Home Mangalorean News Kannada News ಪೋಕ್ಸೊ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮಾಹಿತಿಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ

ಪೋಕ್ಸೊ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮಾಹಿತಿಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ

Spread the love

ಪೋಕ್ಸೊ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮಾಹಿತಿಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿರುವ ಬೈರಂಪಳ್ಳಿ ನಿವಾಸಿ ಪ್ರದೀಪ್ ಶೆಟ್ಟಿ (38) ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಜಿಲ್ಲಾ ಪೊಲೀಸ್ ಸಾರ್ವಜನಿಕರಲ್ಲಿ ವಿನಂತಿಸಿದೆ.

ಹಿರಿಯಡಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 32/2020 ಕಲಂ 354 ಐಪಿಸಿ, pocso act & sc/st act ಪ್ರಕರಣದಲ್ಲಿ ಪ್ರದೀಪ್ ಶೆಟ್ಟಿ ಆರೋಪಿಯಾಗಿದ್ದು ಈತ ಅಗಸ್ಟ್ 25 ರಿಂದ ತಲೆ ಮರೆಸಿಕೊಂಡಿರುತ್ತಾನೆ.

ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಉಪಾಧೀಕ್ಷಕರು ಉಡುಪಿ ಮೊಬೈಲ್ ಸಂಖ್ಯೆ 9480805420, ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ಮೊಬೈಲ್ ಸಂಖ್ಯೆ – 9480805432, ಪೊಲೀಸ್ ಉಪ ನಿರೀಕ್ಷಕರು ಹಿರಿಯಡಕ ಠಾಣೆ ಮೊಬೈಲ್ ಸಂಖ್ಯೆ – 9480805452 ಮತ್ತು ಜಿಲ್ಲಾ ನಿಸ್ತಂತು ಘಟಕ ಉಡುಪಿ. 0820-2526444 ದೂರವಾಣಿ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.

ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.


Spread the love

Exit mobile version