ಪ್ರಯಾಗ್ ರಾಜ್ : ಮಹಾಕುಂಭ ಮೇಳದಲ್ಲಿ ರೋಹಿತ್‌ಕುಮಾರ್ ಕಟೀಲು, ಮಹೇಶ್ ಶೆಟ್ಟಿ ತೀರ್ಥ ಸ್ನಾನ
ಪ್ರಯಾಗ್ ರಾಜ್ : ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ ಕಾರ್ಕಳದ ಉದ್ಯಮಿಗಳಾದ ರೋಹಿತ್‌ಕುಮಾರ್ ಕಟೀಲು, ತೆಳ್ಳಾರು ಕುಡುಪುಲಾಜೆ ಮಹೇಶ್ ಶೆಟ್ಟಿ ತೀರ್ಥ ಸ್ನಾನ ಮಾಡಿದರು.
ಕರ್ನಾಟಕ ಸರಕಾರದ ರಾಜೋತ್ಸವ ಪ್ರಶಸ್ತಿ ಪುರಸ್ಕೃತ, ಅಂತರಾಷ್ಟ್ರೀಯ ಕ್ರೀಡಾಪಟು, ಚಿತ್ರನಟ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ರಾಷ್ಟ್ರೀಯ ನಿರ್ದೇಶಕರಾಗಿರುವ ರೋಹಿತ್ ಕುಮಾರ್ ಕಟೀಲು ಹಾಗೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದ ಬಿಜೆಪಿ ಉಸ್ತುವಾರಿವಹಿಸಿಕೊಂಡಿದ್ದ ಮುಂಬಯಿಯಲ್ಲಿ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿರುವ ಕಾರ್ಕಳ ತೆಳ್ಳಾರು ನಿವಾಸಿ ಮಹೇಶ್ ಶೆಟ್ಟಿ ಮಹಾಕುಂಭ ಮೇಳಕ್ಕೆ ತೀರ್ಥ ಯಾತ್ರೆ ಕೈಗೊಂಡಿದ್ದರು.
144 ವರ್ಷಗಳಿಗೊಮ್ಮೆ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದೆ. ಜನವರಿ 13ರಿಂದ ಪ್ರಾರಂಭಗೊಂಡು ಫೆಬ್ರವರಿ 26 ರಂದು ನಡೆಯುವ ಮಹಾಶಿವರಾತ್ರಿಯ ದಿನದಂದು ಮಹಾಕುಂಭ ಮೇಳ ಸಂಪನ್ನ ಗೊಳ್ಳಲಿದೆ.
ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಅವರು ಮಾತನಾಡಿ, ಜೀವನದಲ್ಲಿ ಈ ತೀರ್ಥ ಸ್ನಾನವು ನಮ್ಮ ಜನ್ಮ ಪಾವನಗೊಳಿಸಿದೆ ಎಂದು ಸಂತಸ ಹಂಚಿಕೊಂಡರು.