ಪ್ರಹ್ಲಾದ್ ಆಚಾರ್ಯಗೆ `ಅಲೆವೂರು ಗ್ರೂಪ್’ ಪ್ರಶಸ್ತಿ ಪ್ರದಾನ
ಉಡುಪಿ : ಅಲೆವೂರು ಗ್ರೂಫ್ ಫಾರ್ ಏಜುಕೇಶನ್ ಸಂಸ್ಥೆಯ ವತಿಯಿಂದ ನಡೆದ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ 13ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಾದೂಗಾರ, ಕಲಾವಿದ ಪ್ರಹ್ಲಾದ್ ಆಚಾರ್ಯ ಅವರಿಗೆ ಅಲೆವೂರು ಗ್ರೂಪ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಣಿಪಾಲ ಎಂಐಟಿಯ ಜಂಟಿ ನಿರ್ದೇಶಕ ಬಿ.ಎಚ್.ವಿ.ಪೈ ಪ್ರಶಸ್ತಿ ಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಹ್ಲಾದ್ ಆಚಾರ್ಯ, ಪೆÇೀಷಕರು ಮಕ್ಕಳ ಜೊತೆ ಸಮಯ ಕಳೆಯಬೇಕು. ಇಲ್ಲದಿದ್ದರೆ ಮಕ್ಕಳಿಗಾಗಿ ಏನು ಮಾಡಿದರೂ ವ್ಯರ್ಥ. ಇಂದು ಮಕ್ಕಳನ್ನು ರೆಶಿಡೆನ್ಸಿ ಯಲ್ ಸ್ಕೂಲ್‍ಗೆ ಸೇರಿಸುವ ಪೆÇೀಷಕರನ್ನು ಮುಂದೆ ಅದೇ ಮಕ್ಕಳು ಅವರನ್ನು ವೃದ್ಧಾಶ್ರಮ ಕಳುಹಿಸುತ್ತಾರೆ ಎಂದರು.
ವೇದಿಕೆಯಲ್ಲಿ ಅಲೆವೂರು ಶ್ರೀಧರ್ ಶೆಟ್ಟಿ, ಹರೀಶ್ ಕಿಣಿ, ನೀತಾಕಿಣಿ ಉಪಸ್ಥಿತರಿದ್ದರು.ಶಾಲೆಯ ಪ್ರಾಂಶುಪಾಲೆ ರೂಪಾ ಡಿ. ಕಿಣಿ ವರದಿ ವಾಚಿಸಿದರು. ಕಾರ್ಯದರ್ಶಿ ಎ.ದಿನೇಶ್ ಕಿಣಿ ಪ್ರಶಸ್ತಿ ಪುರಸ್ಕøತರ ಪರಿಚಯ ಮಾಡಿದರು. ಸಂಸ್ಥೆಯ ಅಧ್ಯಕ್ಷ ಗಣಪತಿ ಕಿಣಿ ಸ್ವಾಗತಿಸಿದರು. ಸುನಾಲಿನಿ ಹಾಗೂ ಶ್ರೀನಿವಾಸ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು.