ಪ್ರೊಟೆಸ್ಟೆಂಟ್ ಸಮುದಾಯದ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿ ಸೌಹಾರ್ದತೆ ಮೆರೆದ ಜಿ ಶಂಕರ್ ಫ್ರಂಟ್ ಲೈನ್ ವಾರಿಯರ್ಸ್
ಉಡುಪಿ: ಉದ್ಯಾವರದ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಕಾಂಗ್ರೆಸ್ ಮುಖಂಡರು ಅದ ವಿನಯ ರಾಜು ಮೃತಪಟ್ಟಿದ್ದು ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆಯನ್ನು ಉದ್ಯಾವರದ ದಫನ ಭೂಮಿಯಲ್ಲಿ ನೆರವೇರಿಸಲಾಯಿತು.
ವಿನಯ ರಾಜುರವರ ಅಂತ್ಯ ಕ್ರಿಯೆಯಲ್ಲಿ ಮೊಗವೀರ ಯುವ ಸಂಘಟನೆಯ ಬೆಳ್ಳಂಪಳ್ಳಿ ಘಟಕದ ಅಧ್ಯಕ್ಷರಾದ ನವೀನ್ ತಿಂಗಳಾಯ, ಕಾರ್ಯದರ್ಶಿ ದೇವರಾಜ್, ಪ್ರಸಾದ್ ಮತ್ತು ರಾಕೇಶ್ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಸೌಹಾರ್ದತೆ ಮೆರೆದರು.
ಇದರೊಂದಿಗೆ ನಾಡೋಜ ಡಾ ಜಿ ಶಂಕರ್ರವರ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ ಎಮ್ ಮತ್ತು ದ ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ ಇವರ ನೇತೃತ್ವದಲ್ಲಿ ಇಂದಿಗೆ 52 ಕೊರೊನ ಸೋಂಕಿತ ಶವಗಳ ಅಂತ್ಯ ಸಂಸ್ಕಾರ ನಡೆಸಿದಂತಾಯಿತು.
ಮೊಗವೀರ ಜಾತಿಗೆ ಸಂಬಂಧಪಟ್ಟ ಉಡುಪಿ ಜಿಲ್ಲಾ ಮೊಗವೀರ ಯುವಸಂಗಟನೆ ಜಾತಿ ಮತ ಧರ್ಮಗಳ ಭೇದವಿಲ್ಲದೆ ಅವರವರ ಧರ್ಮದ ಸಂಪ್ರದಾಯದಂತೆ ನಡೆಸಿದ ವಾರಿಯರ್ಸ್ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಇಂದಿನ ಶವ ಸಂಸ್ಕಾರದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ, ಉಪಾಧ್ಯಕ್ಷರಾದ ರವೀಂದ್ರ ಶ್ರೀಯಾನ್, ಚಂದ್ರೇಶ್ ಪಿತ್ರೋಡಿ ಸಹಕರಿಸಿದರು.
ಮೊಗವೀರ ಯುವ ಸಂಘಟನೆಯ ಬೆಳ್ಳಂಪಳ್ಳಿ ಘಟಕದ ಅಧ್ಯಕ್ಷರಾದ ನವೀನ್ ತಿಂಗಳಾಯ, ಕಾರ್ಯದರ್ಶಿ ದೇವರಾಜ್, ಪ್ರಸಾದ್, ರಾಕೇಶ್ ಸಾಥ್ ನೀಡಿದರು.