Home Mangalorean News Kannada News ಪ್ರಮೋದ್ ಅವರಿಗೆ ನನ್ನ ವಿರುದ್ದ ಸಿವಿಲ್ ಮಾನನಷ್ಟ ಕೇಸ್ ಹಾಕುವ ಧಮ್ ಇಲ್ಲ – ಟಿ...

ಪ್ರಮೋದ್ ಅವರಿಗೆ ನನ್ನ ವಿರುದ್ದ ಸಿವಿಲ್ ಮಾನನಷ್ಟ ಕೇಸ್ ಹಾಕುವ ಧಮ್ ಇಲ್ಲ – ಟಿ ಜೆ ಆಬ್ರಾಹಾಂ

Spread the love

ಪ್ರಮೋದ್ ಅವರಿಗೆ ನನ್ನ ವಿರುದ್ದ ಸಿವಿಲ್ ಮಾನನಷ್ಟ ಕೇಸ್ ಹಾಕುವ ಧಮ್ ಇಲ್ಲ – ಟಿ ಜೆ ಆಬ್ರಾಹಾಂ

ಉಡುಪಿ: ವರ್ಷದ ಹಿಂದೆ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮೇಲೇ ಬ್ಯಾಂಕಿಂಗ್ ಹಗರಣದ ಆರೋಪ ಕೇಳಿಬಂದಿತ್ತಿ. ಆರ್ ಟಿ ಐ ಕಾರ್ಯಕರ್ತ ಟಿ ಜೆ ಅಬ್ರಾಹಾಂ ಅವರು ಪ್ರಮೋದ್ ಅವರ ಮೇಲೆ .1.10 ಕೋಟಿ ಮೌಲ್ಯದ ಜಮೀನಿಗೆ ಸಿಂಡಿಕೇಟ್ ಬ್ಯಾಂಕ್ನಿಂದ .193 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಪ್ರಮೋದ್ ಕೂಡ ಅಬ್ರಹಾಂ ವಿರುದ್ದ ರೂ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿಕೆ ನೀಡಿದ್ದರು ಆದರೆ ಈಗ ಮತ್ತೆ ಲೋಕ ಸಭಾ ಚುನಾವಣೆಯ ವೇಳೆ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಪ್ರಮೋದ್ ಮಧ್ವರಾಜ್ ವಿರುದ್ದ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಅಬ್ರಹಾಂ ಪ್ರಮೋದ್ ಅವರು ಮಾನನಷ್ಟ ಮೊಕದ್ದಮೆ ಬದಲು ಕ್ರಿಮಿನಲ್ ಕೇಸು ಹಾಕಿದ್ದಾರೆ ಎಂದು ಹೇಳೀದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು ಪ್ರಮೋದ್ ನನ್ನ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದರು ಆದರೆ ಮಾನನಷ್ಟ ಮೊಕದ್ದಮೆ ಬದಲು ಕ್ರಿಮಿನಲ್ ಕೇಸು ಹಾಕಿದ್ದಾರೆ. ನಾನು 9 ಬಾರಿ ಕೋರ್ಟಿಗೆ ಹಾಜರಾಗಿದ್ದೇನೆ ಆದರೆ ಅವರು ಒಂದು ಬಾರಿಯೂ ಹಾಜರಾಗಿಲ್ಲ ಬದಲಾಗಿ ಅವರ ವಕೀಲರನ್ನು ಮಾತ್ರ ಕಳುಹಿಸುತ್ತಾರೆ. ಮಧ್ವರಾಜ್ ಬ್ಯಾಂಕ್ ಕಬಳಿಸಿ ಕೋರ್ಟನ್ನು ದುರ್ಬಳಕೆ ಮಾಡಿದ್ದಾರೆ. ಪ್ರಮೋದ್ ಮಧ್ವರಾಜ್ ಅವರಿಗೆ ನನ್ನ ಮೇಲೆ ಕೇಸು ಹಾಕಲು ಹಣವಿಲ್ಲ ಇರಬೇಕು ನಿಜವಾಗಿ ಧಂ ಇದ್ರೆ ಅವರು ನನ್ನ ಮೇಲೆ ಕೇಸು ಹಾಕಬೇಕಿತ್ತು ಇಲ್ಲವೆಂದಾದರೆ ಅವರು ಮಾಡಿರುವುದು ಮೋಸ ಹಗರಣ ಎನ್ನುವುದನ್ನ ಒಪ್ಪಿಕೊಳ್ಳಲಿ ಎಂದರು.

ಅವರಿಗೆ ನನ್ನ ವಿರುದ್ದ ಸಿವಿಲ್ ಕೇಸು ಹಾಕುವ ಧಮ್ ಇಲ್ಲ ಅದಕ್ಕಾಗಿ ನ್ಯಾಯಾಲಯವನ್ನು ಪ್ರಮೋದ್ ಬಳಸಿಕೊಂಡಿದ್ದಾರೆ ಆದರೆ ನಾನು ಈ ಚುನಾವಣೆಯಲ್ಲಿ ಪ್ರಮೋದ್ ವಿರುದ್ದ ಪ್ರಚಾರ ಮಾಡುವ ಮೂಲಕ ಬಳಸಿಕೊಳ್ಳುತ್ತೇನೆ. ಈ ಬಾರಿಯ ಲೋಕಸಭಾ ಚುನಾವಣೇಯಲ್ಲಿ ಪ್ರಮೋದ್ ವಿರುದ್ದ ಬಹಿರಂಗವಾಗಿ ಪ್ರಚಾರ ಮಾಡುತ್ತೇನೆ. ಅವರು ಈ ಬಾರಿ ಠೇವಣಿ ಕಳೆದುಕೊಳ್ಳಲಿದ್ದಾರೆ. ರಾಜ್ಯದ ರೈತರು ಲಕ್ಷ ರೂಪಾಯಿಗೆ ನೇಣು ಹಾಕಿಕೊಳ್ಳುತ್ತಾರೆ ಆದರೆ ಇಂತಹ ಕೆಟ್ಟ ರಾಜಕಾರಣಿಗಳು ಬ್ಯಾಂಕನ್ನು ದುರ್ಬಳಕೆ ಮಾಡಿ ಹಣ ಪಡೆಯುತ್ತಾರೆ. ಇಂತಹವರು ಯಾವುದೇ ಕಾರಣಕ್ಕೂ ಸಂಸತ್ ಪ್ರವೇಶ ಮಾಡಬಾರದು. ನಾನು ವಿಚಾರವನ್ನು ವೈಯುಕ್ತಿಕವಾಗಿ ತೆಗೆದುಕೊಂಡಿದ್ದೇನೆ ಎಂದು ಪ್ರಮೋದ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸವ್ರ್ ಬ್ಯಾಂಕ್ಗೆ ದೂರು ಸಲ್ಲಿಸಿದ್ದು, ಸಿಂಡಿಕೇಟ್ ಬ್ಯಾಂಕ್ನಲ್ಲಿ ಕಡಿಮೆ ಮೌಲ್ಯದ ಆಸ್ತಿಯ ಮೇಲೆ ಭಾರಿ ಮೊತ್ತದ ಸಾಲ ಪಡೆದಿದ್ದಾರೆ. ಉಡುಪಿ ನಗರದ ಹೊರವಲಯದಲ್ಲಿರುವ ಜಾಗವೊಂದಕ್ಕೆ ಚದರಡಿ ಜಮೀನಿಗೆ .19,000 ಗಳಷ್ಟುಸಾಲವನ್ನು ಸಚಿವರಿಗೆ ನೀಡಲಾಗಿದೆ. ಈ ಅವ್ಯವಹಾರದಲ್ಲಿ ಮಲ್ಪೆಯ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಈ ಅವ್ಯವಹಾರಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯ 107, 112, 403, 412, 420, 225 ಸೆಕ್ಷನ್ಗಳಡಿ ಮೊಕದ್ದಮೆ ಹೂಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಆರ್ಬಿಐ ಗವರ್ನರ್ಗೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬರೆದಿರುವ ಪತ್ರದಲ್ಲಿ ಅಬ್ರಹಾಂ ದೂರು ನೀಡಿದ್ದರು. ಅದಕ್ಕೆ ಉತ್ತರವಾಗಿ ಪ್ರಮೋದ್ ಅವರು ಟಿ.ಜೆ.ಅಬ್ರಾಹಾಂ ಅವರು ನನ್ನ ವಿರುದ್ದ ಬ್ಯಾಂಕ್ ವಂಚನೆ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದ್ದು ಮೂರು ದಿನಗಳ ಒಳಗೆ ಮಾಧ್ಯಮಗಳ ಮುಂದೆ ಬಹಿರಂಗ ಕ್ಷಮೆಯಾಚಿಸದಿದ್ದರೆ 10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹೇಳಿಕೆ ನೀಡಿದ್ದರು. ಈಗ ಒಂದು ವರ್ಷದ ಬಳಿಕ ಮತ್ತೆ ಅಬ್ರಾಹಾಂ ಮತ್ತು ಪ್ರಮೋದ್ ನಡುವಿನ ಬ್ಯಾಂಕ್ ಸಂಘರ್ಷ ಚರ್ಚೆಗೆ ಕಾರಣವಾಗಿದೆ.


Spread the love

Exit mobile version