ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ವಿನಯ್ ಎಲ್ ಶೆಟ್ಟಿ ಕಿನ್ನಿಗೋಳಿ ಕಸಾಯಿ ಖಾನೆಗೆ ಭೇಟಿ
ಮಂಗಳೂರು: ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ವಿನಯ್ ಎಲ್ ಶೆಟ್ಟಿ ಇತರರ ನಿಯೋಗ ಕಿನ್ನಿಗೋಳಿಯಲ್ಲಿ ಕಾರ್ಯಾಚರಿಸುತ್ತಿರುವ ಕಸಾಯಿ ಖಾನೆಗೆ ಭೇಟಿ ನೀಡಿ ಪಶುಸಂಗೋಪನಾ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆಯುವ ಕರ್ನಾಟಕ ಕಲ್ಯಾಣ ಪ್ರಾಣಿ ಕಲ್ಯಾಣ ಮಂಡಳಿಯ ಸಭೆಗೆ ವಾಸ್ತವಾಂಶ ವರದಿ ನೀಡುವ ಸಲುವಾಗಿ ಭೇಟಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಬೀಫ್ ಮಾಂಸಕ್ಕಾಗಿ ವಧಾಗ್ರಹ ‘ ಎಂದು ವಸತಿ ಪ್ರದೇಶದಲ್ಲಿ ವಾಸ್ತವ್ಯಉದ್ದೇಶಕ್ಕೆ ಕೊಟ್ಟ ಮನೆ ನಂಬರ್ ರದಲ್ಲಿ ಉದ್ದಿಮೆಯಡಿ ಬರುವ ಎರಡು ವಧಾಗ್ರಹಕ್ಕೆ ನಾಗರಿಕರ ವಿರೋಧವಿದ್ದರೂ ಪರವಾನಿಗೆ ನೀಡಿರುತ್ತಾರೆ.
ಮಾರ್ಚ್ 10 ರಿಂದ ಸ್ಥಳೀಯ ಮುಲ್ಕಿ ಪೊಲೀಸ್ ಠಾಣೆ ಸಿಬಂದಿಗಳು ಈ ಕಸಾಯಿಖಾನೆಗೆ ಸ್ಥಳೀಯ ನಾಗರಿಕರ ದೂರಿನ ಮೇರೆಗೆ ರೈಡ್ ಮಾಡಿದಾಗ ಅಲ್ಲಿ ರಾಜ್ಯದಲ್ಲಿ ಹತ್ಯೆ ನಿರ್ಬಂಧಿತ 10 ದನ 8 ಕರುಗಳು ಪತ್ತೆಯಾದವು ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸ್ ವರದಿ ಆಧಾರದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪಂಚಾಯತ್ ಅಧಿಕಾರಿಯ ತಪ್ಪನ್ನು ಎಲ್ಲಿಯೂ ಉಲ್ಲೇಖ ಮಾಡದೆ ಆ ಪರಿಸರದಲ್ಲಿ ಕೋಮುಗಲಭೆ ಸಂಭವಿಸಬಹುದು ಎಂಬ ಪೋಲಿಸು ವರದಿ ಮೇರೆಗೆ ಪರವಾನಿಗೆ ರದ್ದುಪಡಿಸಲು ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ತಿಳಿಸಿರುತ್ತಾರೆ. ( ಈ ಭಾಗದಲ್ಲಿ ಈವರೆಗೆ ಯಾವುದೇ ಕೋಮುಗಲಭೆಗಳು ಆಗಲಿಲ್ಲ) ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೋಟಿಸು ಮೇರೆಗೆ ಪರವಾನಿಗೆಯನ್ನು ರದ್ದುಗೊಳಿಸಿದೆ.
ಪರವಾನಿಗೆ ರದ್ದು ಗೊಂಡರು ಆರೋಪಿತರು ರದ್ದುಗೊಂಡ ಜಾಗದಲ್ಲಿ ಕಸಾಯಿಖಾನೆ ಕಾರ್ಯಚರಿಸುತ್ತಿರುವ ಬಗ್ಗೆ ಸ್ಥಳೀಯ ನಾಗರಿಕರಿಂದ ಈಗಲೂ ದೂರುಗಳು ಬರುತ್ತಿದ್ದು, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರಾದ ವಿನಯ್ ಎಲ್ ಶೆಟ್ಟಿ ಮೇ 19ರಂದು ಭೇಟಿ ಕೊಟ್ಟು ಪಶುಸಂಗೋಪನಾ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ನಡೆಯುವ ಕರ್ನಾಟಕ ಕಲ್ಯಾಣ ಪ್ರಾಣಿ ಕಲ್ಯಾಣ ಮಂಡಳಿಯ ಸಭೆಗೆ ವಾಸ್ತವಾಂಶ ವರದಿ ನೀಡುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.