ಪ್ರವಾಸಿ ಬೋಟುಗಳಲ್ಲಿ ಸುರಕ್ಷತೆ ಪಾಲಿಸಿ – ಪ್ರಿಯಾಂಕ ಮೇರಿ ಫ್ರಾನ್ಸಿಸ್

Spread the love

ಪ್ರವಾಸಿ ಬೋಟುಗಳಲ್ಲಿ ಸುರಕ್ಷತೆ ಪಾಲಿಸಿ – ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ : ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ ಹಾಗೂ ಅಧ್ಯಕ್ಷರು ಮಲ್ಪೆ ಅಭಿವೃದ್ದಿ ಸಮಿತಿ ಮಲ್ಪೆ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ 13 ರಂದು ಪ್ರವಾಸೀ ಟೂರಿಸ್ಟ್ ಬೋಟ್ಗಳಲ್ಲಿ ಪ್ರವಾಸಿಗರಿಗಾಗಿ ಕೈಗೊಳ್ಳುವ ಸುರಕ್ಷತೆಯ ಬಗ್ಗೆ ಪ್ರವಾಸೀ ಬೋಟ್ ಮಾಲಕರೊಂದಿಗೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದ ಬಗ್ಗೆ ಪ್ರವಾಸೀ ಬೋಟ್ಗಳಲ್ಲಿ ಹಾಗೂ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಹಾಗೂ ಪ್ರವಾಸೀ ಬೋಟ್ ಸಿಬ್ಬಂದಿಗಳು ಮತ್ತು ಸೈಂಟ್ ಮೇರಿಸ್ ದ್ವೀಪದಲ್ಲಿ ನಿಯೋಜನೆಗೊಂಡ ಸಿಬ್ಬಂದಿಗಳೊಂದಿಗೆ ಸಹಕರಿಸಲು ಕೋರಿದೆ.

ಷರತ್ತುಗಳು./ಸೂಚನೆಗಳು

1.ಮಲ್ಪೆ ಬೀಚ್ ಪ್ರದೇಶದಿಂದ ಮತ್ತು ಮಲ್ಪೆ ಬಂದರು ಪ್ರದೇಶದಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರವಾಸಿಗರು ಪ್ರವಾಸೀ ಬೋಟ್ಗಳಲ್ಲಿ ಪ್ರಯಾಣಿಸುವಾಗ ಜೀವರಕ್ಷಕಾ ಸಾಧನವನ್ನು ಪ್ರವಾಸಿಗರು ಧರಿಸಿ ಬೋಟ್ನಲ್ಲಿ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೀವರಕ್ಷಕಾ ಸಾಧನವನ್ನು ಧರಿಸದ ಪ್ರಯಾಣಿಕರನ್ನು ಬೋಟಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ.

2. ಪ್ರವಾಸೀ ಬೋಟ್ಗಳಲ್ಲಿ ಬೋಟ್ ಸಾಮಥ್ರ್ಯ ಮೀರಿ ಹೆಚ್ಚಿನ ಜನರನ್ನು ಬೋಟ್ನಲ್ಲಿ (ಪ್ರವಾಸಿಗರನ್ನು) ಹಾಕಿಕೊಂಡು ಹೋದಲ್ಲಿ ಬೋಟ್ಗಳ ಮಾಲೀಕರ ಮೇಲೆ ಸಮಿತಿಗೆ ಲಿಖಿತವಾಗಿ ದೂರು ಸಲ್ಲಿಸುವುದು.

3.ಪ್ರವಾಸಿಗರು ಸೈಂಟ್ ಮೆರೀಸ್ ದ್ವೀಪಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಬೋಟ್ನಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಿದೆ.

4.ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರವಾಸಿಗರು ಆಹಾರವನ್ನು ಲೋಹದ ಪಾತ್ರೆಗಳಲ್ಲಿ (ಆಹಾರಗಳನ್ನು ಪ್ಲಾಸ್ಟಿಕ್ ವಸ್ತುಗಳಿಂದ ಕಟ್ಟಿರಕೂಡದು ಹೆಚ್ಚಿನ ಪಾತ್ರೆಗಳಿದ್ದಲ್ಲಿ ಸೈಂಟ್ಮೆರೀಸ್ ದ್ವೀಪದಲ್ಲಿ ಶುಲ್ಕ ವಸೂಲಿ ಮಾಡಲಾಗುವುದು ಸ್ವಚ್ಚತೆಯ ದೃಷ್ಟಿಯಿಂದ) ಕುಡಿಯುವ ನೀರಿನ ಉದ್ದೇಶಕ್ಕಾಗಿ ಮನೆಯಿಂದ ತಂದಂತಹ ಪೆಟ್ ಬಾಟಲ್ಸ್ ಇವುಗಳನ್ನು ಉಪಯೋಗಿಸಬಹುದಾಗಿದೆ.

ಪ್ರವಾಸಿಗರ ಉದ್ದೇಶಕ್ಕಾಗಿ ರಜಾ ದಿನಗಳಲ್ಲಿ ಪೂರ್ವಾಹ್ನ 6.30ಕ್ಕೆ ಬೋಟ್ ಆರಂಭಿಸಲಾಗುವುದಾಗಿದ್ದು ಬೋಟ್ ಮಾಲೀಕರ ದೂರವಾಣಿ ಸಂಖ್ಯೆ ಈ ಕೆಳಗಿನಂತಿದೆ.

5.ಮಲ್ಪೆ ಬೀಚ್ ಪ್ರದೇಶದಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಹೋಗುವ ಪ್ರವಾಸೀ ಬೋಟ್ಗಳ ಮಾಲೀಕರ ಮೊ.ನಂ.9886415479, 9986448575, 9972994968, 9742506873

6.ಮಲ್ಪೆ ಬಂದರು ಪ್ರದೇಶದಿಂದ ಸೈಂಟ್ ಮೆರೀಸ್ ದ್ವೀಪಕ್ಕೆ ಹೋಗುವ ಪ್ರವಾಸೀ ಬೋಟ್ಗಳ ಮಾಲೀಕರ ಮೊ.ನಂ 8951081207, 9845354325, 9880593676.

ಪ್ರವಾಸೀ ಬೋಟ್ಗಳಲ್ಲಿ ಹಾಗೂ ಸೈಂಟ್ ಮೆರೀಸ್ ದ್ವೀಪದಲ್ಲಿ ಸಿಬ್ಬಂದಿಗಳಿಂದ ಅಥವಾ ಯಾವುದೇ ಸಮಸ್ಯೆ ಉಂಟಾದಲ್ಲಿ ದೂರು ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮಲ್ಪೆ ಅಭಿವೃದ್ದಿ ಸಮಿತಿಯ ವ್ಯವಸ್ಥಾಪಕರನ್ನು (ಮೊ.ನಂ 9964024177) ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love