Home Mangalorean News Kannada News ಪ್ರೇರಣಾದಿಂದ ಕೆಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕ್ರೈಸ್ತ ಮಹಿಳಾ ರಿಕ್ಷಾ ಚಾಲಕಿ ಜಾಸ್ಮಿನ್ ರಿಗೆ...

ಪ್ರೇರಣಾದಿಂದ ಕೆಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕ್ರೈಸ್ತ ಮಹಿಳಾ ರಿಕ್ಷಾ ಚಾಲಕಿ ಜಾಸ್ಮಿನ್ ರಿಗೆ ಸನ್ಮಾನ

Spread the love

ಪ್ರೇರಣಾದಿಂದ ಕೆಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕ್ರೈಸ್ತ ಮಹಿಳಾ ರಿಕ್ಷಾ ಚಾಲಕಿ ಜಾಸ್ಮಿನ್ ರಿಗೆ ಸನ್ಮಾನ

ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೆ0ಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ರಿ) ಉಡುಪಿ ( ಪ್ರೇರಣಾ) ಇವರ ವತಿಯಿಂದ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆಲ್ವಿನ್ ಕ್ವಾಡ್ರಸ್ ,ಮತ್ತು ಉಡುಪಿ ಜಿಲ್ಲೆಯ ಪ್ರಥಮ ಕ್ರೈಸ್ತ ಮಹಿಳಾ ರಿಕ್ಷಾ ಚಾಲಕಿ ಜಾಸ್ಮಿನ್ ಡಿಕೊಸ್ತಾ ಇವರಿಬ್ಬರಿಗೆ ಸನ್ಮಾನಿಸುವ ಕಾರ್ಯಕ್ರಮ ಬುಧವಾರ ಉಡುಪಿಯ ಕಚೇರಿಯ ಸಭಾಂಗಣ ದಲ್ಲಿ ನಡೆಯಿತು.

ಪ್ರೇರಣಾ ಉಡುಪಿಯ ಅಧ್ಯಕ್ಷ ಜೇರಿ ಡಾಯಸ್ ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿ ಸನ್ಮಾನಿತರು ಕ್ರೈಸ್ತ ಸಮುದಾಯದ ಆದರ್ಶ ವ್ಯಕ್ತಿ ಗಳಾಗಿದ್ದಾರೆ. ಜಾಸ್ಮಿನ್ ರವರು ಪುರುಷ ಪ್ರಧಾನ ರಿಕ್ಷಾ ಚಾಲಕರ ಮಧ್ಯೆ ಇಂದು ಪೆರಂಪಳ್ಳಿಯಲ್ಲಿ ತನ್ನ ಸೇವೆ ಮೂಲಕ ಜನಾನುರಾಗಿಯಾಗಿದ್ದಾರೆ ಅವರಿಗೆ ಉತ್ತಮ ಭವಿಷ್ಯವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕಾರ್ಕಳ ಸಂತೋಷ್ ಡಿಸಿಲ್ವಾ ಅವರು ರೂ 15,000 ದ ಚೆಕ್ ಅನ್ನು ಜಾಸ್ಮಿನ್ ಅವರಿಗೆ ಹಸ್ಟಾಂತರಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಡಾಲ್ಫಿ ಲುವಿಸ್, ಖಜಾಂಚಿ ರಾಬರ್ಟ್ ಫುರ್ಟಾಡೊ, ಪ್ರಶಾಂತ್ ಜತನ್ನ, ಟೆರೇನ್ಸ್ ಸುವಾರಿಸ್, ಲೂಯಿಸ್ ಲೋಬೊ, ಡೊನಾಲ್ಡ್ ಸಲ್ಡಾನಾ, ಗ್ರೇಗರಿ ಮಿನೇಜಸ್, ಪ್ರಕಾಶ್ ಪಿಂಟೋ ಹಾಜರಿದ್ದರು.


Spread the love

Exit mobile version