ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿನೂತನ ಶೈಲಿಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ
ಮಂಗಳೂರು: ನಗರದ ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಚಿಕಿತ್ಸೆ ಶಾಸ್ತ್ರ ವಿಭಾಗದ ಹೃದ್ರೋಗ ತಜ್ಞರು ಹಾಸನ ನಗರ ಮೂಲದ 61 ಹರೆಯದ ರೋಗಿಗೆ ಯಶಸ್ವಿಯಾಗಿ ಆಧುನಿಕ, ವಿನೂತನ ಶೈಲಿಯ ಇಂಟರ್ವೆಂಶನಲ್ ಕಾರ್ಯ ವಿಧಾನದ ಮೂಲಕ ಚಿಕಿತ್ಸೆ ನೀಡಿದ್ದಾರೆ.
ಕಠಿಣ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ, ಯಾವುದೇ ತೆರನಾದ ಕಾರ್ಯ ನಿರ್ವಹಿಸಲು ಅಶಕ್ತರಾಗಿದ್ದ ಹಾಸನ ನಗರ ಮೂಲದ ರೋಗಿಯು ಫಾದರ್ ಮಲ್ಲರ್ಆಸ್ಪತ್ರೆಯ ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎಚ್.ಪ್ರಭಾಕರ್ರವರನ್ನು ಸಂಪರ್ಕಿಸಿ ತಮ್ಮ ಉಸಿರಾಟ ಸಮಸ್ಯೆಯನ್ನು ತಿಳಿಸಿದರು.
ರೋಗಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವೈದ್ಯರು, ರೋಗಿಯು ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿ ದ್ದರು. ನವೆಂಬರ್ 2023ರಂದು ಹೃದಯ ಮಹಾ ಅಪಧಮನಿ ಕವಟ ಬದಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಿದ್ದರೂ ಇತ್ತೀಚೆಗೆ ಕಠಿಣ ಉಸಿರಾಟದ ಸಮಸ್ಯೆ ಎದುರಿಸುವ ಕರಣಕ್ಕಾಗಿ ಡಾ. ಪ್ರಭಾಕರ್ಅವರ ಸಲಹೆ ಮತ್ತು ಚಿಕಿತ್ಸೆಗೆ ಆಗಮಿಸಿದ್ದರು.
ವೈದ್ಯರು ರೋಗಿಯನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಿದಾಗ ರೋಗಿಯ ಹೃದಯ ಕವಾಟವು ಹಾನಿಯಾಗಿದ್ದು, ಗಂಭೀರ ಸಮಸ್ಯೆ ಎದುರಿಸುತ್ತಿರುವುದು ಗೊತ್ತಾಯಿತು.
ತಕ್ಷಣ ಡಾ. ಪ್ರಭಾಕರ್, ಡಾ.ಪ್ರದೀಪ್ ಪಿರೇರಾ, ಡಾ. ಕೆ.ಟಿ. ಆನಂದ್ ವೈದ್ಯರತಂಡ, ರೋಗಿಯ ಗಂಭೀರ ಪರಿಸ್ಥಿತಿ ಯನ್ನು ಮನಗಂಡು, 4 ಗಂಟೆ ಅವಧಿಯ ವಿನೂತನ ಶೈಲಿಯಲ್ಲಿ ಇಂಟರ್ವೆಂಶನಲ್ಕಾರ್ಯ ವಿಧಾನದ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ರೋಗಿಯು ಸಹಜವಾಗಿ ಉಸಿರಾಟ ನಡೆಸುವಂತೆ ಮಾಡಿದರು.
ರೋಗಿಯು 1 ವಾರದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು, ತಮ್ಮ ಊರು ಹಾಸನ ನಗರದಲ್ಲಿ ಸಾಮಾನ್ಯ ಆರಾಮದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಹೃದ್ರೋಗ ಚಿಕಿತ್ಸೆಯನ್ನು ದೇಶದ ಕೇವಲ ಐದಾರು ಆಸ್ಪತ್ರೆ ಗಳಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಡಾ.ಪ್ರಭಾಕರ್ ಮಾಹಿತಿ ನೀಡಿದರು.
ಈ ಅಪಾಯಕಾರಿ ಕಠಿಣ ಶಸ್ತ್ರಚಿಕಿತ್ಸೆಯನ್ನು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಿರ್ವಹಿಸಿದ್ದೇವೆ ಎಂದು ಡಾ. ಪ್ರದೀಪ್ ಪಿರೇರಾ ಮಾಹಿತಿ ನೀಡಿದ್ದಾರೆ. ಫಾದರ್ ಮಲ್ಲರ್ ಸಂಸ್ಥೆಗಳ ನಿರ್ದೇಶಕ ರೆ. ಫಾ. ರಿಚಾರ್ಡ್ ಕೊವೆಲ್ಲೊ ಅವರು ತಮ್ಮ ಆಸ್ಪತ್ರೆಯ ವೈದ್ಯರ ತಂಡದ ಗಮನಾರ್ಹ ಸಾಧನೆಯನ್ನು ಶ್ಲಾಘಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.