ಪೋಪ್ ಫ್ರಾನ್ಸಿಸ್ ಅವರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಶದ್ಧಾಂಜಲಿ
ಮಂಗಳೂರು: ಇತ್ತೀಚೆಗೆ ನಿಧನರಾದ ಕಥೊಲಿಕ್ ಕ್ರೈಸ್ತ ಸಮುದಾಯದ ಪರಮಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಟಿಲ್ಡಾ ಡಿಸೋಜ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಭಾಸ್ಕರ್.ಕೆ, ಮುಖಂಡರಾದ ಬಿ.ಎಂ.ಅಬ್ಬಾಸ್ ಅಲಿ, ನವೀನ್ ಡಿಸೋಜ, ಕೆ.ಅಪ್ಪಿ, ಭಾಸ್ಕರ್ ರಾವ್, ಟಿ.ಕೆ.ಸುಧೀರ್, ಸಂಶುದ್ದೀನ್ ಬಂದರ್, ಗಣೇಶ್ ಪೂಜಾರಿ, ಶಾಂತಲ ಗಟ್ಟಿ, ಜಾನ್ ಮೊಂತೆರೊ, ಆಲ್ವಿನ್ ಪ್ರಕಾಶ್, ಜಲೀಲ್, ಜೋಸ್ಪಿನ್ ಡಿಸೋಜ, ಗಿರೀಶ್ ಆಳ್ವ, ಜಾರ್ಜ್, ನೆಲ್ಸನ್ ಮೊಂತೆರೊ, ಜೀತೇಂದ್ರ ಸುವರ್ಣ, ಯೋಗೀಶ್ ಕುಮಾರ್, ಮೇರಿ ಸಾಂತೀಸ್, ಶಬ್ಬೀರ್.ಎಸ್ ಮತ್ತಿತರರು ಉಪಸ್ಥಿತರಿದ್ದರು.