಅಪರಾಧ & ಸಂಚಾರ) ರವರು ಉಪಸ್ಥಿತರಿದ್ದರು.

ಈ ಸಮಾರೋಪ ಸಮಾರಂಭದಲ್ಲಿ ತುಳು ಭಾಷೆಯ ತರಭೇತಿ ಶಿಬಿರದಲ್ಲಿ ಉಪನ್ಯಾಸಕರಾದ ಡಾ|| ವಿಶ್ವನಾಥ ಬದಿಕಾನ, ಪ್ರಾದ್ಯಾಪಕರು ಕನ್ನಡ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಡಾ|| ಗಿರಿಯಪ್ಪ, ಪ್ರಾದ್ಯಾಪಕರು, ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ, ಮಂಗಳೂರು, ರೂಪಕಲಾ ಆಳ್ವ, ಬರಹಗಾರ್ತಿ, ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ಪ್ರೋ. ವೇದಾವತಿ, ನಿವೃತ್ತ ಪ್ರಾದ್ಯಾಪಕಿ, ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರುರವರು ಉಪಸ್ಥಿತರಿದ್ದರು.

ಸ್ವಾಗತ ಭಾಷಣ ಮತ್ತು ಪ್ರಸ್ತಾವಿಕ ನುಡಿಯನ್ನು ಶ್ರೀ ಶಾಂತರಾಜು, ಡಿಸಿಪಿ(ಕಾ&ಸು) ರವರು ನೆರವೇರಿಸಿದರು. ನಂತರ ಶಿಬಿರಾರ್ಥಿಗಳಾದ ಕು. ಸಬಿಹಾ ಬಾನು, ಮುಲ್ಕಿ ಠಾಣೆ, ಕು. ದೀಪಾ ಹೆಚ್. ಸುರತ್ಕಲ್ ಠಾಣೆ, ಮಂಜಣ್ಣ ಮಂ. ಪೂರ್ವ ಠಾಣೆ, ಸತ್ಯ ಎಂ. ಮಂಗಳೂರು ಪೂರ್ವ ಠಾಣೆರವರು ತುಳುವಿನಲ್ಲಿಯೇ ತಮ್ಮ ಅನಿಸಿಕೆಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಂದ್ರಹಾಸ ರೈ, ರಿಜಿಸ್ಟ್ರ್ಟಾರ್, ತುಳು ಸಾಹಿತ್ಯ ಅಕಾಡೆಮಿ, ಮಂಗಳೂರುರವರು ತಮ್ಮ ಭಾಷಣದಲ್ಲಿ ಇತರ ಭಾಷೆಗಳನ್ನು ಕಲಿತಲ್ಲಿ ತಮ್ಮ ವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಡಾ|| ಉದಯ ಎಂ.ಎ. ಪ್ರಾಂಶುಪಾಲರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರುರವರು ತುಳು ಭಾಷೆಯ ಮಹತ್ವದ ಬಗ್ಗೆ ಮಾತನಾಡಿದರು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅತಿಥಿಗಳಿಗೆ ಸ್ಮರಣಿಕೆ ವಿತರಣೆಯ ಬಳಿಕ ಮಾನ್ಯ ಆಯುಕ್ತರಿಂದ ಅಧ್ಯಕ್ಷ ಭಾಷಣ ನೆರವೇರಿತು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅನ್ನವ್ವ ಟಿ. ಉಳ್ಳಾಲ ಪೊಲೀಸ್ ಠಾಣೆ, ವಂದನಾರ್ಪಣೆ ಯನ್ನು ವೆಲೆಂಟಿನ್ ಡಿ’ಸೋಜ, ಎಸಿಪಿ, ಸಿಸಿಆರ್ಬಿ ಹಾಗೂ ಕಾರ್ಯಕ್ರಮದ ನಿರೂಪಕರಾಗಿ ಶ್ರೀ ಹರೀಶ್ಚಂದ್ರ ಆರ್. ಸಿಎಸ್ಬಿ ಹಾಗೂ ಸಿಸಿಆರ್ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹಕರಿಸಿದರು.


Spread the love

Exit mobile version