Home Mangalorean News Kannada News ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ

Spread the love

ಪ್ರಜ್ಞಾವಂತ ಸಮಾಜದಲ್ಲಿ ಪ್ರಜ್ಞತೆ ತಪ್ಪುತ್ತಿರುವ ರಾಜಕಾರಣಿ

ಮಾನವ ಓರ್ವ ಸಮಾಜ ಜೀವಿ.ದೈಹಿಕ ಮತ್ತು ಮಾನಸಿಕವಾಗಿ ಮಾನವನಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತಿದ್ದಂತೆಯೇ ಆತ ಎಲ್ಲ ರಂಗದಲ್ಲಿಯೂ ಪರಿಪಕ್ವತೆಯನ್ನು ಗಳಿಸಿರುತ್ತಾನೆ. ಮಾನವನನ್ನು ಯಾಕಾಗಿ ರಾಜಕೀಯ ಜೀವಿ ಕರೆಯುತ್ತಾರೆ ಎಂದು ಅದನ್ನು ವಿಚಾರಶೀಲತೆಯಿಂದ ಗಮನಿಸುವುದಾದರೆ, ಆತನಲ್ಲಿ ಸರಿ ತಪ್ಪುಗಳ ಅರಿವು ಆತನಲ್ಲಿ ಉಂಟಾಗುವುದು ಸಹಜ. 21ನೇ ಶತಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ತೀವ್ರವಾಗಿ ಬೆಳವಣಿಗೆ ಹೊಂದಿದ್ದಾಗ ಮಾನವನಲ್ಲಿ ವೈಚಾರಿಕ ಮತ್ತು ವೈಜ್ಞಾನಿಕತೆಯ ಅರಿವು ಹತ್ತಿರವಾದಂತೆ, ವಿಜ್ಞಾನದ ಆವಿಷ್ಕಾರದಿಂದಾಗಿ ಬದುಕಿನ ದಿಕ್ಕನ್ನು ಮಾರ್ಪಡಿಸಿದಷ್ಟೆ ಅಲ್ಲ ಬದಲಾಗಿ ಇಂದು ಮಾನವನ ಚಿಂತನೆಯ ದಿಕ್ಕು ಬದಲಾಗಿದೆ.

ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಜನರು ಮತ್ತು ಸರಕಾರ ಮಧ್ಯೆ ಸಂಪರ್ಕ ಮತ್ತು ಸಂಬಂಧ ಹೊಂದಬೇಕಾದರೆ ಅಲ್ಲೊಂದು ರಾಜಕೀಯ ವ್ಯವಸ್ಥೆ ರೂಪುಗೊಳ್ಳಬೇಕಾಗುತ್ತದೆ. ಈ ಕಾರಣದಿಂದ ಇಂದು ಹಲವಾರು ರಾಷ್ಟ್ರಗಳಲ್ಲಿ ರಾಜಕೀಯ ಪ್ರಕ್ರಿಯೆ ಮತ್ತು ವ್ಯವಸ್ಥೆಗಳ ಕಾರಣದಿಂದಾಗಿ ರಾಜಕೀಯ ನೆಲೆಗಟ್ಟಿನ ಪ್ರಜಾತಾಂತ್ರಿಕ ವ್ಯವಸ್ಥೆ ಜಗತ್ತಿನಾದ್ಯಂತ ನೆಲೆಯೂರಿದೆ. ಕೆಲ ರಾಷ್ಟ್ರಗಳನ್ನು ಹೊರತುಪಡಿಸಿ ಏಕೆಂದರೆ ಅದು ಇನ್ನೂ ಸರ್ವಾಧಿಕಾರಿ ಆಡಳಿತದ ಕಪಿಮುಷ್ಟಿಯಲ್ಲಿದೆ.

ಪ್ರಜಾತಂತ್ರ ವ್ಯವಸ್ಥೆಯಿಂದ ರಾಜಕೀಯ ನಾಯಕರಿಗೆ ಒಂದು ವೇದಿಕೆಯಾಗಿ ರೂಪುಗೊಂಡ ಬಳಿಕ ಅನೇಕ ಪಕ್ಷಗಳಾಗಿ, ನಾಯಕರಾಗಿ,ಮತ್ತು ಕಾರ್ಯಕರ್ತರಾಗಿ ರೂಪುಗೊಂಡಾಗ ಅಲ್ಲೊಂದು ಅಧಿಕಾರವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಪ್ರಚಾರದ ಹಣಾಹಣಿ ನಡೆಯುತ್ತದೆ.ಜನಾಭಿಪ್ರಾಯವನ್ನು ಗಳಿಸಲು ತೀವ್ರವಾದ ಚರ್ಚೆ ನಡೆಯುತ್ತದೆ. ಇದೇ ಸಮಯದಲ್ಲಿ ಜನಸಾಮಾನ್ಯರ ಚಿತ್ತದಲ್ಲಿಯೂ ರಾಜಕೀಯ ಪ್ರಜ್ಞಾವಂತಿಕೆ ಬೆಳೆದಿರುತ್ತದೆ. ಆತನಲ್ಲಿ ರಾಜಕೀಯ ಚರ್ಚೆ ಮತ್ತು ಲೆಕ್ಕಚಾರದ ವಾಗ್ವಾದವು ಆತನ ಅಥವಾ ಆಕೆಯ ಮನಸ್ಸಿನಲ್ಲಿ ಬೇರೂರುತ್ತ ಹೋಗುತ್ತದೆ. ಜನಸಾಮಾನ್ಯರ ಆಕಾಂಕ್ಷೆ , ಬೇಡಿಕೆ ಮತ್ತು ಹಿತಾಸಕ್ತಿಯನ್ನು ಪ್ರತಿನಿಧಿಸುವ ವ್ಯಕ್ತಿಗಳು, ಜನದನಿಯ ಅದುಮಿಟ್ಟ ಆಕಾಂಕ್ಷೆಗಳು ಹಾಗೂ ಕಲ್ಯಾಣವನ್ನು ಸಾಧಿಸುವ ಪ್ರಕ್ರಿಯೆಗೆ ರಾಜಕೀಯ ವ್ಯಕ್ತಿ ತನ್ನೊಳಗೆ ಮತ್ತು ತನಗೆ ತೋಚಿದಂತೆ ಅವರ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ಮಾಡುತ್ತಾನೆ. ಆದರೆ 21ನೇ ಶತಮಾನದಲ್ಲೂ ಮಾನವನು ರಾಜಕೀಯ ವ್ಯಕ್ತಿಗಳ ಬಲೆಗೆ ಸಿಲುಕಿದ್ದಾನೆಯೇ ಎಂಬ ಸಂದೇಹ ದಟ್ಟನೆ ಆವರಿಸ ತೊಡಗಿದೆ. ರಾಜಕೀಯ ವ್ಯಕ್ತಿಗೆ ತನ್ನ ಲಾಭಗೋಸ್ಕರ, ಹಣದ ಲಾಲಸೆಯಿಂದ, ಅಧಿಕಾರದ ಮದಕ್ಕಾಗಿ ಕನಿಷ್ಠ ಪಕ್ಷ ಪ್ರಜೆ ಮತ್ತು ಜನಪ್ರತಿನಿಧಿಗಳ ನಡುವಣ ಇರುವ ಹೊಣೆಗಾರಿಕೆಯನ್ನು ಮರೆತನೆ ಎಂಬ ಪ್ರಜ್ಞೆ ದಟ್ಟವಾದಗ, ಜನರ ಮನಸ್ಸಿನಲ್ಲಿ ಇನ್ನೂ ಅರಿವಾಗಿರುವುದಿಲ್ಲ ನಾನು ರಾಜಕೀಯ ವ್ಯಕ್ತಿಗಳ ಮೋಸದ ಬಲೆಗೆ ಸಿಲುಕಿ ಬಿದ್ದನೆಂದು.ಕಾರಣ ಈ ದೇಶದಲ್ಲಿ ಅನೇಕ ಹೋರಾಟಗಾರರು ರಾಜಕೀಯ ವ್ಯಕ್ತಿಗಳಾಗಿ ರೂಪುಗೊಂಡಾಗ ಅಲ್ಲೊಂದು ಆಶಾಭಾವನೆ ಜನಸಾಮಾನ್ಯರಲ್ಲಿತ್ತು .

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ಆಶಾವಾದಿತನವನ್ನು ನಿರೀಕ್ಷಿಸುವುದು ಸಹಜ. ಆದರೆ ಇಂದು ಆಗುತ್ತಿರುವುದೇ ಬೇರೆ ರಾಜಕೀಯ ಒಂದು ವೇದಿಕೆಯಾಗಿ ನಿರ್ಮಾಣವಾದಗ ಸಮಾಜದಲ್ಲಿ ರಾಜಕಾರಣಿಯಾಗಿ ಮೆರೆದು ಲಾಭ, ಅಧಿಕಾರ ಮತ್ತು ಅಂತಸ್ತು ನ್ನು ಹೆಚ್ಚಿಸಿ ಸಮುದಾಯದೊಳಗೆ ರಾರಾಜಿಸುವ ವ್ಯಕ್ತಿಯಾಗಿ ನಿರ್ಮಾಣಗೊಳ್ಳುವ ಪ್ರಕ್ರಿಯೆಯಲ್ಲಿ ರಾಜಕಾರಣಿಗಳಿಗೆ ಇಂದು ರಾಜಕೀಯ ವ್ಯವಸ್ಥೆ ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೇದಿಕೆಯಾಗಿ ರೂಪುಗೊಂಡಿದೆ.ಕಾರಣವಿಷ್ಟೆ ಜನಸಾಮಾನ್ಯನ ಪ್ರಜ್ಞಾವಂತಿಕೆಯನ್ನು ಅಲ್ಲಗೆಳೆಯಲಾಗದು ಏಕೆಂದರೆ ಆತನಲ್ಲಿ ಸರಿ ತಪ್ಪುಗಳ ವಿಶ್ಲೇಷಿಸುವ ಸಾಮರ್ಥ್ಯವಿದೆ.ಸಾಧಕ ಮತ್ತು ಬಾಧಕಗಳನ್ನು ಕೂಲಂಕಷ ನೆಲೆಯಲ್ಲಿ ಪರಿಶೀಲನೆ ಮಾಡುವ ಶಕ್ತಿ ಇರುವ ಕಾರಣದಿಂದ ತಾನು ರಾಜಕಾರಣದಲ್ಲಿ ರಾಜಕಾರಣಿಯಿಂದ ಮೋಸ ಹೋಗುತ್ತಿದ್ದೇನೆ ಎಂಬ ಅರಿವು ಕ್ರಮೇಣ ಆತನಲ್ಲಿ ಪರಿಜ್ಞಾಪಿಸುತ್ತದೆ. ಆದರೆ ರಾಜಕಾರಣಿ ಸಮುದಾಯದೊಳಗೆ ಉತ್ತಮವಾದ ಜನಪ್ರತಿನಿಧಿವಾಗಬೇಕಾದರೆ ಆತನಲ್ಲಿ ನೈತಿಕ ಪ್ರಜ್ಞೆ ಯ ವ್ಯಕ್ತಿತ್ವ ವನ್ನು ಬೆಳೆಸಿಕೊಂಡಿರಬೇಕಾಗುತ್ತದೆ. ತನಗೂ ಒಂದಷ್ಟು ಜವಾಬ್ದಾರಿಗಳಿವೆ, ಅಧಿಕಾರವನ್ನು ತೀರಾ ವಿವೇಚನಶೀಲತೆಯಿಂದ ಬಳಸುವ ಪ್ರಮೇಯವನ್ನ ಪ್ರತಿಷ್ಠಾಪಿಸಬೇಕೆಂಬ ಅರಿವು ರಾಜಕಾರಣಿಯಲ್ಲಿ ಇರಬೇಕಾಗುತ್ತದೆ. ತನ್ನ ಅಧಿಕಾರ ಮತ್ತು ಜವಾಬ್ದಾರಿ ಸಾಮಾಜಿಕವಾದುದೇ ವಿನಃ ವೈಯಕ್ತಿಕವಾದುದಲ್ಲ . ತನಗೆ ಸಿಕ್ಕಿರುವ ಅಧಿಕಾರ ಸಮಾಜದ ಕೊಡುಗೆ ಎಂಬ ಕನಿಷ್ಠ ಪರಿಜ್ಞಾನವಿದ್ದರೆ ಮಾತ್ರ ಸಮುದಾಯದೊಳಗೆ ಉತ್ತಮ ರಾಜಕಾರಣಿ ಆಗಬಲ್ಲರು.ಧರ್ಮ ,ಜಾತಿ ಮತ್ತು ಸೈದ್ಧಾಂತಿಕ ತತ್ವಗಳಿಗೆ ಯಾವುದೇ ಬೆಲೆ ಕಟ್ಟದೆ ಪ್ರಜೆಗಳನ್ನು ಸಮಾನವಾಗಿ ಕಂಡಾಗ ಮಾತ್ರ ನಿಜವಾದ ರಾಜಕಾರಣಿಯ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸಾಧ್ಯ .ಪ್ರಸ್ತುತ ಸನ್ನಿವೇಶ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸುವಾಗ, ರಾಜಕೀಯ ಆದರ್ಶ ಮತ್ತು ಮೌಲ್ಯವಿರುವ ನಿಜವಾದ ಜನಪರ ಕಾಳಜಿಯಿಂದ ಕೂಡಿರುವ ರಾಜಕಾರಣಿಗೆ ಇಂದು ಬೆಲೆಯಿಲ್ಲ. ಯಾರಲ್ಲಿ ಆರ್ಥಿಕ ಬಲ್ಯಾಡತನವಿದೆಯೋ ಅಂತಹ ರಾಜಕಾರಣಿಗಳಿಗೆ ಇಂದು ಬೆಲೆಯಿದೆ. ಕರ್ತವ್ಯ ಪ್ರಜ್ಞೆ ಯನ್ನು ನಿರಾಕರಿಸುವ ರಾಜಕಾರಣಿಗಳು ಇಂದು ಭ್ರಷ್ಟಾಚಾರ ,ಲೈಂಗಿಕ ಹಗರಣದಲ್ಲಿ ಮತ್ತು ಆಡಳಿತ ಸೇಚ್ವಾಚರದಲ್ಲಿ ಮರೆಯುವುದು ಕಾಣಬಹುದು. ರಾಜಕಾರಣಿಗಳ ಅಧಿಕಾರದ ಜಂಜಾಟದಲ್ಲಿ ಬಡಪಾಯಿ ಆಗಿರುವುದು ಮುಗ್ಧ ನಾಗರಿಕರು ಮಾತ್ರ ಕಾರಣ ಅತ್ತ ನಿರೀಕ್ಷೆ ಮತ್ತು ಬೇಡಿಕೆ ಈಡೇರಿಕೆಯಾಗದೆ ನಿರಾಶವಾದಿತನವನ್ನು ಜನಸಾಮಾನ್ಯರಿಗೆ ಅನಿಸಿದರೆ ಪ್ರಜಾತಂತ್ರದಲ್ಲಿ ರಾಜಕಾರಣಿಗಳ ಬೆಲೆ ಅಲ್ಪ ಸ್ವಲ್ಪ.

ಮಾನವನ ತನ್ನ ಆಶೋತ್ತರಗಳನ್ನು ಪ್ರಜಾತಂತ್ರದ ನೆಲೆಯಲ್ಲಿ ಪೂರೈಸಿಕೊಳ್ಳಲು ಸಹಕಾರಿಯಾಗುವಂತೆ ಸೃಷ್ಟಿಸಿಕೊಂಡಿರುವ ಸಾಧನವೇ ರಾಜಕೀಯ. ರಾಜಕೀಯದ ಮೋಸತ್ವ ಹೋಗಲಾಡಿಸಿ ನಿಜವಾದ ಮಾನವೀಯ ಕಾಳಜಿವುಳ್ಳ ರಾಜಕಾರಣಿಯನ್ನು ಸದಾ ನಿರೀಕ್ಷಿಸುತ್ತದೆ ಎಂಬುದನ್ನು ರಾಜಕಾರಣಿ ಆಗಿದ್ದವರು ,ಆಗಲೂ ಬಯಸುವವರು ಎಂದಿಗೂ ಮರೆಯದಿರಿ.

ಬರಹ : ನವಾಫ್ ಅಮ್ಮುಂಜೆ


Spread the love

Exit mobile version