Home Mangalorean News Kannada News ಪ್ರವಾಸೋದ್ಯಮ ಆಕರ್ಷಣೆಗೆ ಪ್ರಯತ್ನ; ಅದಿತಿ ಗ್ಯಾಲರಿಯಲ್ಲಿ ಡ್ರೋಣ್ ಛಾಯಾಚಿತ್ರ ಪ್ರದರ್ಶನ

ಪ್ರವಾಸೋದ್ಯಮ ಆಕರ್ಷಣೆಗೆ ಪ್ರಯತ್ನ; ಅದಿತಿ ಗ್ಯಾಲರಿಯಲ್ಲಿ ಡ್ರೋಣ್ ಛಾಯಾಚಿತ್ರ ಪ್ರದರ್ಶನ

Spread the love

ಪ್ರವಾಸೋದ್ಯಮ ಆಕರ್ಷಣೆಗೆ ಪ್ರಯತ್ನ; ಅದಿತಿ ಗ್ಯಾಲರಿಯಲ್ಲಿ ಡ್ರೋಣ್ ಛಾಯಾಚಿತ್ರ ಪ್ರದರ್ಶನ

ಉಡುಪಿ: ಪ್ರವಾಸಿತಾಣಗಳ ವೈಮಾನಿಕ ನೋಟವನ್ನು ತೋರಿಸುವ ಮೂಲಕ ಪ್ರವಾಸೋದ್ಯಮವನ್ನು ಆಕರ್ಷಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ವಿವಿಧ ತಾಣಗಳ ಡ್ರೋಣ್ ಛಾಯಾಚಿತ್ರ ಪ್ರದರ್ಶನವನನ್ನು ಗ್ಯಾಲರಿ ಅದಿತಿಯಲ್ಲಿ ಶನಿವಾರ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ|ಸಂಧ್ಯಾಪೈ ಡ್ರೋಣ್ ಮೂಲಕ ತೆಗೆದ ಕಾಪು ದೀಪಸ್ಥಂಭದ ಚಿತ್ರವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಡ್ರೋಣ್ ರಿಮೋಟ್ ಒತ್ತುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಈ ವೇಳೆ ಉದ್ಘಾಟನಾ ಸಂದೇಶ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳು ಇದ್ದರೂ ಸಹ ಜಿಲ್ಲೆಯ ಪ್ರವಾಸೋದ್ಯಮ ಮಾತ್ರ ನೀರಿಕ್ಷಿತ ಮಟ್ಟಕ್ಕೆ ತಲುಪಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದಷ್ಟು ವಿಸ್ತೀರ್ಣ ಹೊಂದಿರುವ ಸಿಂಗಾಪುರ ಇಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಅಂತಹ 1000 ಕ್ಕೂ ಅಧಿಕ ಸಿಂಗಾಪುರದಂತಹ ಪ್ರವಾಸಿ ತಾಣಗಳು ಭಾರತ ದೇಶದಲ್ಲಿ ನಿರ್ಮಿಸುವ ಶಕ್ತಿಯನ್ನು ಹೊಂದಿದ್ಧೇವೆ. ಆದರೂ ಕೂಡ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಮಾತ್ರ ನೀರಿಕ್ಷಿತ ಪ್ರಚಾರ ಪ್ರೋತ್ಸಾಹ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು.

ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮದಲ್ಲಿ ಹೆಚ್ಚಿನ ಪ್ರೋತ್ಸಾಹಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಲಾಗುವುದು. ಮಾರ್ಚ್ 18 ರಂದು ಪಡುಕೆರೆ ಸೇತುವೆ ಜನರ ಸಂಚಾರಕ್ಕೆ ಮುಕ್ತವಾಗಲಿದ್ದು, ಪಡುಕೆರೆಯ ಬೀಚಿನಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಅವಕಾಶವಿದ್ದು ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಮಲ್ಪೆಯ ಬೀಚ್ ದೇಶದಲ್ಲಿಯೇ ಸ್ಚಚ್ಚ ಬೀಚ್ ಎನ್ನುವ ಕೀರ್ತಿಗೆ ಪಾತ್ರವಾಗಿದ್ದು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ ನಡೆಸಲಾಗುವುದು ಎಂದರು.

ಕಾರ್ಯಕ್ರದಮದಲ್ಲಿ ಉಡುಪಿ ಎಎಸ್‍ಪಿ ವಿಷ್ಣುವರ್ಧನ್ ಹಾಗೂ ಸಾಯಿ ರಾಧಾ ಸಮೂಹದ ಮುಖ್ಯಸ್ಥರಾದ ಮನೋಹರ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದು, ಪ್ರದರ್ಶನಕ್ಕೆ ಶುಭ ಹಾರೈಸಿದರು.

ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ಮತ್ತು ಬೆಂಗಳೂರಿನ ಅರುಣ್ ಮಹೇಂದ್ರಕರ್ ಈ ಹೊಸ ಪರಿಕಲ್ಪನೆಗೆ ನಾಂದಿ ಹಾಡಿರುವ ಪ್ರದರ್ಶನ ಮಾರ್ಚ್ 12 ರಂದು ಬೆಳಗ್ಗೆ 10 ರಿಂದ ರಾತ್ರಿ 8 ರತನಕ  ಸಹ ಸಾರ್ವಜನಿಕರಿಗೆ ವೀಕ್ಷಿಸಿಲು ಅವಕಾಶವಿದೆ. ಉಡುಪಿಯ ಸುಮಾರು 57 ಚಿತ್ರಗಳನ್ನು ಗ್ಯಾಲರಿ ಅದಿತಿಯಲ್ಲಿ ಪ್ರದರ್ಶಿಸಲಾಗುವುದು. ಕಾಪು ದೀಪ ಸ್ತಂಬ, ಕಾರ್ಕಳದ ಬಾಹುಬಲಿ, ಸೆಂಟ್‍ಮೇರಿಸ್ ದ್ವೀಪ ಹಾಗೂ ಬಾರಕೂರು ಬಸದಿಗಳು ವಿಶೇಷ ಆಕರ್ಷಣೆಯಾಗಿವೆ. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಮಣಿಪಾಲವನ್ನು ಬಾನಿನಿಂದ ನೋಡಿದಾಗ ಅದರ ಸೊಬಗು ಅತಿ ವಿಶಿಷ್ಟವಾಗಿದೆ ಎಂದು ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ| ಕಿರಣ್ ಆಚಾರ್ಯ ತಿಳಿಸಿದರು.

 


Spread the love

Exit mobile version