Home Mangalorean News Kannada News ಪ್ರಾದೇಶಿಕ ಪಕ್ಷದತ್ತ ಜನರ ಓಲವು: ರಾಜ್ಯಧ್ಯಕ್ಷ ಎಚ್.ವಿಶ್ವನಾಥ್

ಪ್ರಾದೇಶಿಕ ಪಕ್ಷದತ್ತ ಜನರ ಓಲವು: ರಾಜ್ಯಧ್ಯಕ್ಷ ಎಚ್.ವಿಶ್ವನಾಥ್

Spread the love

ಪ್ರಾದೇಶಿಕ ಪಕ್ಷದತ್ತ ಜನರ ಓಲವು: ರಾಜ್ಯಧ್ಯಕ್ಷ ಎಚ್.ವಿಶ್ವನಾಥ್

ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷರಾದ ಎಚ್.ವಿಶ್ವನಾಥ್ ರವರು ಸರ್ಕಿಟ್ ಹೌಸಿನಲ್ಲಿ ಪಕ್ಷದ ಜಿಲ್ಲಾ ಪ್ರಮುಖರ ಸಭೆಯನ್ನು ತಾರಿಕು 23.12.2018ರಂದು ನಡೆಸಿದರು. ಪಕ್ಷದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದವರು ಜೆಡಿಎಸ್ ಪಕ್ಷವು 1983ರಿಂದ ಇಂದಿನ ತನಕ ೩೫ ವರ್ಷಗಳಿಂದ ಈ ರಾಜ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿದೆ. ಈ ರಾಜ್ಯಕ್ಕೆ 4 ಮುಖ್ಯಮಂತ್ರಿಗಳನ್ನು ಕೊಟ್ಟು ರಾಜ್ಯದ ಅಭಿವ್ರದ್ದಿಗೋಸ್ಕರ ವಿಶೇಶ ಕೊಡುಗೆಯನ್ನು ನೀಡಿದೆ. ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನಸಾಮನ್ಯರ ಸೌಲತ್ತುಗೋಸ್ಕರ ವಿಶೇಷ ಶ್ರಮವನ್ನು ವಹಿಸುತಿದ್ದಾರೆ. ಜೆಡೊಎಸ್ ಪಕ್ಷವು ತನ್ನದೇ ತತ್ವ, ಧ್ಯೇಯ,ದೋರಣೆ ಮೂಲಕ ಜನರ ಹ್ರದಯವನ್ನು ಗೆದ್ದಿದೆ. ಈ ಜಿಲ್ಲೆಯಲ್ಲಿ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಇದೆ ಎಂದು ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಬಿ.ಎಂ.ಫಾರೂಕ್ ರವರು ಮಾತನಾಡಿ ರಾಜ್ಯಧ್ಯಕ್ಷರಾದ ಎಚ್.ವಿಶ್ವನಾಥ್ ರವರು ರಾಜಕೀಯದಲ್ಲಿ ೫೦ ವರ್ಷಗಳ ಅನುಭವ ಹೊಂದಿದ್ದು ಈ ಪಕ್ಷದ ಆಸ್ತಿಯಾಗಿದೆ. ಅವರ ಮಾರ್ಗದರ್ಶನ ಹಾಗೂ ಅವರ ಸೇವೆ ಪಕ್ಷಕ್ಕೆ ಅಮೂಲ್ಯವೆಂದು ತಿಳಿಸಿದರು.

ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಕುಂಇ“ರವರು ಮಾತನಾಡಿ ಈ ಜಿಲ್ಲೆಗೆ ವಿಶೇಷ ಗಮನವನ್ನು ಕೊಡಬೇಕು ಮಾತ್ರವಲ್ಲ ಸನ್ಮಾನ್ಯ ಬಿ.ಎಮ್.ಫಾರುಕ್ ರವರನ್ನು ಮಂತ್ರಿ ಸ್ಥಾನವನ್ನು ದೊರಕುವಂತೆ ಬೇಡಿಕೆಯನ್ನು ಇಟ್ಟರು.

ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ, ಯುವಜನತಾದಳ ಅಧ್ಯಕ್ಷ ಅಕ್ಶಿತ್ ಸುವರ್ಣ, ಕಾರ್ಯಧ್ಯಕ್ಷ ರಾಮ್ ಗಣೇಶ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್, ಮಹಿಳಾ ಘಟಕದ ಅಧ್ಯಕ್ಷ ಸುಮತಿ ಹೆಗ್ಡೆ, ಮಾಜಿ ಮೂಡ ಅಧ್ಯಕ್ಷ ರಮೇಶ್, ಮೀರಾ ಸಾಹೇಬ್ ಪಕ್ಷದ ಬೆಳವಣಿಗೆ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು.

ಪಕ್ಷದ ಪ್ರಮುಖರಾದ ಗೋಪಾಲ್ ಕ್ರಷ್ಣ ಅತ್ತಾವರ, ರತ್ನಾಕರ್ ಸುವರ್ಣ, ಲತೀಫ್ ವಳಚಿಲ್, ಕೊರ್ಪೊರೇಟರ್ ರಮೀಜ ಬಾನು, ಶ್ರೀನಾಥ್, ಮಧುಸುದನ್, ಕಿರಣ್ ಪೈ, ಉಪೇಂದ್ರ, ಫೈಜಲ್, ರಘು, ಇಝಾ ಬಜಾಲ್, ಹಮೀದ್ ಬೇಂಗ್ರೆ, ಫ್ರಾನ್ಸಿಸ್ ಫೆರ್ನಾಂಡಿಸ್, ಎನ್.ಪಿ.ಪುಷ್ಪರಾಜನ್, ಡಿ.ಪಿ.ಹಮ್ಮಬ, ನಾಸಿರ್, ಮೊಹಮ್ಮದ್, ಕುಲದೀಪ್, ಇಸ್ಮಾಯಿಲ್ ಉಪಸ್ಥಿತರಿದ್ದರು.


Spread the love

Exit mobile version