ಪೋಲಿಸ್ ಆಯುಕ್ತರೊಂದಿಗೆ ನೇರ ಫೋನ್ ಇನ್ – ಟ್ರಾಫಿಕ್ ಸಮಸ್ಯೆಗಳನ್ನು ಬಿಚ್ಚಿಟ್ಟ ಸಾರ್ವಜನಿಕರು
ಮಂಗಳೂರು: ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಶುಕ್ರವಾರ ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶುಕ್ರವಾರದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರು ಒಟ್ಟು 24 ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆ, ಸಲಹೆ, ಭಾತ್ಮಿ ಗಳಿಗೆ ಸ್ಪಂದಿಸಿದರು. ಇವುಗಳಲ್ಲಿ ಈ ದಿನ 10 ಪ್ರಶ್ನೆಗಳು ಟ್ರಾಫಿಕ್ ಸಮಸೈಗೆ ಸಂಬಂಧಪಟ್ಟದಾಗಿರುತ್ತದೆ. ಇದರಲ್ಲಿ ಕುಲಶೇಖರ, ಕುಡುಪು ದೇವಸ್ಥಾನದ ಬಳಿ ನಗರದ ಸಿಟಿ ಬಸ್ಸುಗಳು ಬಸ್ಸುನ್ನು ಪ್ರಯಾಣಿಕರನ್ನು ಹತ್ತಿಸಲು ರಸ್ತೆ ಬದಿಯಲ್ಲಿ ನಿಲ್ಲಿಸದೇ, ರಸ್ತೆಯಲ್ಲೇ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ ಬಗ್ಗೆ, ಕದ್ರಿ ಕಂಬಳಕ್ಕೆ ಹೋಗುವ ಭಾರತ್ ಬೀಡಿ ಅಫೀಸ್ ಎದುರುಗಡೆ ಟ್ರಾಫಿಕ್ ಬ್ಲಾಕ್ ಆಗಿ ವಾಹನ ಸಂಚಾರ ಅಡ್ಡಿಯಾಗುವ ಬಗ್ಗೆ ಪೊಲೀಸ್ ಆಯುಕ್ತರ ಗಮನವನ್ನು ಸೆಳೆದಿರುತ್ತಾರೆ. ಅದಲ್ಲದೇ ಕಿನ್ನಿಗೋಳಿಯ ಬಸ್ಸು ನಿಲ್ಡಾಣದ ಬಳಿ ವಾಹನಗಳನ್ನು ಸರಿಯಾಗಿ ಪಾರ್ಕಿಂಗ್ ಮಾಡುವ ಬಗ್ಗೆ ಅಲ್ಲಿಯ ಪಂಚಾಯತಿಯವರು ಪೊಲೀಸರೊಂದಿಗೆ ಸ್ಪಂದಿಸುದಿಲ್ಲವೆಂದು ದೂರಿರುತ್ತಾರೆ.
ಸುರತ್ಕಲ್ ಎಂ.ಅರ್.ಪಿ.ಎಲ್ ಕಾರ್ಗೋಗೇಟ್ ಬಳಿ ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆಗೊಳಿಸಿರುವ ಬಗ್ಗೆ ಸಾರ್ವಜನಿಕರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇರಿಸಿ ಅಫಘಾತವಾಗುವುದನ್ನು ತಪ್ಪಿಸಿರುವ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದ್ದು, ಖಾಸಗಿ ಬಸ್ಸುಗಳ ಚಾಲಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿಯನ್ನು ಮಾಡಿಸುವ ಕಾರ್ಯಕ್ರಮವನ್ನು ರೂಪಿಸುವಂತೆ ಸಲಹೆಯನ್ನು ನೀಡಿರುತ್ತಾರೆ. ಬಸ್ಸುಗಳಲ್ಲಿ ಕರ್ಕಶ ಹಾರ್ನ್ ಗಳನ್ನು ಬಳಸದೇ ಇರುವ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರ ಗಮನವನ್ನು ಸೆಳೆದಿರುತ್ತಾರೆ.
ಇನ್ನೊಬ್ಬ ಸಾರ್ವಜನಿಕರು ಎಕ್ಕೂರಿನ ಬಳಿ ಶಾಲಾ ವಾಹನಗಳು ಎಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದು, ಇದರಿಂದ ಅಪಘಾತವು ಸಂಭವಿಸಬಹುದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮಾಹಿತಿಯನ್ನು ನೀಡಿರುತ್ತಾರೆ. ನಂತರ ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ಕೊಟ್ಟಾರ ಚೌಕಿಯ ಪ್ಲೈ-ಒವರ್ ಬ್ರಿಡ್ಜ್ ನಲ್ಲಿ ಯಾವಾಗಲು ಬ್ಲಾಕ್ ಆಗುತ್ತಿದ್ದು, ಕುಂಟಿಕಾನ ಎ.ಜೆ ಆಸ್ಪತ್ರೆಯಿಂದ ಕೊಟ್ಟಾರ ಚಾಕಿಯ ವರೆಗೆ ಸಾರ್ವಜನಿಕರಿಗೆ ನಡೆದಾಡಲು ಫುಟ್ಪಾತ್ ವ್ಯವಸ್ಥೆ, ಬಸ್ಸು ತಂಗುದಾಣ ಇಲ್ಲದೇ ಇರುವ ಬಗ್ಗೆ ದೂರಿರುತ್ತಾರೆ. ಮತ್ತೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸು ಬೇ ಮಾರ್ಕಿಂಗ್ಇಲ್ಲದೇ ಇರುವ ಬಗ್ಗೆ ದೂರಿದ್ದು, ಇದರಿಂದ ಬಸ್ಸು ಚಾಲಕರು ಬಸ್ಸನ್ನು ರಸ್ತೆ ಮಧ್ಯೆ ನಿಲ್ಲಿಸಿ ಇತರ ವಾಹನಕ್ಕೆ ತೊಂದರೆ ಯಾಗಿರುವ ಬಗ್ಗೆ ದೂರಿರುತ್ತಾರೆ.
5 ಜನ ಸಾರ್ವಜನಿಕರು ಮಾದಕ ದ್ರವ್ಯ, ಅಕ್ರಮ ಮದ್ಯ ಮಾರಾಟ, ಜೂಜಾಟ ಮತ್ತು ವೈದ್ಯರಿಗೆ ಕೆಲವು ಭಾಗಗಳಲ್ಲಿ ರೋಗಿಗಳ ಮತ್ತು ರೋಗಿಗಳ ಸಂಬಂಧಿಕರು ದಮ್ಕಿ ಹಾಕುತ್ತಿರುವ ಬಗ್ಗೆ ದೂರಿರುತ್ತಾರೆ. ಕರೆ ಮಾಡಿದ 4 ಜನ ಸಾರ್ವಜನಿಕರು ಈಗಾಗಲೇ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾಹಿತಿ ನೀಡಿ, ತನಿಖೆಯನ್ನು ಚುರುಕು ಗೊಳಿಸುವಂತೆ ಕೋರಿರುತ್ತಾರೆ.
ಕರೆ ಮಾಡಿದವರಲ್ಲಿ ಉಳಿದವರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉತ್ತಮ ಕಾರ್ಯ ಕೈಗೊಂಡಿರುವ ಬಗ್ಗೆ ಕಮೀಷನರೇಟ್ ನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿರುತ್ತಾರೆ. ಪೊಲೀಸ್ ಸಿಬ್ಬಂದಿಗಳ ವಸತಿಗೃಹ ಸುಧಾರಣೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವಂತೆ ಕೋರಿರುತ್ತಾರೆ.
ಪೋಲಿಸ್ ಆಯುಕ್ತರೊಂದಿಗೆ ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮ ಪ್ರತಿ ಶುಕ್ರವಾರ ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯ ವರೆಗೆ ನಡೆಸಲಾಗುತ್ತದೆ.