ಫಾದರ್ ಮುಲ್ಲರ್ ಕಾಲೇಜಿನ ವಿದ್ಯಾರ್ಥಿಗಳು ಫ್ಯೂಜಿಯೊ ಕಪ್ ರಸಪ್ರಶ್ನೆಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ

Spread the love

ಫಾದರ್ ಮುಲ್ಲರ್ ಕಾಲೇಜಿನ ವಿದ್ಯಾರ್ಥಿಗಳು ಫ್ಯೂಜಿಯೊ ಕಪ್ ರಸಪ್ರಶ್ನೆಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ

ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಸಂದೀಪ್ ರಾವ್ ಕೊರ್ಡ್‍ಕಲ್ ಮತ್ತು ಅನಿಲ್ ಡಿಸೋಜಾ, ಇವರು ಜಪಾನಿನ ಟೋಕಿಯೊ ನಗರದ ಶಿಬೌರಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಎನ್‍ಸಿಆರ್‍ಎಂ ಎನ್‍ಐಸಿಎಚ್‍ಇಯವರು ನಡೆಸಿದ ಇಂಟರ್ನ್ಯಾಷನಲ್ ಸ್ಟೆಮ್ ಸೆಲ್ ಮತ್ತು ರಿಜನರೇಟಿವ್ ಮೆಡಿಸಿನ್ ರಸಪ್ರಶ್ನೆ (ಫ್ಯೂಜಿಯೊ ಕಪ್ ರಸಪ್ರಶ್ನೆ) ಯಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ.

2 ಪ್ರಾಥಮಿಕ ಸುತ್ತಿನ ರಸಪ್ರಶ್ನೆ ಮತ್ತು ಸಂಶೋಧನಾ ಲೇಖನ ಬರವಣಿಗೆಯ ನಂತರ, ಸ್ಟೆಮ್ ಸೆಲ್ ಸಂಶೋಧಕರೊಂದಿಗೆ ಸಂವಹನ ನಡೆಸಲು ಮತ್ತು ಟೋಕಿಯೊದಲ್ಲಿ ಪೂರ್ವ-ಅಂತಿಮ ಮತ್ತು ಅಂತಿಮ ಸುತ್ತಿನಲ್ಲಿ ಭಾಗವಹಿಸಲು ವಿಶ್ವದ ಅಗ್ರ 18 ತಂಡಗಳನ್ನು ಎಲೈಟ್ ಎಂದು ಭಾಗವಹಿಸಲು ಆಯ್ಕೆ ಮಾಡಲಾಗಿದೆ.

ರನ್ನರ್ಸ್ ಅಪ್ ಗೆ 50,000 ಜಪಾನೀಸ್ ಯೆನ್ ನಗದು ಬಹುಮಾನ ನೀಡಲಾಯಿತು.
ಫಾದರ್ ಮುಲ್ಲರ್ ಚ್ಯಾರಿಟೇಬಲ್ ಸಂಸ್ಥೆಯ ಮ್ಯಾನೇಜ್‍ಮೆಂಟ್ ಮತ್ತು ಫ್ಯಾಕಲ್ಟಿಯು ಅವರಿಗೆ ಅಭಿನಂದನಾ ಶುಭಾಶಯಗಳನ್ನು ಕಳುಹಿಸಿದ್ದಾರೆ ಮತ್ತು ಅವರ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು.

ಎಫ್‍ಎಂಸಿಐಯ ಆಡಳಿತಾಧಿಕಾರಿ ವಂ| ಗುರು ರಿಚಾರ್ಡ್ ಏ. ಕೊಯೆಲ್ಲೊ, ಎಫ್ ಎಂಎಂಸಿಯ ವಂ| ಗುರು ಅಜಿತ್ ಬಿ. ಮೆನೆಯಸ್, ಡೀನ್ ಡಾ. ಜೆ.ಸಿ. ಆಳ್ವರವರು ವಿಜೇತರನ್ನು ಹರ್ಷದಿಂದ ಕಾಯುತ್ತಿದ್ದಾರೆ.


Spread the love