ಪ್ರಮೋದ್ ಮಧ್ವರಾಜ ರಿಗೆ ಪೂರಕ ವಾತಾವರಣ – ಅಶೋಕ್ ಕೊಡವೂರು
ಈಗಾಗಲೇ ಜಿಲ್ಲಾ ಕಾಂಗ್ರೆಸ್‍ನಿಂದ ನಿಯುಕ್ತಿಗೊಂಡ ವೀಕ್ಷಕರು ಹಾಗೂ ಉಸ್ತುವಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ವೀಕ್ಷಕರು ಆಯಾ ಬ್ಲಾಕ್‍ಗಳ ಅಧ್ಯಕ್ಷರುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪ್ರತಿಯೊಂದು ಮನೆಗೂ ಭೇಟಿ ನೀಡಿ ಮತದಾರರಿಗೆ ಪಕ್ಷದ ಚಿಹ್ನೆಯ ಬಗ್ಗೆ ಮಾಹಿತಿ ನೀಡಬೇಕು. ಕ್ಷೇತ್ರವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿಗೆ ಪೂರಕ ವಾತಾವರಣ ಇದ್ದು ಅದನ್ನು ಮತವಾಗಿ ಪರಿವರ್ತಿಸುವಲ್ಲಿ ವೀಕ್ಷಕರು ಹಾಗೂ ಉಸ್ತುವಾರಿಗಳು ಮುತುವರ್ಜಿವಹಿಸಬೇಕು. ಕಾರ್ಯಕರ್ತರು ಪ್ರಥಮ ಸುತ್ತಿನ ಮತಯಾಚನೆ ಸಂಪೂರ್ಣಗೊಂಡ ಬಳಿಕವೇ ಧ್ವಿತೀಯ ಸುತ್ತಿಗೆ ಚಾಲನೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಪಂಚಾಯತ್ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿಯ ವೀಕ್ಷಕರು ಹಾಗೂ ಉಸ್ತುವಾರಿಗಳನ್ನು ಉದ್ದೇಶಿಸಿ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಗಫೂರ್‍ರವರು ಮಾತನಾಡಿ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರ ಬಗ್ಗೆ ಒಳ್ಳೆಯ ಅಭಿಪ್ರಾಯ ಕ್ರೋಡಿಕರಣವಾಗಿದ್ದು ಮೈತ್ರಿ ಪಕ್ಷಗಳಲ್ಲಿ ಆಂತರಿಕ ಸಮಸ್ಯೆಗಳು ಕಂಡುಬಂದರೂ ಜವಾಬ್ದಾರಿಯನ್ನು ಪಡೆದ ಮುಖಂಡರು ಸಮಸ್ಯೆ ಪರಿಹರಿಸುವಲ್ಲಿ ಮುತುವರ್ಜಿವಹಿಸಬೇಕಾಗಿದೆ. ಇನ್ನುಳಿದ ಐದು ದಿನಗಳಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸುವುದರ ಮೂಲಕ ಕಾರ್ಯಪ್ರವೃತ್ತರಾಗಬೇಕಾಗಿದೆ. ಜಿಲ್ಲಾ ಕಾಂಗ್ರೆಸ್ ಪಕ್ಷವು ಪ್ರತೀ ಕ್ಷೇತ್ರಗಳಿಗೆ ಅನುಭವವುಳ್ಳ ಉಸ್ತುವಾರಿ ಹಾಗೂ ವೀಕ್ಷಕರನ್ನು ಆಯ್ಕೆ ಮಾಡಿರುವುದರಿಂದ ಈ ಬಾರಿ ಒಳ್ಳೆಯ ಫಲಿತಾಂಶ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಮುರುಳಿ ಶೆಟ್ಟಿ, ದಿನೇಶ್ ಪುತ್ರನ್, ಪ್ರಖ್ಯಾತ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕಾಪು ದಿವಾಕರ ಶೆಟ್ಟಿ, ಹರೀಶ್ ಕಿಣಿ, ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೊಟ್ಯಾನ್ ಕಾರ್ಕಳ, ರಾಘವ ದೇವಾಡಿಗ, ಹರೀಶ್ ಶೆಟ್ಟಿ ಪಾಂಗಳ, ಸರಸು ಡಿ. ಬಂಗೇರಾ, ಮುನಿಯಾಲು ಉದಯಕುಮಾರ್ ಶೆಟ್ಟಿ, ಮಹಾಬಲ ಕುಂದರ್, ಜ್ಯೋತಿ ಹೆಬ್ಬಾರ್, ಎಮ್.ಪಿ. ಮೊಯಿದಿನಬ್ಬ, ಎನ್. ರಮೇಶ್ ಶೆಟ್ಟಿ ಹಾವಂಜೆ, ಕಿಶೋರ್ ಶೆಟ್ಟಿ ಮಂದರ್ತಿ, ಶಶಿಧರ ಶೆಟ್ಟಿ ಎಲ್ಲೂರು, ಬಿ. ಕುಶಲ್ ಶೆಟ್ಟಿ, ಚಂದ್ರಿಕಾ ಕೇಲ್ಕರ್, ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಕೇಶವ ಕೋಟ್ಯಾನ್, ಪ್ರಶಾಂತ್ ಜತ್ತನ್ನ, ರೋಶನಿ ಒಲಿವರ್, ಜೆರಾಲ್ಡ್ ಡಿ’ಸಿಲ್ವಾ, ಸುರೇಂದ್ರ ಆಚಾರ್ಯ, ಸುನೀಲ್ ಬಂಗೇರಾ, ಇಬ್ರಾಹಿಂ ಮನ್ಹಾರ್, ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.