ಪ್ರತಿಯೊಬ್ಬರೂ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಹಾಗೂ ಬದ್ಧತೆಯಿದ್ದಾಗ ಮಾತ್ರ ಆ ಗುರಿಯನ್ನು ತಲುಪಲು ಸಾಧ್ಯ – ಪ್ರೇಮಕರಿಪ್ಪ
ಮೂಡಬಿದಿರೆ: ಪ್ರತಿಯೊಬ್ಬರೂ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಹಾಗೂ ಬದ್ಧತೆಯಿದ್ದಾಗ ಮಾತ್ರ ಆ ಗುರಿಯನ್ನು ತಲುಪಲು ಸಾಧ್ಯ. ಗುರಿ ತಲುಪುವ ಮಾರ್ಗದಲ್ಲಿ ಎದುರಾಗುವ ಸವಾಲುಗಲನ್ನು ಎದುರಿಸಿ ಧೈರ್ಯದಿಂದ ಮುನ್ನಡೆದಾಗ ಜೀವನದಲ್ಲಿ ಎನನ್ನಾದರೂ ಸಾಧಿಸಬಹುದು ಎಂದು ಮಾಜಿ ರಾಜ್ಯಸಭಾ ಸದಸ್ಯೆ ಪ್ರೇಮಕರಿಪ್ಪ ಅವರು ಹೇಳಿದರು.
ಇವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ನಡೆದ `ಆಳ್ವಾಸ್ ರೀಚ್ 2019′ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
19ನೇ ಶತಮಾನದಲ್ಲಿ ಆರಂಭವಾದ ಈ ಸಮಾಜ ಕಾರ್ಯ ಎಂಬ ಪರಿಕಲ್ಪನೆಯು ಸಾಮಾಜಿಕ ಬದಲಾವಣೆ ಹಾಗೂ ಜನಸಮುದಾಯದ ಸಬಲೀಕರಣವನ್ನು ಪ್ರೇರೆಪಿಸುವ ಒಂದು ಉತ್ತಮ ಮಾಧ್ಯಮವಾಗಿದೆ. ಸಮಾಜವನ್ನು ಆರೋಗ್ಯಯುತವಾಗಿಸುವಲ್ಲಿ ಸಾಮಾಜಿಕ ಕಾರ್ಯಕರ್ತರು ಪ್ರಮುಖ ಪಾತ್ರವಹಿಸುತ್ತಾರೆ. ಸಾಮಾಜಿಕ ಕಾರ್ಯಗಳ ಕಾರ್ಯ ವಿಧಾನ ಬೇರೆಯಾಗಿದ್ದರೂ ಅದರ ಉದ್ದೇಶ ಒಂದೇ ಯಾಗಿರುತ್ತದೆ. ಇಂದಿನ ದಿನಗಳಲ್ಲಿ ಗಂಡು ಹಾಗೂ ಹೆಣ್ಣಿನ ನಡುವೆ ಯಾವುದೇ ತಾರತಮ್ಯವಿಲ್ಲದೇ ಗಂಡಿನಷ್ಟೇ ಹೆಣ್ಣು ಕೂಡ ಸಮಾಜದ ಪ್ರತಿಯೊಂದು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಭಿವೃದ್ದಿ ಹೊಂದಿದ್ದಾರೆ. ಮಾತ್ರವಲ್ಲ ಸಮಾಜ ಸೇವಾ ವಿಭಾಗದಲ್ಲೂ ಮುಂಚೂಣಿಯಲ್ಲಿದ್ದಾಳೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದೆಹಲಿ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ. ಸಂಜಯ್ ಭಟ್ ಅವರು ಮಾತನಾಡಿ, ಸಮಾಜ ಸೇವೆಯೆಂಬುದು ಖುಷಿಯನ್ನು ಹಂಚಿ ಖುಷಿಯನ್ನು ಪಡೆಯುವ ಸಾಧನ. ವಿಶ್ವದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ವಿವಿಧ ವಿಷಯಗಳಲ್ಲಿ ಸಮಾಜ ಕಾರ್ಯ ವಿಷಯವೊಂದೆ ಹೆಚ್ಚು ಸಮಾಜಮುಖಿ ಚಿಂತನೆಯನ್ನು ಒಳಗೊಂಡಿರುವ ಪಠ್ಯಕ್ರಮ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾಲ್ಕು ‘ಸಿ’ ಗಳು ಪ್ರಮುಖವಾಗಿದ್ದು, ಕಮಿಟ್ಮೆಂಟ್, ಕಂಪೇಷನ್, ಕಮ್ಯೂನಿಕೇಶನ್, ಚ್ಯೇಂಜ್ ಮುಖ್ಯವಾಗಿವೆ. ಜೀವನದಲ್ಲಿ ಸಮಾಜಸೇವೆಯೆಂಬುದು ಪ್ರತಿಯೊಬ್ಬರಿಗೂ ಸಿಗುವ ಅವಕಾಶ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ, ತಮ್ಮ ಜೀವನದಲ್ಲಿ ಆಳವಡಿಸಿಕೊಂಡ ಸ್ವಶಿಸ್ತು ಹಾಗೂ ಸತತ ಪ್ರಯತ್ನದಿಂದ ಯಶಸ್ಸನ್ನು ಹೊಂದಲು ಸಾಧ್ಯವಾಯಿತು. ಇಂತಹ ವ್ಯಕ್ತಿತ್ವ ಪ್ರತಿಯೊಬ್ಬ ಸಾಧಕನಿಗೂ ಆದರ್ಶಪ್ರಾಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಕುರಿಯನ್, ಸಮಾಜಕಾರ್ಯವೆಂಬುದು ಇತರ ಕ್ಷೇತ್ರಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುವ ಕ್ಷೇತ್ರವಾಗಿದ್ದು, ಸಾಮಾಜಿಕ ಮಟ್ಟವನ್ನು ಅಭಿವೃದ್ದಿಗೊಳಿಸುತ್ತದೆ. ಇದೊಂದು ಉನ್ನತವಾದ ವೃತ್ತಿಯಾಗಿದ್ದು ದೇಶದ ಜನತೆಯ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಮಾಜದ ಮಾನಸಿಕ ಸ್ಥಿತಿಯು ಬದಲಾಗುತ್ತಿರವುದರಿಂದ ಅದನ್ನು ಸರಿದಾರಿಗೆ ತರುವಲ್ಲಿ ಈ ಸಾಮಾಜಿಕ ಕಾರ್ಯವು ಸಹಾಯ ಮಾಡುತ್ತದೆ ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆಯುವ ಈ ವಿಚಾರ ಸಂಕಿರಣದಲ್ಲಿ ತುಮಕೂರು ವಿಶ್ವವಿದ್ಯಾನಿಲಯ, ಮರಿಯನ್ ಕಾಲೇಜು ಕೇರಳ, ಜೆಎಸ್‍ಎಸ್ ಕಾಲೇಜು ಮೈಸೂರು, ಎಸ್‍ಡಿಎಮ್ ಕಾಲೇಜು ಉಜಿರೆ ಹೀಗೆ 33 ಕಾಲೇಜು ಗಳಿಂದ 323 ವಿದ್ಯಾರ್ಥಿಯರು ಭಾಗವಹಿಸಿದ್ದಾರೆ.
ವಿವಿಧ ಕಾಲೇಜುಗಳ 55ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳು, ಸಂಶೋಧನಾ ವಿದ್ವಾಂಸರು ವಿಷಯ ಮಂಡನೆ ಮಾಡಿದರು.
ಕಲಾ ವಿಭಾಗದ ಡೀನ್ ಸಂಧ್ಯಾ ಕೆ ಎಸ್, ಮೇಘಾಲಯದ ಡಾ ನವೋಮಿ ಎಂ ಸಂಗ್ಮಾ, ರೀಚ್2019 ರ ಕಾರ್ಯಕ್ರಮದ ಸಂಯೋಜಕಿ ಪವಿತ್ರ ಪ್ರಸಾದ್, ಬಿಎಸ್‍ಡಬ್ಲ್ಯೂ ವಿಭಾಗದ ಡಾ ಮಧುಮಲಾ ಇವರು ಉಪಸ್ಧಿತರಿದರು. ಉಪನ್ಯಾಸಕಿ ಸ್ವಪ್ನರವರು ಸ್ವಾಗತಿಸಿ, ವಿದ್ಯಾರ್ಥಿಗಳಾದ ಸನಿಕಾ ಹಾಗೂ ಮನ್ಮಥಾ ನಿರೂಪಿಸಿದರು.