Home Mangalorean News Kannada News ಪ್ರತಿಯೊಬ್ಬ  ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡುತ್ತಾರೆ – ಆದರ್ಶ್ ಶೆಣೈ 

ಪ್ರತಿಯೊಬ್ಬ  ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡುತ್ತಾರೆ – ಆದರ್ಶ್ ಶೆಣೈ 

Spread the love

ಪ್ರತಿಯೊಬ್ಬ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡುತ್ತಾರೆ – ಆದರ್ಶ್ ಶೆಣೈ 

ವಿದ್ಯಾಗಿರಿ: ಪ್ರತಿಯೊಬ್ಬ ಪ್ರಜೆಯೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡುತ್ತಾರೆ. ಈ ತೆರಿಗೆಯಿಂದ ಬಂದ ಹಣದಿಂದಲೇ ಸರಕಾರ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಎಂದು ಸಿ.ಎ. ಆದರ್ಶ್ ಶೆಣೈ ತಿಳಿಸಿದರು.

ಆಳ್ವಾಸ್ ಕಾಲೇಜಿನ ಪದವಿ ವಾಣಿಜ್ಯ ವಿಭಾಗದ ವತಿಯಿಂದ ನಡೆದ ‘ಟ್ಯಾಕ್ಸೇಶನ್ ಫೆಸ್ಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಜನಸಾಮಾನ್ಯರು ಕಷ್ಟಪಟ್ಟು ದುಡಿದು ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಅದರಲ್ಲಾಗುವ ಲಾಭ ನಷ್ಟಗಳನ್ನು ಅರಿಯದೇ ಹೋಗುತ್ತಾರೆ. ಹೆಚ್ಚಿನ ಜನಸಾಮಾನ್ಯರಿಗೆ ತಾವು ಕಟ್ಟುವ ತೆರಿಗೆ ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದರ ಅರಿವಿರುವಿದಿಲ್ಲ. ಆದರೆ ತೆರಿಗೆಯಿಂದ ದೇಶಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಅರಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಾಣಿಜ್ಯ ವಿಭಾಗದ ಸಂಯೋಜಕಿ ಶರ್ಮಿಳ ಕುಂದರ್, ತೆರಿಗೆ ವಿಭಾಗದ ಮುಖ್ಯಸ್ಥೆ ಛಾಯಾ. ಎನ್, ಕಾರ್ಯಕ್ರಮ ಸಂಯೋಜಕ ದೀಕ್ಷಿತ್. ಎಂ. ಕೆ., ವಿದ್ಯಾರ್ಥಿ ಸಂಯೋಜಕಿ ಸ್ವಾತಿ ಕಿಣಿ ಉಪಸ್ಥಿತರಿದ್ದರು. ಜಸ್ಟಿನ್ ನಿರೂಪಿಸಿ, ನಿಶ್ಚಿತ ಸ್ವಾಗತಿಸಿ, ದೀಕ್ಷಾ ವಂದಿಸಿದರು.


Spread the love

Exit mobile version