ಪೋಲಿಸರು ಸಾರ್ವಜನಿಕರ ಅಂತರ ದೂರ ಮಾಡಲು ಗ್ರಾಮ ವಾಸ್ತವ್ಯ ; ಎಸ್ಪಿ ಅಣ್ಣಾಮಲೈ

Spread the love

ಪೋಲಿಸರು ಸಾರ್ವಜನಿಕರ ಅಂತರ ದೂರ ಮಾಡಲು ಗ್ರಾಮ ವಾಸ್ತವ್ಯ ; ಎಸ್ಪಿ ಅಣ್ಣಾಮಲೈ

ಕುಂದಾಪುರ: ಪೋಲಿಸ್ ಹಾಗೂ ಸಾರ್ವಜನಿಕರ ನಡುವೆ ಇರುವ ಅಂತರವನ್ನು ದೂರ ಮಾಡಲು ಜುಲೈ 1 ರಿಂದ ಪ್ರತಿ ಗ್ರಾಮದಲ್ಲಿ ಪೋಲಿಸರಿಂದ ಗ್ರಾಮ ವಾಸ್ತವ್ಯ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಹೇಳಿದರು.

sp-annamalai-peace-meet

ಅವರು ರಂಜಾನ್ ಹಬ್ಬದ ಪ್ರಯುಕ್ತ ಪೂರ್ವಭಾವಿಯಾಗಿ ಕುಂದಾಫುರ ತಾಲೂಕು ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ ಶಾಂತಿ ಸಭೆಯನ್ನು ಉದ್ದೇಶಿಸಿದ ಮಾತನಾಡಿದರು.

ಪೋಲಿಸರು ಹಾಗೂ ಸಾರ್ವಜನಿಕರ ನಡುವೆ ಅಂತರವನ್ನು ಕಾಯ್ದುಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಪ್ರತಿ ಗ್ರಾಮದಲ್ಲಿ ಒಂದು ಕಾನ್ಸ್ಟೇಬಲ್ ಅವರಿಗೆ ಒಂದು ಗ್ರಾಮದ ಜವಾಬ್ದಾರಿಯನ್ನು ನೀಡಲಾಗುವುದು. ಈ ಸಂದರ್ಭದಲ್ಲಿ ಒಂದು ವಾರ ಒರ್ವ ಹೆಡ್ ಕಾನ್ ಸ್ಟೇಬಲ್ ಹಾಗೂ ಒರ್ವ ಕಾನ್ಸ್ ಟೇಬಲ್ ಗ್ರಾಮದಲ್ಲಿ ಉಳಿದುಕೊಂಡು ಗ್ರಾಮದ ಸಮಸ್ಯೆಯನ್ನು ಕೆಳ ಹಂತದಲ್ಲೇ ಪರಿಹರಿಸಲು ಯತ್ನಿಸಲಾಗುವುದು ಎಂದರು.

ಮುಸ್ಲಿಂ ಭಾಂಧವರ ರಂಜಾನ್ ಹಬ್ಬವು ಹತ್ತಿರದಲ್ಲಿದ್ದು, ಕುಂದಾಫುರ ತಾಲೂಕಿನಲ್ಲಿ ಒಟ್ಟು 52 ಮಸೀದಿಗಳಿದ್ದು, ಹಬ್ಬದ ದಿನದಂದು 5 ಕಡೆಗಳಲ್ಲಿ ಮೆರವಣಿಗೆಗಳಿವೆ. ಹಬ್ಬದ ಶುಭಾಶಯ ಕೋರುವ ಬ್ಯಾನರ್, ಮೈಕ್ ಪರವಾನಿಗೆ ಮುಂಚಿತವಾಗಿ ಪಡೆದುಕೊಂಡು ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕು., ಕಳೆದ ಮೂರು ವರ್ಷಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಅದರಂತೆಯೇ ಈ ವರ್ಷವೂ ಕೂಡ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸರ್ವರ ಸಹಕಾರವನ್ನು ಕೋರಿದರು.

ಮುಂದಿನ ಹತ್ತು ದಿನಗಳ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ 22 ಕಡೆಗಳಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ ಅಪರಿಚಿತ ವ್ಯಕ್ತಿಗಳ ತಪಾಸಣೆ, ಹಾಗೂ ಜಾನುವಾರು ಕಳ್ಳಸಾಗಣೆಯನ್ನು ತಡೆಹಿಡಿಯುವುದು ಇದಕ್ಕಾಗಿ ಮಾರ್ಗಸೂಚಿಗಳನ್ನು ಈಗಾಗಲೇ ಇಲಾಖಾ ಅಧಿಕಾರಿಗಳಿಗೆ ನೀಡಿದ್ದೇವೆ ಅದರಂತೆ ಅವರು ಕಾರ್ಯಗಳನ್ನು ಕೈಗೊಳ್ಳುತ್ತಾರೆ ಎಂದರು.

ಕಂಡ್ಲೂರಿನಲ್ಲಿ ಅಗತ್ಯವಿರುವ ಹೊಸ ಪೋಲಿಸ್ ಠಾಣೆಗೆ ಜಾಗದ ನಿಗದಿಯಾದ ತಕ್ಷಣ ತಾತ್ಕಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಪೋಲಿಸ್ ಠಾಣೆಯನ್ನು ನಿರ್ಮಿಸಲಾಗುವುದು ಈ ಕಾರ್ಯ ಮುಂದಿನ ಒಂದು ತಿಂಗಳ ಒಳಗೆ ಮುಗಿಸುವ ಭರವಸೆ ನೀಡಿದರು. ಇದರಿಂದ ಸೂಕ್ಷ್ಮ ಪ್ರದೇಶವಾಗಿರುವ ಕಂಡ್ಲೂರಿನ ಬಹಳ ಸಮಯದ ಬೇಡಿಕೆ ಈಡೇರಿಸಿದಂತಾಗುತ್ತದೆ ಎಂದರು.

ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಯಶ್ರೀ ಮೊಗವೀರ, ಕುಂದಾಪುರ ಡಿವೈಎಸ್ ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಇಲಾಖೆಯ ಸಿಬಂಧಿ ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
Santhosh Kumar
8 years ago

Good move SP annamalai. All the best