Home Mangalorean News Kannada News ಪ್ರತಿರೋಧ ಶಕ್ತಿ ಪ್ರವೃದ್ಧಿಗೆ ಪೂರಕ ಶಾಸನ ತರಲು ಪುತ್ತಿಗೆ ಸ್ವಾಮೀಜಿ ಒತ್ತಾಯ

ಪ್ರತಿರೋಧ ಶಕ್ತಿ ಪ್ರವೃದ್ಧಿಗೆ ಪೂರಕ ಶಾಸನ ತರಲು ಪುತ್ತಿಗೆ ಸ್ವಾಮೀಜಿ ಒತ್ತಾಯ

Spread the love

ಪ್ರತಿರೋಧ ಶಕ್ತಿ ಪ್ರವೃದ್ಧಿಗೆ ಪೂರಕ ಶಾಸನ ತರಲು ಪುತ್ತಿಗೆ ಸ್ವಾಮೀಜಿ ಒತ್ತಾಯ

ಪ್ರಪಂಚವನ್ನೇ ಅಲ್ಲೋಲಕಲ್ಲೋಲ ಗೊಳಿಸಿ ತತ್ತರಿಸಿ ಹಾಕಿ, ದೇಶ-ವಿದೇಶಗಳ ಭವಿಷ್ಟಗಳನ್ನೇ ಛಿದ್ರ ವಿಚ್ ಛಿದ್ರಗೊಳಿಸಿದ ಕಣ್ಣಿಗೆ ಕಾಣದ ಕೊರೋನಾ ವೈರಸ್ನ ಈ ಮಹೋಪದ್ರವಕ್ಕೆ ಲಕ್ಷಾಂತರ ಜನಗಳಂತೆ ನಾವೂ ಒಳಗಾಗಿ ಈ ಮಧ್ಯೆ ಇಂತಹ ಮಹಾ ಸಮಸ್ಯೆ ಶಾಶ್ವತ ಪರಿಹಾರದ ಬಗ್ಗೆ ನೂ ಚಿಂತಿಸುತ್ತಿರುವಾಗ ಇದೀಗ ಭಗವದ್ಗೀತೆ ಹಾಗೂ ನಮ್ಮ ಸನಾತನ ಧರ್ಮಶಾಸ್ತ್ರಗಳು ಅದ್ಭುತ ಸೂಚನೆಯನ್ನು ಇದಕ್ಕೆ ಪ್ರಮುಖ ಪರಿಹಾರವನ್ನಾಗಿ ಅನುಭವದಿಂದ ಕಂಡುಕೊಂಡು ನಾವು ದಿಗ್ಗಾ ದೆವು.

ನಿಮಗೆ ಕೊರೋನಾ ವೈರಸ್ ಬಾಧಿಸುವುದು ಶುರುವಾಗಿದ್ದು ಕೆಮ್ಮುವಿನ ಮುಖಾಂತರ ಪ್ರತಿನಿತ್ಯ ಬೆಳಿಗ್ಗೆ 4 ಗಂಟೆಗೆ ಸರಿಯಾಗಿ ಕೆಮ್ಮು ಪ್ರಾಂಭವಾಗುವುದನ್ನು ಗಮನಿಸಿದ ನಾವು, ಅದು ಯಾಕೆ ಬೆಳಿಗ್ಗೆ ನಿಗದಿತ ಸಮಯಕ್ಕೆ ಕೆಮ್ಮು ಪ್ರಾರಂಭವಾಗುತ್ತದೆ ಎಂದು ತಜ್ಞರನ್ನು ವಿಚಾರಿಸಿದಾಗ, ಅವರು ತಿಳಿಸಿದರು “ನನಗೆ ನಿದ್ದೆ ವಿಳಂಬವಾಗಿ ಶುರುವಾಗುವುದರಿಂದ ಹಾಗಾಗುತ್ತದೆ” ಎಂದು. ಅದರಂತೆ ನಾವು ಪ್ರಯತ್ನ ಪಟ್ಟು ರಾತ್ರಿ 9 ಗಂಟೆಯೊಳಗೆ ಬೇಗ ಮಲಗಿದರೆ, ಆ ಕೆಮ್ಮು ಪ್ರಮಾಣ ಇಳಿಮುಖವಾದದ್ದನ್ನು ಕಂಡು ಆಶ್ಚರ್ಯ ಪಟ್ಟೆವು. ನಂತರ ನಾವು ಈ ಬಗ್ಗೆ ವಿಶೇಷ ಅಧ್ಯಯನ ಮಾಡಿದಾಗ, ಮನುಷ್ಯನ ಪ್ರತಿರೋಧ ಶಕ್ತಿಗೂ, ನಿದ್ರಾ ಸಮಯಕ್ಕೂ ನೇರ ಸಂಬಂಧ ಇದೆ ಎಂಬುದನ್ನು ಕಂಡುಕೊಂಡೆವು. ನಾವು ನಮ್ಮ ಪ್ರತಿನಿತ್ಯದ ಸಾರ್ವಜನಿಕ ಕಾರ್ಯಕ್ರಮ ಹಾಗೂ ನಿರಂತರ ಪ್ರಪಂಚ ಪರ್ಯಟನದಿಂದ ಎಂದೂ ರಾತ್ರಿ 11-12ರೊಳಗೆ ನಿದ್ರಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ನಿದ್ರೆ ಸಮಯ ಹಾಗೂ ಆಹಾರದ ಬಗ್ಗೆ ಅನಿವಾರ್ಯವಾಗಿ ನಾವು ದಿವ್ಯ ಉಪೇಕ್ಷೆ ಯನ್ನು ಹೊಂದಿದ್ದೇವೆ. ಕೊರೊನಾ ಬಾಧೆ ಪ್ರಾರಂಭವಾದಾಗ ಅದಕ್ಕಾಗಿಯೇ ನಾವು ಮಣಿಪಾಲ ಆಸ್ಪತ್ರೆಗೆ ಸೇರಿ, ಬೇಗ ನಿದ್ರೆ, ಬೇಗ ಉತ್ಥಾನದ
ಬಗ್ಗೆ ಅಭ್ಯಾಸ ಮಾಡಲು ತೆರಳಿದ್ದು, ಈ ಸಮಯದಲ್ಲಿ ರಾತ್ರಿ 8ರಿಂದ ಬೆಳಿಗ್ಗೆ 4ರೊಳಗೆ ಮಾಡುವ ನಿದ್ರೆಯಿಂದ ವಿಶೇಷವಾಗಿ ದೇಹದಲ್ಲಿ ಪ್ರತಿರೋಧ ಶಕ್ತಿ ಜಾಗೃತವಾಗುವುದನ್ನೂ, ಅದರ ಅನುಭವವನ್ನು ಕಂಡುಕೊಂಡೆವು.

ಈ ಬಗ್ಗೆ ನಾವು ಇದೀಗ ಶಾಸ್ತ್ರೀಯವಾಗಿ ಚಿಂತಿಸಿದಾಗ, ಗೀತೆಯಲ್ಲಿ ಕೃಷ್ಣ ಆರೋಗ್ಯದ ಬಗ್ಗೆ ಕೇವಲ ಯುಕ್ತಾಹಾರ ವಿಹಾರಸ್ಯ, ಯುಕ್ತ ಸ್ವಪ್ನಾವಬೋಧಸ್ಯ ಎಂದೂ ಯುಕ್ತ ಸಮಯದ ಆಹಾರ ನಿದ್ರೆ ಮಾತ್ರ ಮಹತ್ವ ಕೊಟ್ಟದ್ದನ್ನು ಗುರುತಿಸಿ ಮನುಷ್ಯನ ಪ್ರತಿರೋಧ ಶಕ್ತಿಯನ್ನು ವೃದ್ಧಿಸುವ ಸಕಾಲ ಆಹಾರ, ಸಕಾಲ ನಿದ್ರೆ ಅದುವೇ ಮನುಷ್ಯನ ದೇಹ ಮನಸ್ಸಿನ ಸ್ವಾಸ್ಥ್ಯದ ಮೂಲ ಎಂದು ಸೂಚಿಸಿದ್ದನ್ನು ಗಮನಿಸುತ್ತಿದ್ದೇವೆ. ಈ ಅಂಶವನ್ನು ಯಾರು ಬೇಕಾದರೂ ಅನುಸರಿಸುವ ಮೂಲಕ ಅನುಭವಕ್ಕೆ ತಂದುಕೊಳ್ಳಬಹುದಾಗಿದೆ.

ಆ ಹಿನ್ನೆಲೆಯಲ್ಲಿ ಹಿಂದಿನವರು ಸೂರ್ಯಾಸ್ತಕ್ಕಿಂತ ಮೊದಲು ಆಹಾರ ಸೇವನೆ ಹಾಗೂ ರಾತ್ರಿ 8 ಗಂಟೆಯೊಳಗೆ ಮಲಗಿ, ಬೆಳಿಗ್ಗೆ 4 ಗಂಟೆಯೊಳಗೆ ಏಳುವ ಪದ್ಧತಿಯನ್ನು ಎತ್ತಿಹಿಡಿದಿದೆ ಅದೆಷ್ಟು ಪ್ರಯೋಜನಕಾರಿ, ಅದೆಷ್ಟು ಪ್ರಭಾವಕಾರಿ, ಅದಷ್ಟು ವೈಜ್ಞಾನಿಕ ಎಂದು ಮನಗಂಡೆವು, ನಾವು ನಮ್ಮ ಬಾಲ್ಯದ 12ನೇ ವರ್ಷದಲ್ಲಿ ಸಂನ್ಯಾಸ ಸ್ವೀಕರಿಸಿ ಇದೀಗ 59ನೇ ವಯಸ್ಸಿನಲ್ಲಿ ನಿರಂತರ 47 ವರ್ಷ ಶುದ್ಧ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಬಂದರೂ, ಆಹಾರ ಸ್ವೀಕಾರದ ಸಮಯ ಹಾಗೂ ನಿದ್ರಾ ಸಮಯಗಳ ಬಗ್ಗೆ ಮಹತ್ವ ಕೊಡದೆ ಯದ್ವಾತದ್ವಾ ದಿನಚರಿಯನ್ನು ಅನುಸರಿಸಿದ್ದರಿಂದ ಎಂದೂ ರಾತ್ರಿ 11-12ರ ಒಳಗೆ ಮಲಗಲು ಸಾಧ್ಯವಾಗದಿದ್ದರಿಂದ ನನಗೆ ಇಷ್ಟು ಕಟ್ಟುನಿಟ್ಟಾಗಿ ಸಾತ್ವಿಕ ಜೀವನ ನಡೆಸಿ ಈ ನಿದ್ರಾಹಾರಗಳ ವ್ಯತ್ಯಾಸ ದಿಂದ ಪ್ರತಿರೋಧ ಶಕ್ತಿ ಪೂರ್ಣ ಕುಂಠಿತವಾಗಿ ಕೊರೊನಾದಂತಹ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವುದನ್ನು ಇದೀಗ ಮನಗಂಡಿದ್ದೇವೆ.

ನಿದ್ರಾಹಾರಗಳು ಎಷ್ಟು ಮುಖ್ಯವೋ, ಅವುಗಳ ಸಕಾಲಿಕತೆ ಹಾಗೂ ನಿರ್ದಿಷ್ಟ ಸಮಯ ಹಾಗೂ ಹಗಲು ನಿದ್ರೆಯ ಪರಿತ್ಯಾಗ ಆರೋಗ್ಯದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯ ಎಂದು ನಮಗೆ ಈಗ ಅನುಭವಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ಕೊರೋನಾದಿಗಳಿಗೆ ಲಸಿಕೆ, ಔಷಧಿ ಕಂಡುಹಿಡಿದರು ಮನುಷ್ಯನಲ್ಲಿ ಪ್ರತಿರೋಧ ಶಕ್ತಿಯನ್ನು ಬಲಗೊಳಿಸುವ ನಿಯಮಗಳನ್ನು ಪರಿಪಾಲನೆ ಮಾಡಿದರೆ ಕೊರೊನಾ ನೂ ನಿರ್ಮೂಲವಾಗಲಿಕ್ಕಿಲ್ಲ. ಕೊರೊನಾದಂತಹ ಇನ್ನಷ್ಟು ಬೇರೆ ಬೇರೆ ಸಮಸ್ಯೆಗಳು ಉದ್ಗತವಾಗಬಲ್ಲವು ಕೂಡಾ. ಈಗಾಗಲೇ ತನ್ನ ಕೊರೊನಾ ಕುತಂತ್ರ ಪ್ರಯೋಗದಿಂದ ಆಂತರಿಕವಾಗಿ ಉತ್ಸಾಹ ಗೊಂಡ ಚೀನಾ ದೇಶ ಪಾಕಿಗೆ ಕುಮ್ಮಕ್ಕು ಕೊಟ್ಟ, ಇದನ್ನು ಮೂರು ವರ್ಷಗಳಲ್ಲಿ ಕೊರೊನಾಕ್ಕಿಂತ ಭೀಕರವಾದ ಜೈವಿಕ ಅಸ್ತ್ರವನ್ನು ತಯಾರು ಮಾಡುವ ಸಿದ್ಧತೆಯಲ್ಲಿರುವ ವಾರ್ತೆ ಈಗಾಗಲೇ ಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯರಲ್ಲಿ ಪ್ರಜೆಗಳಲ್ಲಿ ಹಾಗೂ ಯೋಧರಲ್ಲಿ ಪ್ರತಿರೋಧ ಶಕ್ತಿಯ ಸಂವರ್ಧನೆಗೆ ವಿಶೇಷ ಮಹತ್ವವನ್ನು ಕೊಡಬೇಕಾಗಿದ್ದು, ಅದರಂತೆ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಪುನಾರೂಪಿಸಿದಂತೆ ಸರಕಾರಗಳು ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಪುನರ್ ನವೀಕರಿಸುವಂತಹ ಯೋಗ ಪ್ರಾಣಾಯಾಮ ಆಯುರ್ವೇದ ಗಳಿಗೆ ಹಾಗೂ ಸಕಾಲ ವಿಶೇಷ ಮಹತ್ವ ಮಾಡತಕ್ಕಂತಹ ತುರ್ತು ಇದೀಗ ಬಂದಿದೆ ಎಂದು ನನಗನಿಸುತ್ತಿದೆ.

ಈ ನಿಟ್ಟಿನಲ್ಲಿ ಪ್ರತಿರೋಧ ಶಕ್ತಿಯ ಪುನರುತ್ಥಾನಕ್ಕೆ ಪ್ರಮುಖ ಕಾರಣಗಳು ಸಕಾಲ ಆಹಾರ ಹಾಗೂ ಸಕಾಲನಿದ್ರೆ ಅರ್ಥಾತ್ ಸೂರ್ಯಾಸ್ತಕ್ಕಿಂತ ಮೊದಲು ಆಹಾರ ಸೇವನೆಯ ಮುಕ್ತಾಯ ಹಾಗೂ ರಾತ್ರಿ 8ರಿಂದ ಬೆಳಿಗ್ಗೆ 4ರ ತನಕ ರಾಷ್ಟ್ರೀಯ ವಿಶ್ರಾಂತಿಯ ಸಮಯ ಎಂದು ಘೋಷಿಸಿ ಈ ನಿದ್ರಾ ಸಮಯದಲ್ಲಿ ಯಾವುದೇ ಟಿವಿ ಪ್ರಸಾರ ಮನೋರಂಜನಾ ಕಾರ್ಯಕ್ರಮ ಗಳನ್ನೆಲ್ಲಾ ನಿರ್ಬಂಧಿಸಿ ರಾತ್ರಿ ವಿಶ್ರಾಂತಿ ಸಮಯಕ್ಕೆ ತೊಂದರೆಯಾಗುವ ರಾತ್ರಿ ಪ್ರಯಾಣ ಗಳನ್ನು ನಿಷೇಧಿಸಿ, ದೇಶದ ಆರೋಗ್ಯ ರಕ್ಷಣೆಗಾಗಿ ಲಾಕ್ಡೌನಿನಂತಹ ಕಠಿಣ ಕ್ರಮಗಳನ್ನು ಶಾಸನಗಳನ್ನು ತರಬೇಕು ಎಂಬುದು ನಮ್ಮ ಬಲವಾದ ಪ್ರತಿಪಾದನೆಯಾಗಿದೆ. ಇದರಿಂದ ದೇಶದ ಅಭಿವೃದ್ಧಿಗೆ ವೇಗ ದೊರಕಲಿದ್ದು, ಬಲಿಷ್ಠ ಭಾರತದ ನಿರ್ಮಾಣ ಸಾಕಾರವಾಗಲಿದ್ದು, ಪ್ರಪಂಚದ ಉಳಿದ ಜನರಿಗೆ ಇದು ಪ್ರೇರಕವಾಗಿದೆ.

ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಪಣ ತೊಟ್ಟಿರುವ ಮೋದಿ ಸರ್ಕಾರ ಈ ಒಂದು ಸಕಾಲ ನಿದ್ರಾ, ಸಕಾಲ ಆಹಾರ ಪದ್ಧತಿಯನ್ನು ಜನರು ತಪ್ಪದೇ ಪಾಲಿಸುವಂತೆ ತಮ್ಮ ಆಧುನಿಕ ಜೀವನಶೈಲಿಯನ್ನು ಬದಲಿಸುವಂತೆ ಮಾಡಲು ಪೂರಕ ಶಾಸನಾತ್ಮಕ ಕ್ರಮಗಳನ್ನು ಜಾರಿಗೆ ತರಬೇಕೆಂದು ಕೊರೊನಾ ಪೀಡಿತರು ನಾವು ನಮ್ಮ ಒತ್ತಾಯಿಸುತ್ತಿದ್ದೇವೆ. ಸಾಮಾನ್ಯವೆನಿಸಿದರೂ ಅದ್ಭುತ ಪರಿಣಾಮ ನೀಡುವ ನಿರ್ಧಾರಗಳ ಈ ಸಕಾಲ ತೆಗೆ ಸರಕಾರ ವಿಶೇಷ ಗಮನಹರಿಸಲೆಂದು ಒತ್ತಾಯಿಸುತ್ತಿದ್ದೇವೆ.

ಬರಹ : ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು


Spread the love

Exit mobile version