ಪ್ರವಾದಿ ನಿಂದನೆ ಖಂಡನೀಯ: ಪಾಪ್ಯುಲರ್ ಫ್ರಂಟ್
ಮಂಗಳೂರು: ಸುದ್ಧಿವಾಹಿನಿಯೊಂದರ ನಿರೂಪಕ ಅಜಿತ್ ಎಂಬವರು ಚರ್ಚಾ ಕಾರ್ಯಕ್ರಮವೊಂದರಲ್ಲಿ ರಾಮನ ಕುರಿತಾಗಿ ಪುಸ್ತಕ ಬರೆದಿರುವ ಫ್ರೊ. ಕೆ.ಎಸ್.ಭಗವಾನ್ ರನ್ನು ಪ್ರಶ್ನಿಸುವ ಭರದಲ್ಲಿ ಪ್ರವಾದಿ ಮಹಮ್ಮದ್(ಸ) ರನ್ನು ನಿಂದಿಸಿರುವುದು ಪಾಪ್ಯುಲರ್ ಫ್ರಂಟ್ ದ.ಕ ಜಿಲ್ಲಾದ್ಯಕ್ಷ ಮೊಹಮ್ಮದ್ ಹನೀಫ್ ತೀವ್ರವಾಗಿ ಖಂಡಿಸಿದ್ದಾರೆ.
ಸುದ್ಧಿವಾಹಿನಿಯ ನಿರೂಪಕ ಅಜಿತ್ ಎಂಬವರು ಅನಗತ್ಯವಾಗಿ ಪ್ರವಾದಿ (ಸ) ಹೆಸರನ್ನು ಎಳೆದು ತಂದು ನಿಂದಿಸುವ ಮೂಲಕ ತನ್ನ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ತನ್ನ ಹೇಳಿಕೆಯು ವಿವಾದವಾದ ಬಳಿಕ ಕ್ಷಮೆ ಕೋರಿರುವುದು ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದ್ದು ತಪ್ಪನ್ನು ಒಪ್ಪಿಕೊಂಡಂತೆ ಕಂಡುಬಂದಿಲ್ಲ. ಪ್ರೊಫೆಸರ್ ಭಗವಾನ್ ರವರು ಈ ಹಿಂದೆ ಪ್ರಸ್ತಾಪಿಸಿದ್ದನ್ನು ಟಿ.ವಿಯಲ್ಲಿ ವಿಶ್ಲೇಷಿಸುವಾಗ ಪ್ರವಾದಿ(ಸ)ಯವರನ್ನು ಅನಗತ್ಯವಾಗಿ ಎಳೆದು ತಂದು ನಿಂದಿಸಿರುವುದು ಖಂಡನಾರ್ಹವಾಗಿದೆ.
ಮುಸ್ಲಿಂ ಜಗತ್ತಿನೊಂದಿಗೆ ಸರ್ವ ಧರ್ಮೀಯರು ಗೌರವಿಸುವ ಪ್ರವಾದಿ ಮುಹಮ್ಮದ್(ಸ.ಅ) ರ ಜೀವನ ಕ್ರಮದ ಅಸಹನೆಯ ಸಿದ್ಧಾಂತ ಭಯೋತ್ಪಾದಕ ಟಿಪ್ಪು ಹುಟ್ಟಿಕೊಳ್ಳಲು ಕಾರಣ ಎಂಬಿತ್ಯಾದಿ ಪ್ರವಾದಿ ನಿಂದನೆ ಅಕ್ಷಮ್ಯ ಅಪರಾಧವಾಗಿರುತ್ತದೆ. ಈ ಬಗ್ಗೆ ಪೋಲೀಸ್ ಇಲಾಖೆ ನಿರೂಪಕ ಅಜಿತ್ ವಿರುದ್ಧ ಪ್ರಖರಣ ದಾಖಲಿಸಬೇಕೆಂದು ಅಪೇಕ್ಷಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ದ.ಕ ಜಿಲ್ಲಾದ್ಯಕ್ಷ ಮೊಹಮ್ಮದ್ ಹನೀಫ್ ಹೇಳಿದ್ದಾರೆ.