ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವು : ಜಿಲ್ಲಾಧಿಕಾರಿ ಕಚೇರಿ ಸ್ಪಷ್ಟೀಕರಣ

Spread the love

ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವು : ಜಿಲ್ಲಾಧಿಕಾರಿ ಕಚೇರಿ ಸ್ಪಷ್ಟೀಕರಣ

ಮಂಗಳೂರು :ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಕರ್ನಾಟಕ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಸಂತ್ರಸ್ತರಿಗೆ ಹಾಗೂ ನೆರೆಯ ಕೇರಳ ರಾಜ್ಯದಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ವ್ಯಕ್ತಿಗಳು, ಅನೇಕ ಸ್ವಯಂಸೇವಕರು ಹಾಗೂ ಸಂಘಸಂಸ್ಥೆಗಳು ದೇಣೆಗೆಯನ್ನು ಸಂಗ್ರಹಿಸುತ್ತಿರುವ ಬಗ್ಗೆ ಸ್ಪಷ್ಟೀಕರಣವನ್ನು ಕೋರಲಾಗಿರುತ್ತದೆ.

ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವನ್ನು ನೀಡಲಿಚ್ಛಿಸುವವರು ಮಾನ್ಯ ಮುಖ್ಯಮಂತ್ರ್ರಿಗಳ ವಿಕೋಪ ಪರಿಹಾರ ನಿಧಿಗೆ ಚೆಕ್ ಅಥವಾ ಡಿ.ಡಿ. ಮೂಲಕ ಆರ್ಥಿಕ ನೆರವನ್ನು ನೀಡಲು ಅವಕಾಶವಿರುತ್ತದೆ. ಇದನ್ನು ಹೊರತು ಪಡಿಸಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಅಥವಾ ಸ್ವಯಂಸೇವಕರು ಅಥವಾ ಸಂಘಸಂಸ್ಥೆಗಳು ಸಾರ್ವಜನಿಕವಾಗಿ ವಂತಿಗೆಯನ್ನು ಹಣದ ರೂಪದಲ್ಲಿ ಸಂಗ್ರಹಿಸಲು ಅವಕಾಶ ಇರುವುದಿಲ್ಲ. ಆದರೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಅಥವಾ ಸ್ವಯಂಸೇವಕರು ಅಥವಾ ಸಂಘ ಸಂಸ್ಥೆಗಳು ಪ್ರವಾಹ ಸಂತ್ರಸ್ಥರಿಗೆ ಆರ್ಥಿಕ ನೆರವನ್ನು ನೀಡಲು ಇಚ್ಛಿಸಿದಲ್ಲಿ ಚೆಕ್ ಅಥವಾ ಡಿ.ಡಿ ಮೂಲಕ ದೇಣಿಗೆಯನ್ನು ಮಾನ್ಯ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ನೀಡಬಹುದಾಗಿರುತ್ತದೆ.

ಕರ್ನಾಟಕ ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವನ್ನು ನೀಡಲಿಚ್ಛಿಸುವವರು ಚೆಕ್ ಅಥವಾ ಡಿ.ಡಿ ಯಲ್ಲಿ ನಮೂದಿಸಬೇಕಾದ ವಿಳಾಸ –Chief Minister’s Calamity Relief Fund, Karnataka State , Account No:37887098605, IFSC Code: SBIN0040277.

ಕೇರಳ ರಾಜ್ಯದ ಪ್ರವಾಹ ಸಂತ್ರಸ್ಥರಿಗೆ ಆರ್ಥಿಕ ನೆರವನ್ನು ನೀಡಲಿಚ್ಛಿಸುವವರು ಚೆಕ್ ಅಥವಾ ಡಿ.ಡಿ ಯಲ್ಲಿ ನಮೂದಿಸಬೇಕಾದ ವಿಳಾಸ – Chief Minister’s Distress Relief Fund, Kerala State , Account No:67319948232, IFSC Code: SBIN0070028.

ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ನೆರವನ್ನು ನೀಡಬಯಸುವವರು ಚೆಕ್ ಅಥವಾ ಡಿ.ಡಿ ಯನ್ನು ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಇಲ್ಲಿಗೆ ನೀಡಿ ಸ್ವೀಕೃತಿಯನ್ನು ಪಡೆಯಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love