ಪ್ರಸಕ್ತ ದಿನಗಳಲ್ಲಿ ಸಮಾಜ ಸೇವಕರ ಪಾತ್ರ ಮಹತ್ವವಾದುದು- ಹೆಲ್ವಿನ್ ಬರ್ಬೋಜಾ

Spread the love

ಪ್ರಸಕ್ತ ದಿನಗಳಲ್ಲಿ ಸಮಾಜ ಸೇವಕರ ಪಾತ್ರ ಮಹತ್ವವಾದುದು- ಹೆಲ್ವಿನ್ ಬರ್ಬೋಜಾ

ವಿದ್ಯಾಗಿರಿ: ಪ್ರಸಕ್ತ ದಿನಗಳಲ್ಲಿ ಸಮಾಜ ಸೇವಕರ ಪಾತ್ರ ಮಹತ್ವವಾದುದು. ಸಮಾಜದಲ್ಲಿ ತರಬೇತುದಾರರಾಗಿ, ಪ್ರೇರೇಪಕರಾಗಿ, ಪ್ರೋತ್ಸಾಹಕರಾಗಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ದುಬೈ ದಿ ಇಂಡಿಯನ್ ಹೈಸ್ಕೂಲ್ ಕೌನ್ಸಿಲರ್‍ನ ಮುಖ್ಯಸ್ಥರಾದ ಹೆಲ್ವಿನ್ ಬರ್ಬೋಜಾ ಹೇಳಿದರು.

ಅವರು ಆಳ್ವಾಸ್ ಸಮಾಜಕಾರ್ಯ ವಿಭಾಗದ ವತಿಯಿಂದ ನಡೆದ ಒಂದು ದಿನದ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ `ಸ್ಕೂಲ್ ಸೋಶಿಯಲ್ ವರ್ಕ್’ ನ ಕುರಿತು ಉಪನ್ಯಾಸ ನೀಡಿದರು.

ಜೀವನದಲ್ಲಿ ಕಲಿಕೆಗೆ ಮಿತಿ ಇಲ್ಲ. ಅನುಭವಗಳ ಮೂಲಕ ಅನೇಕ ವಿಷಯಗಳನ್ನು ಕಲಿಯಬೇಕು ಆಗಲೇ ಜೀವನದ ಗುರಿಯನ್ನು ಸಾಧಿಸಬಹುದು. ಸೈದ್ದಾಂತಿಕ ರೂಪದಲ್ಲಿ ಕಲಿಯುವುದರ ಜೊತೆಗೆ ಪ್ರಾಯೋಗಿಕ ನೆಲೆಯಲ್ಲಿ ಕಲಿತಾಗ ನಮಗೆ ಅನೇಕ ವಿಷಯಗಳನ್ನು ಉತ್ತಮ ರೀತಿಯಲ್ಲಿ ನಮ್ಮ ಜ್ಞಾನವನ್ನು ಬೆಳೆಸಿಕೊಳ್ಳಬಹುದು. ಸಮಾಜ ಕಾರ್ಯದ ಅಗತ್ಯತೆ, ಪಾತ್ರ, ಸವಾಲುಗಳು ಹಾಗೂ ತಂತ್ರಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಸಮಾಜ ಸೇವಕರು ದೇಶದ ಸುವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಸಮಾಜವು ಸರ್ವಾಧಿಕಾರತ್ವದಿಂದ ಪ್ರಜಾಪ್ರಭುತ್ವದೆಡೆಗೆ ಪರಿವರ್ತನೆಗೊಳ್ಳುತ್ತಿರುವುದರಿಂದ, ಅದಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗುವುದು ಒಳಿತು. ಹಾಗೂ ಏಕರೂಪ ನೀತಿಯು ಸಮಾಜದಲ್ಲಿನ ಪ್ರಮುಖ ಬದಲಾವಣೆಗೆ ಕಾರಣವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಿಎಸ್‍ಡಬ್ಲ್ಯೂ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲಾ, ಕಾರ್ಯಕ್ರಮದ ಸಂಯೋಜಕಿ ಪವಿತ್ರಾ ಪ್ರಸಾದ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸನಿಕಾ ಕಾರ್ಯಕ್ರಮ ನಿರೂಪಿಸಿದರು.


Spread the love