ಪ್ರಣಾಳಿಕೆ: ಸಮೃದ್ಧ ಉಡುಪಿ-ಚಿಕ್ಕಮಗಳೂರು ಜೆಪಿ ಹೆಗ್ಡೆ ಕನಸು

Spread the love

ಪ್ರಣಾಳಿಕೆ: ಸಮೃದ್ಧ ಉಡುಪಿ-ಚಿಕ್ಕಮಗಳೂರು ಜೆಪಿ ಹೆಗ್ಡೆ ಕನಸು

ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರಿನ ಸಮೃದ್ಧ ಅಭಿವೃದ್ಧಿ ನನ್ನ ಕನಸಾಗಿದೆ. ಇದಕ್ಕಾಗಿ ಮಲೆನಾಡು, ಬಯಲುಸೀಮೆ, ಕರಾವಳಿಯ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆಯ ಮೂಲಕ ನನ್ನ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಜೆಪಿ ಹೆಗ್ಡೆ ಪ್ರಣಾಳಿಕೆ ಹೈಲೈಟ್ಸ್ ಈ ಕೆಳಗಿನಂತಿದೆ

  1. ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಅಭಿವೃದ್ಧಿ
  • ನಿಷ್ಕ್ರಿಯವಾಗಿರುವ ‘ಅಡಿಕೆ ಸಂಶೋಧನಾ ಕೇಂದ್ರ’ವನ್ನು ಕ್ರಿಯಾಶೀಲವಾಗುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದು.
  • ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ನೇಮಿಸಿದ್ದ ಗೋರಖ್ ಸಿಂಗ್ ವರದಿಯ ಅನುಷ್ಠಾನಕ್ಕಾಗಿ ಪ್ರಯತ್ನಿಸುವುದು.
  • ಅಡಿಕೆ ಬೆಳೆಯನ್ನು ಕಾಡುತ್ತಿರುವ ಎಲೆಚುಕ್ಕಿ ರೋಗದ ಶಾಶ್ವತ . ನಿವಾರಣೆಗಾಗಿ ಸಂಶೋಧನೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದು.
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆ.ಎಮ್.ಎಫ್ ಹಾಲಿನ ಘಟಕ ಸ್ಥಾಪಿಸಿ ಹೈನುಗಾರಿಕೆಗೆ ಉತ್ತೇಜನ ನೀಡುವುದು.
    ‘ನೀರಾ’ ಅನೌಪಚಾರಿಕ ಉದ್ಯೋಗವನ್ನು ಸೃಷ್ಟಿಸಲು ಕೃಷಿ ಕಾರ್ಯಕ್ರಮ.
  • ಮಲೆನಾಡಿನ ಕೃಷಿ ಉತ್ಪನ್ನಗಳಿಗೆ ಜಾಗತಿಕ ಬ್ರಾಂಡ್ (ಜಿ. ಟ್ಯಾಗ್) ನೀಡಲು ಕ್ರಮಕೈಗೊಳ್ಳುವುದು.
  • ತರೀಕೆರೆ ತಾಲ್ಲೂಕಿನ ಇತರ ಪ್ರಮುಖ ಬೆಳೆಗಳಾದ ಈರುಳ್ಳಿ ಹಾಗೂ ಇತರ ತರಕಾರಿಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಿಸಲು ಪ್ರೋತ್ಸಾಹ ನೀಡಲು ಸೂಕ್ತ ಕ್ರಮಕ್ಕಾಗಿ ಪ್ರಯತ್ನ.
  • ವರ್ಷವಾರು ಕೃಷಿ ಮೇಳ,

2. ಮಲೆನಾಡು ಅಭಿವೃದ್ಧಿ

  • ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು.
  • ಮಲೆನಾಡಿನ ಜನ ಪರಂಪರೆಯ ವಾಸ ಸ್ಥಳಗಳನ್ನು ಪುನರ್ ಸರ್ವೆ ಮಾಡಿ ಪ್ರತ್ಯೇಕ ಮಜೆರಗಳನ್ನು ಗುರುತಿಸಿ ಅಲ್ಲಿರುವ ಮನೆಗಳನ್ನು ಕ್ರಮಬದ್ಧವಾದ ನಿವೇಶನವೆಂದು ತೀರ್ಮಾನಿಸಿ ನಮೂನೆ 9 ಮತ್ತು 11 ಎ ನೀಡಲು ಪ್ರಯತ್ನಿಸುವುದು.
  • ಪ್ರತಿ ವರ್ಷ ಏಪ್ರಿಲ್ 15 ರಂದು ‘ಮಲೆನಾಡ ದಿನ’ವನ್ನಾಗಿ ಆಚರಿಸಿ, ಮಲೆನಾಡಿನ ಜನ ಜೀವನ, ಕೃಷಿ, ಪರಂಪರೆ, ಜನಪದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ಈ ಕಾರ್ಯಕ್ರಮಕ್ಕೆ ವಿಶೇಷ ಅನುದಾನ ನೀಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದು.
  • ಪಶ್ಚಿಮ ಘಟ್ಟ ತಪ್ಪಲಿನ ಮಲೆನಾಡು ಪ್ರದೇಶವನ್ನು ವಿಶೇಷ ಕೃಷಿವಲಯವಾಗಿ ಘೋಷಿಸಲು ಸೂಕ್ತ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು.

3. ನಿವೇಶನರಹಿತ ಹಾಗೂ ಭೂರಹಿತರಿಗೆ ಸೌಲಭ್ಯ

  • ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಜಮೀನನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೊಂದಿಗೆ ವ್ಯವಹರಿಸುವುದು.
  • ರೈತರು, ನೆಲವಾಸಿಗಳು ಸರಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡಿರುವ ಕೃಷಿ ಪ್ರದೇಶವನ್ನು ಕಾನೂನಿನ ನಿರ್ಭಂದಗಳನ್ನು ಸರಳೀಕರಣಗೊಳಿಸಿ ಭೂ ಮಂಜೂರಾತಿಗೆ ಅವಕಾಶ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳುವುದು.
  • ಪಾರಂಪರಿಕ ಅರಣ್ಯ ಕಾಯ್ದೆಯಡಿ ಭೂ ಮಂಜೂರಾತಿಯ ಕಾಲ ಮಿತಿಯನ್ನು ಅವಶ್ಯಕ ಪ್ರಸಕ್ತ 75 ವರ್ಷಗಳ ದಾಖಲೆಗಳನ್ನು 25 ವರ್ಷಕ್ಕೆ ಇಳಿಸಿ ಅರಣ್ಯವಾಸಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ
  • ಅರಣ್ಯ ಕಾಯಿದೆಯ ಸೆಕ್ಷನ್ 4 ಉದ್ಯೋಷಣೆಗೆ ಗ್ರಾಮ ಸಭೆಗಳ ಪೂರ್ವಾನುಮತಿ ಪಡೆಯದೇ ಇರುವುದರಿಂದ ಸದರಿ ಉದ್ಯೋಷಣೆಯನ್ನು ಸಂಪೂರ್ಣವಾಗಿ ವಾಪಸ್ಸು ಪಡೆಯುವಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು.

4. ಮೀನುಗಾರಿಕೆ ಅಭಿವೃದ್ಧಿ

  • ಅಳಿವೆ ಮತ್ತು ಬಂದರಿನ ಡ್ರಜ್ಜಿಂಗ್ ಹಾಗೂ ಬ್ರೇಕ್ ವಾಟರ್ ಯೋಜನೆಗಳಿಗೆ ಒತ್ತು ಕೊಡುವುದು. ಮೀನುಗಾರಿಕಾ ಬಂದರಿನ ತ್ಯಾಜ್ಯ ಶೀಘ್ರ ವಿಲೇವಾರಿಗೆ ಒತ್ತು ನೀಡಿ ಬಂದರಿನ ಸ್ವಚ್ಚತೆಗೆ ಆದ್ಯತೆ ನೀಡುವುದು.
  • ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಮೀನುಗಾರಿಕಾ ಕಾರ್ಮಿಕರಿಗೂ ವಿಸ್ತರಿಸಲು ಪ್ರಯತ್ನಿಸುವುದು. ಸಾಂಪ್ರದಾಯಿಕ ಮಹಿಳಾ ಮೀನುಗಾರರಿಗೆ ಬಡ್ಡಿರಹಿತ ಸಾಲ ನೀಡಿ ಮೀನು ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುವುದು.
  • ನಿವೃತ್ತ ಮೀನುಗಾರರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದು.
  • ನಾಡ ದೋಣಿಗಳಿಗೆ ನೀಡುತ್ತಿರುವ ಸೀಮೆ ಎಣ್ಣೆ ಸಹಾಯಧನವನ್ನು ಲೀಟರೊಂದಕ್ಕೆ 35 ರೂಪಾಯಿಯಿಂದ ಕನಿಷ್ಠ 50 ರೂಪಾಯಿಗೆ ಹೆಚ್ಚಿಸುವ ಪ್ರಯತ್ನ.
  • ಸಂಕಷ್ಟ ಪರಿಹಾರ ಸಹಾಯಧನವನ್ನು ರೂ. 10 ಲಕ್ಷಕ್ಕೆ ಹಾಗೂ ಮತ್ಸಾಶ್ರಯ ಯೋಜನೆಯ ಸಹಾಯಧನವನ್ನು 5 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸುವುದು.
  • ಪ್ರಧಾನಿ ಮತ್ಸಾ ಸಂಪದ ಯೋಜನೆಯ ಸದುಪಯೋಗಕ್ಕೆ ಶ್ರಮಿಸುವುದು.
  • 1984ರ ಮೀನುಗಾರಿಕಾ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಪ್ರಸಕ್ತ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ತರುವುದು.
  • ಮೀನುಗಾರಿಕೆಗೆ ಸಂಬಂಧಪಟ್ಟ ಎಲ್ಲಾ ಇನ್ಸೂರೆನ್ಸ್ ಕ್ಷೇಮ್ಗಳನ್ನು ಕಾಲಮಿತಿಯೊಂದಿಗೆ ಪಾವತಿ ಮಾಡಲು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು.
  • ಡೀಸೆಲ್ ಪಾಸ್ ಪುಸ್ತಕ ಹಾಗೂ ಲೈಸೆನ್ಸ್ ಮರುನವೀಕರಣಗಳನ್ನು ಸರಳೀಕರಣಗೊಳಿಸುವುದು.
  • ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ಹವಾಮಾನ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಲು ಪ್ರಯತ್ನಿಸುವುದು.
  • ಮೀನುಗಾರಿಕೆಗೆ ಅನುಕೂಲವಾಗುವಂತೆ ಅಂತರರಾಜ್ಯ ಸಮನ್ವಯ ಸಮಿತಿಯನ್ನು ರಚಿಸಲು ಪ್ರಯತ್ನಿಸುವುದರೊಂದಿಗೆ ದೇಶದ ಪಶ್ಚಿಮ ಕರಾವಳಿಯ ಏಕರೂಪ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
  • ಕೆ.ಎಸ್.ಡಿ.ಸಿ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಲು ಪ್ರಯತ್ನ.
  • ಅಧಿಕ ಮೀನುಗಾರಿಕೆ ಹಾಗೂ ಬೋಟ್ ಇಂಜಿನ್ ಅಶ್ವಶಕ್ತಿಗನುಗುಣವಾಗಿ ವಾರ್ಷಿಕ ಕೋಟಾ ಹೆಚ್ಚಿಸುವುದು ಹಾಗೂ ಕನಿಷ್ಠ ದಿನವಹಿ 500 ಲೀಟರ್ ಡೀಸೆಲ್ ನೀಡಲು ಪ್ರಯತ್ನಿಸುವುದು.
  • ಆಯಾಯ ಬಂದರಿನ ಮೀನುಗಾರಿಕೆಗೆ ಸಂಬಂಧಪಟ್ಟ ಸುರ್ಮಿ, ಫಿಲ್, ಐಸ್ ಪ್ಲಾಂಟ್ ಮುಂತಾದ ಕಾರ್ಖಾನೆಗಳನ್ನು ಪ್ರಾರಂಭ ಮಾಡಲು ಪ್ರೋತ್ಸಾಹಿಸುವುದು.
  • ರಾಜ್ಯದಲ್ಲಿ ನಡೆಯುತ್ತಿರುವ ಹೊರ ರಾಜ್ಯದ ಅಕ್ರಮ ಮೀನುಗಾರಿಕೆಯನ್ನು ನಿಷೇಧಿಸುವುದು.

5. ಮೂಲಭೂತ ಸೌಕರ್ಯ ಅಭಿವೃದ್ಧಿ

  • ಮಲೆನಾಡಿಗೆ ಪೂರಕವಾಗಿರುವ ಮಿನಿ ಬಸ್ ಸಂಪರ್ಕ ಜಾಲವನ್ನು ವಿಸ್ತರಿಸುವಂತೆ ಕೆ.ಎಸ್.ಆರ್.ಟಿ.ಸಿ.ಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದು.
  • ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ “ಏರ್ ಸ್ಟ್ರಿಪ್” ನಿರ್ಮಾಣಕ್ಕೆ ಪ್ರಯತ್ನ.
  • ಬಂದರಿನ ಸಂಪರ್ಕ ರಸ್ತೆಗಳ ಅಭಿವೃದ್ಧಿ.
  • ಬಂದರುಗಳಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಲು ಹೈಟೆಕ್ ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ.
  • ರಾಜ್ಯದ ಎಲ್ಲಾ ಮೀನುಗಾರಿಕಾ ಬಂದರುಗಳ ವಿಸ್ತರಣೆಗೆ ಕಾರ್ಯಕ್ರಮ ರೂಪಿಸುವುದು.

6. ಪ್ರವಾಸೋದ್ಯಮ ಅಭಿವೃದ್ಧಿ

  • ಕರಾವಳಿ ಹಾಗೂ ಮಲೆನಾಡಿಗೆ ಪೂರಕವಾಗುವ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತೆ ‘ಪ್ರವಾಸೋದ್ಯಮ ನೀತಿ’ಯನ್ನು ರೂಪಿಸುವಂತೆ ಕ್ರಮ ಕೈಗೊಳ್ಳುವುದು.
  • ಹೋಂ ಸ್ಟೇಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ಆಗುತ್ತಿರುವ ಕಾನೂನಿನ ನಿರ್ಭಂದಗಳನ್ನು ಸರಳೀಕರಣಗೊಳಿಸಿ, ಈ ಉದ್ಯಮಕ್ಕೆ ಪ್ರೋತ್ಸಾಹ ನೀಡುವುದು.
  • ಸಮುದ್ರ ತೀರದ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಕಾನೂನಿನ ತೊಡಕನ್ನು ನಿವಾರಿಸಿ ‘ಪರಿಸರ ಸ್ನೇಹಿ’ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರಯತ್ನಿಸುವುದು.ದೇವಾಲಯ ಪ್ರವಾಸೋದ್ಯಮ ಅಭಿವೃದ್ಧಿ.
  • ಮಲೆನಾಡು ಹಾಗೂ ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಪ್ರಯತ್ನ.

7. ಕೈಗಾರಿಕಾ ಅಭಿವೃದ್ಧಿ

  • ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೈಗಾರಿಕಾ ನಿವೇಶನಗಳ ಕೊರತೆಯಿದ್ದು, ಕೈಗಾರಿಕೆಗಳಿಗೆ ಸೂಕ್ತ ಕೈಗಾರಿಕಾ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ.
  • ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಜಾಗದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಪ್ರಯತ್ನ
  • ಮಲೆನಾಡು ಭಾಗದಲ್ಲಿ ಕೃಷಿ ಪೂರಕ ಉದ್ಯಮದ ಸ್ಥಾಪನೆಗೆ ವಿಶೇಷ ಕಾರಿಡಾರ್ ಸ್ಥಾಪಿಸಲು ಪ್ರಯತ್ನ.
  • ಕೃಷಿ ಕೈಗಾರಿಕಾ ವಲಯದ ಮಾದರಿಯಲ್ಲಿ ಮೀನುಗಾರಿಕಾ ಕೈಗಾರಿಕಾ ವಲಯ ನಿರ್ಮಾಣಕ್ಕಾಗಿ ಪ್ರಯತ್ನಿಸುವುದು.
  • ರಫ್ತು ಉತ್ತೇಜಿಸಲು ಸಮುದ್ರ ಆಹಾರ ಸಂಸ್ಕರಣಾ ವಲಯ ಮತ್ತು ಶೇಖರಣಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ.
  • ರಫ್ತು ನ್ನು ಉತ್ತೇಜಿಸಲು 10 ವಿಭಿನ್ನ ಕೃಷಿ ಮತ್ತು ಕೈಗಾರಿಕಾ ಉತ್ಪನ್ನವನ್ನು ಗುರುತಿಸುವುದು.
  • ‘ನೀರಾ’ ಕ್ಷೇತ್ರದಾದ್ಯಂತ 5 ವಿವಿಧ ಸ್ಥಳಗಳಲ್ಲಿ ಶುದ್ದೀಕರಣ ಘಟಕ/ಸ್ಟೋರೇಜ್ ಕ್ಲಸ್ಟರ್.ವರ್ಷವಾರು ಉದ್ಯೋಗ ಮೇಳ

8. ಆರೋಗ್ಯ ಮತ್ತು ಶಿಕ್ಷಣ

  • ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಉಡುಪಿ ಜಿಲ್ಲೆಯಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಉಪಯೋಗವಾಗುವಂತೆ ಶೀಘ್ರವಾಗಿ ಸುಸಜ್ಜಿತ ಇ.ಎಸ್.ಐ ಆಸ್ಪತ್ರೆ ಸ್ಥಾಪಿಸಲು ಪ್ರಯತ್ನಿಸುವುದು.
  • ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಪ್ರಯತ್ನಿಸುವುದು.
  • ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳುವುದು.
  • ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಸಜ್ಜಿತ ‘ಸ್ಪೋರ್ಟ್ಸ್ ಕಾಂಪ್ಲೆಕ್ಸ್’ ನಿರ್ಮಾಣಕ್ಕೆ ಪ್ರಯತ್ನಿಸುವುದು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾಫಿ ಮತ್ತಿತರ ವಾಣಿಜ್ಯ ಬೆಳೆಗಳಿಗೆ ಪ್ರಸಿದ್ಧವಾಗಿದ್ದು ರಾಜ್ಯಕ್ಕೆ, ದೇಶಕ್ಕೆ ಕೊಡುಗೆ ನೀಡಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಹಿಂದಿರುತ್ತದೆ. ಕ್ಷೇತ್ರವು ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು ಸರಕಾರದಿಂದ ವಿಶೇಷ ಅನುದಾನ ಪಡೆದು ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇಚ್ಚಿಸಿಲಾಗಿದೆ

  1. ಕಾಫಿ ಬೆಳೆಯುವ ಪ್ರದೇಶಗಳಿಗೆ ಜಮೀನು ವಶಪಡಿಸುವಂತಹ ಮಾರಕ SARFAESI ಕಾಯ್ದೆ ಅನ್ವಯವಾಗಿದ್ದು, ಕಾಫಿ ಬೆಳೆಗಾರರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರ ತರಲು ಪ್ರಯತ್ನ
  2.  ಕೇಂದ್ರ ಸರ್ಕಾರ ಸಾಮ್ಯದ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಕಾಫಿ ಬೆಳೆಗಾರರಿಗೆ/ರೈತರಿಗೆ ಬಡ್ಡಿದರ ವಾರ್ಷಿಕ ಶೇಕಡಾ 9.5%-12% ತನಕ ಇದ್ದು, ಈ ಬಡ್ಡಿಯನ್ನು ಶೇಕಡಾ 4% ಅಷ್ಟು ಇಳಿಸಲು ಪ್ರಾಮಾಣಿಕ ಪ್ರಯತ್ನ.
  3. ಫಾರಂ ನಂ. 53,57 94ಸಿ-ಗಳ ಅಡಿಯಲ್ಲಿ ಭೂರಹಿತರಿಗೆ, ಸಣ್ಣ ರೈತರಿಗೆ ರೈತ ಕಾರ್ಮಿಕರಿಗೆ ಜಮೀನುಗಳ/ಮನೆಗಳ ಮತ್ತು ಕಟ್ಟಡ ಮಂಜೂರಿಗೆ ಬಾಕಿ ಇರುವ ಕಡತಗಳನ್ನು ಶಾಸಕರ ಸಹಕಾರದೊಂದಿಗೆ ಅತೀ ಶೀಘ್ರದಲ್ಲಿ ಪೂರ್ಣಗೊಳಿಸಲು ಪ್ರಯತ್ನ.
  4. ಮೂಡಿಗೆರೆ, ಶೃಂಗೇರಿ ಮತ್ತು ಇತರ ಭಾಗಗಳಲ್ಲಿ ಚುಕ್ಕಿ ರೋಗ ಮತ್ತು ಹಳದಿ ರೋಗಗಳಿಂದ ಅಡಿಕೆ ತೋಟಗಳು ನಾಶವಾಗಿದ್ದು, ಅವುಗಳ ನಿಯಂತ್ರಣಕ್ಕೆ ಅನುದಾನ ತಂದು ಪೌಷ್ಠಿಕಾಂಶ ಮತ್ತು ರೋಗ . ನಿರ್ವಹಣೆಗೆ ಒತ್ತು.
  5. ಅತಿವೃಷ್ಟಿ /ಅನಾವೃಷ್ಟಿ ಸಂದರ್ಭಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ NDRF/SDRFF ನಲ್ಲಿ ಈಗಿರುವ 2 ಹೆಕ್ಟೇರ್ ವ್ಯಾಪ್ತಿಯನ್ನು 10 ಹೆಕ್ಟೇರ್ವರೆಗೆ ವಿಸ್ತರಿಸಲು ಪ್ರಯತ್ನ.
  6. ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆ ಅನೇಕ ಬಾರಿ ನಾಶ ಆಗಿದ್ದು, ಹವಾಮಾನ ಅಧಾನಿತ/ಬೆಳೆನಾಶ ಆಧಾರಿತ ಇನ್ಸೂರೆನ್ಸ್ ತರುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

Spread the love