ಪ್ರಖ್ಯಾತ್ ಶೆಟ್ಟಿ ಸಾರಥ್ಯದ ಪಂಡ್ರೆ ಪೊವೋಡ್ಚಿ ತುಳು ನಾಟಕಕ್ಕೆ ಮುಹೂರ್ತ
ಉಡುಪಿ: ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಸಾರಥ್ಯದಲ್ಲಿ ಸುಮುಖ ಕಲಾವಿದರ ನೂತನ ನಾಟಕ ಪಂಡ್ರೆ ಪೊವೋಡ್ಚಿ ಇದರ ಮಹೂರ್ತವನ್ನು ರಾಜ್ಯ ಯುವಜನ ಸಬಲೀಕರಣ, ಮೀನುಗಾರಿಕೆ, ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಕಲಾವಿದರು ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು, ಪ್ರಖ್ಯಾತ್ ಶೆಟ್ಟಿ ಸಾರಥ್ಯದ ಈ ತಂಡ ಇನ್ನೂ ಬೆಳೆಯಲಿ, ಇದರ ಕಲಾ ಸೇವೆ, ಕಲಾವಿದರು ಇನ್ನಷ್ಟು ಎತ್ತರಕ್ಕೆ ಬೆಳಯಲಿ ಎಂದು ಶುಭ ಹಾರೈಸಿದರು.
ತಂಡದ ಸಾರಥ್ಯ ವಹಿಸಿಕೊಂಡಿರುವ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಕಲೆಗೆ ತೆರೆ ಮರೆಯಲ್ಲಿರುವ ಅದೆಷ್ಟೋ ಕಲಾವಿದರಿಗೆ ಪ್ರೋತ್ಸಾಹ ಸಿಗಲಿ. ತುಳುನಾಡಿನಲ್ಲಿ ತುಳು ಭಾಷೆ ಪ್ರಾಮುಖ್ಯತೆ ಪಡೆಯಲಿ ಎಂಬ ದೃಷ್ಟಿಯಿಂದ ಈ ತಂಡದ ಏಳಿಗೆಗೆ ನಾನು ಸದಾ ಸಿದ್ದನಿದ್ದೇನೆ ಎಂದರು.
ಕುಸಾಲ್ದ ಬಿರ್ಸೆ ಖ್ಯಾತಿಯ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಪಂ ಸದಸ್ಯ ಜನಾರ್ಧನ ತೋನ್ಸೆ, ದಯಾನಂದ ಶೆಟ್ಟಿ ಕೊಜಕುಳಿ, ರತ್ನಾ ಕೆ ಬೆಳ್ಕಲೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ್ ಭಟ್, ತಾಪಂ ಸದಸ್ಯ ಧನಂಜಯ್ ಕುಂದರ್, ಭಾಸ್ಕರ್ ತಂಡದ ನಿರ್ದೇಶಕ ಪ್ರಭಾಕರ ಆಚಾರ್ಯ ಮೂಡುಬೆಳ್ಳೆ, ತಂಡದ ನಿರ್ವಾಹಕ ಸುಭಾಷ್ ಜಿ ರಾವ್ ಉಪಸ್ಥಿತರಿದ್ದರು.
ಪ್ರಖ್ಯಾತ್ ಶೆಟ್ಟಿ ಸ್ವಾಗತಿಸಿದರು. ಅರುಣ್ ಸಾಲ್ಯನ್ ಕಾರ್ಯಕ್ರಮ ನಿರೂಪಿಸಿ ಸುಭಾಷ್ ಜಿ ರಾವ್ ವಂದಿಸಿದರು.