ಫಸ್ಟ್ ನ್ಯೂರೋ ಆಸ್ಪತ್ರೆ ಸುತ್ತಲ ಪ್ರದೇಶ ಕಂಟೈನ್ಮೆಂಟ್ ಝೋನ್: ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್
ಮಂಗಳೂರು: ನಗರದ ಕಣ್ಣೂರು ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆ ಸುತ್ತಲಿನ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಆಸ್ಪತ್ರೆಯ ಪೂರ್ವ ಭಾಗದಿಂದ ಕನ್ನಗುಡ್ಡೆ, ಪಶ್ಚಿಮದಿಂದ ರಮಾನಾಥ್ ಕೃಪಾ ರೈಸ್ ಮಿಲ್, ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73 ಮತ್ತು ದಕ್ಷಿಣಕ್ಕೆ ಸರಕಾರಿ ಜಾಗದ ಸುತ್ತ ಕಂಟೈನ್ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ. ಆಸ್ಪತ್ರೆಯ ಜೊತೆಗೆ ಎರಡು ಮನೆ, ಐದು ಅಂಗಡಿಗಳನ್ನು ಸಂಪೂರ್ಣ ಕಂಟೈನ್ಮೆಂಟ್ ವ್ಯಾಪ್ತಿಗೊಳಪಡಿಸಲಾಗಿದೆ.
ಅಲ್ಲಿಂದ 5 ಕಿ.ಮೀ. ಸುತ್ತಮುತ್ತಲಿನ ಕಲ್ಲಾಪು, ಕುಡುಪು, ಫರಂಗಿಪೇಟೆ, ಫಳ್ನೀರ್‌ವರೆಗೂ ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಈ ಬಫರ್ ಝೋನ್ ವ್ಯಾಪ್ತಿಗೆ 42,000 ಮನೆಗಳು, 1,800 ಅಂಗಡಿ ಮತ್ತು ಕಚೇರಿಗಳು, 1, 82,500 ಲಕ್ಷ ಜನರು ಬಫರ್ ಝೋನ್ ವ್ಯಾಪ್ತಿಗೊಳಪಡುತ್ತಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.