ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಪ್ರತಿಭಟನೆ
ಉಡುಪಿ: ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಿ ಹಾಗೂ ಜಾತ್ಯತೀತ ಹಂದರವನ್ನು ನಾಶ ಮಾಡಿ ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝಿನ ಬಳಿಕ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಾಯಿತು.
ಈ ದೇಶದಲ್ಲಿ ಹುಟ್ಟಿ ತಮ್ಮ ಸರ್ವಸ್ಥವನ್ನು ಈ ದೇಶಕ್ಕೆ ಮುಡುಪಾಗಿಟ್ಟ ಹಾಗೂ ಸ್ವಾತಂತ್ರ ಹೋರಾಟದಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿರುವ ಈ ದೇಶದ ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ಆರ್ಎಸ್ಎಸ್ ಸಂಘಪರಿವಾರದ ಯೋಜನೆ ಭಾಗ ಈ ಮಸೂದೆಯಾಗಿದೆ. ಕೇಂದ್ರ ಸರಕಾರ ಈ ಮಸೂದೆಯನ್ನು ವಾಪಾಸ್ಸು ಪಡೆದುಕೊಳ್ಳುವವರೆಗೆ ಬೇರೆ ಬೇರೆ ಹಂತದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಸೀದಿಯ ಮೌಲಾನ ರಶೀದ್ ಅಹ್ಮದ್ ನದ್ವಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಮಸೀದಿ ಅಧ್ಯಕ್ಷ ಯಾಸೀನ್ ಸೈಯ್ಯದ್, ಹುಸೇನ್ ಕೋಡಿಬೆಂಗ್ರೆ, ಸಲಾವುದ್ದೀನ್ ಅಬ್ದುಲ್ಲಾ, ಮಸೀದಿ ಸದಸ್ಯ ಖಾಲಿದ್, ಜಅಮಾತೆ ಇಸ್ಲಾಮೀ ಹಿಂದ್ ಉಡುಪಿ ಸ್ಥಾನೀಯ ಕಾರ್ಯದರ್ಶಿ ನಿಸಾರ್ ಉಪ್ಪಿನಕೋಟೆ, ಎಸ್ಐಓ ರಾಜ್ಯ ಪ್ರಮುಖ ಯಾಸೀನ್ ಕೋಡಿಬೆಂಗ್ರೆ, ಪಿಎಫ್ಐ ಜಿಲ್ಲಾಧ್ಯಕ್ಷ ನಝೀರ್ ಅಂಬಾಗಿಲು ಮೊದಲಾದವರು ಉಪಸ್ಥಿತರಿದ್ದರು.
ನೇಜಾರು ಜಾಮೀಯ ಮಸೀದಿಯಲ್ಲಿ , ಆತ್ರಾಡಿ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ಹೂಡೆ ಕದಿಮಿ ಜಾಮೀಯ ಮಸೀದಿ, ಹೂಡೆ ಜದೀದ್ ಜಾಮೀಯ ಮಸೀದಿ, ಬೆಂಗ್ರೆ ಜಾಮೀಯ ಮಸೀದಿ, ಗುಜ್ಜರಬೆಟ್ಟು ಮೊಹಿಯ್ಯುದ್ದೀನ್ ಜುಮಾ ಮಸೀದಿ, ಮಲ್ಪೆ ಜಾಮೀಯ ಮಸೀದಿ, ಮಲ್ಪೆ ಮದೀನಾ ಜಾಮೀಯ ಮಸೀದಿ, ನೇಜಾರು ಉಮ್ಮೆ ಆಯಿಷಾ ಜಾಮೀಯ ಮಸೀದಿ, ದೊಡ್ಡಣಗುಡ್ಡೆ ಜುಮಾ ಮಸೀದಿ, ಆದಿಉಡುಪಿ ಜಾಮೀಯ ಮಸೀದಿ, ಉಡುಪಿ ಶಾಂತಿನಗರ ಮದೀನ ಮಸೀದಿ, ಬ್ರಹ್ಮಾವರ ರಂಗನಕೆರೆ ಜುಮಾ ಮಸೀದಿ, ಕುಂಜಾಲು ನೂರು ಜಾಮೀಯ ಮಸೀದಿಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಗಂಗೊಳ್ಳಿಯ ಕೇಂದ್ರ ಜುಮಾ ಮಸೀದಿ, ಹಾಗೂ ಗಂಗೊಳ್ಳಿ ಮೊಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ಜುಮಾ ನಮಾಝ್ ಬಳಿಕ ಪ್ರತಿಭಟನೆಯನ್ನು ನಡೆಸಲಾಯಿತು. ನಾವುಂದ -ಮರವಂತೆ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ಎಂ ಕೋಡಿ ಬಿಲಾಲ್ ಜುಮಾ ಮಸೀದಿ, ಕೋಟೇಶ್ವರ ಸುಲ್ತಾನ್ ಜುಮಾ ಮಸೀದಿ, ಹೆಮ್ಮಾಡಿ ರಹ್ಮಾನಿ ಜುಮಾ ಮಸೀದಿ, ಮೂಡುಗೋಪಾಡಿ ರಿಫಾಯಿ ಜುಮ್ಮಾ ಮಸೀದಿ, ಕುಂದಾಪುರ ಕೋಡಿ ಮುಹಿಯ್ಯುದ್ದೀನ್ ಜುಮಾ ಮಸೀದಿ, ಹಂಗ್ಳೂರು ಜುಮಾ ಮಸೀದಿ, ಗುಲ್ವಾಡಿ ಮೆಹರಾಜ್ ಜುಮಾ ಮಸೀದಿ, ಬೈಂದೂರು ಜಾಮೀಯ ಮಸೀದಿ, ಕೊಂಬಗುಡ್ಡೆಯ ಜದೀದ್ ಕಲಾನ್ ಜಾಮಿಯಾ ಮಸ್ಜೀದ್ನಲ್ಲಿ , ಮಲ್ಲಾರು ಪಕೀರ್ಣಕಟ್ಟೆಯ ಮುಹಿಯುದ್ದೀನ್ ಜುಮಾ ಮಸೀದಿ, ಕಾಪು ಕೊಪ್ಪಲಂಗಡಿ ಖಾದಿಮ್ ಜಾಮೀಯ ಮಸೀದಿ, ಕೊಂಬಗುಡ್ಡೆ ಗೌಸಿಯಾ ಜಾಮೀಯ ಮಸೀದಿ, ಮಲ್ಲಾರ್ ಅಹ್ಮದಿ ಮೊಹಲ್ಲಾ ಜಾಮೀಯ ಮಸೀದಿ, ಕೊಂಬಗುಡ್ಡೆ ಕಲಾನ್ ಮಸೀದಿಗಳಲ್ಲಿ ಪ್ರತಿಭಟನೆ ನಡೆಸಿ ಪೌರತ್ವ ತಿದ್ದುಪಡಿ ಮಸೂದೆ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.