ಪ್ರತ್ಯೇಕ ಗಾಂಜಾ ಪ್ರಕರಣ – ಇಬ್ಬರ ಬಂಧನ
ಮಂಗಳೂರು: ನಗರದ ದಂಬೇಲ್ ನದಿ ಕಿನಾರೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೋಲಿಸರು ಹಾಗೂ ಉರ್ವ ಠಾಣಾ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಅಭಿಷೇಕ್ (22), ರಕ್ಷಿತ್ (18) ಎಂದು ಗುರುತಿಸಲಾಗಿದೆ.
ಬಂಧಿತರ ವಿರುದ್ದ ಉರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ನಗರದ ಕೋಡಿಕಲ್ ಕ್ರಾಸ್ ಬಳಿ ವಿನಿತ್ ಜಲನ್ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಅನಧೀಕೃತವಾಗಿ ಬೆಳೆದ 12 ಅಡಿ ಎತ್ತರದ ಒಂದು ಗಾಂಜಾ ಗಿಡವನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೋಲಿಸರು ಪತ್ತೆ ಹಚ್ಚಿ ಕಾವೂರು ಪೋಲಿಸ್ ಠಾಣೆಗೆ ವರದಿ ನೀಡಿದ ಅದರ ಪ್ರಕರಣ ದಾಖಲಾಗಿದೆ.