ಫಾ|ಮಹೇಶ್ ಡಿಸೋಜಾ ಸಾವನ್ನು ಸಿಬಿಐ ಗೆ ವಹಿಸುವಂತೆ ಮಾಸ್ ಇಂಡಿಯಾ ಆಗ್ರಹ
ಉಡುಪಿ: ಶಿರ್ವ ಸಾವುದ್ ಅಮ್ಮನವರ ಚರ್ಚಿನ ಸಹಾಯಕ ಧರ್ಮಗುರು ಮತ್ತು ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ|ಮಹೇಶ್ ಡಿಸೋಜರ ಸಾವಿನ ತನಿಖೆಯನ್ನು ಸಿಬಿಐ ಗೆ ನೀಡಬೇಕು ಎಂದು ಮಾಸ್ ಇಂಡಿಯಾ ಮಾಹಿತಿ ಸೇವಾ ಸಮಿತಿ ಸರಕಾರವನ್ನು ಒತ್ತಾಯಿಸಿದೆ.
ಡಿಸೋಜಾರವರು ಆತ್ಮಹತ್ಯೆ ಮಾಡಿಕೊಳ್ಳು ಯಾವುದೇ ದುಶ್ಚಟಗಳಿಗೆ ಅಥವಾ ಸಮಾಜಕ್ಕೆ ತಲೆತಗ್ಗಿಸುವ ಕೆಲಸ ಮಾಡಿರದ ವ್ಯಕ್ತಿ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಉದ್ದೇಶ ಇರಲ್ಲಿಲ್ಲ. ಆತ್ಮಹತ್ಯೆಯ ಬಳಿಕ ಚರ್ಚು, ಚರ್ಚಿನ ಪಾಲನಾ ಸಮಿತಿಯಾಗಲಿ ಧರ್ಮಪ್ರಾಂತ್ಯವಾಗಲಿ ಯಾವುದೇ ದೂರು ನೀಡಿಲ್ಲ. ಅವರ ಸಾವಿನ ಸೂಕ್ತ ಕಾರಣವನ್ನು ಈ ವರೆಗೆ ಯಾರೂ ಕೂಡ ತಿಳಿಸಿಲ್ಲ. ಅದಕ್ಕಾಗಿ ನವೆಂಬರ್ 4ರಂದು ಪ್ರತಿಭಟನೆ ನಡೆಸಿದ್ದು ಇದರಲ್ಲಿ 2000 ದಿಂದ 3000 ಮಂದಿ ಪ್ರತಿಭಟನಾಕಾರರು ಸೇರಿದ್ದರು. ಈ ವೇಳೆ ಮಹೇಶ್ ಡಿಸೋಜಾರ ಸಾವಿನ ತನಿಖೆಯನ್ನು ನಡೆಸಿ ನ್ಯಾಯದೊರಕಿಸಿ ಕೊಡುವಂತೆ ಶಿರ್ವ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಲಾಗಿತ್ತು.
ಈ ಪ್ರಕರಣವನ್ನು ಕೂಡಲೇ ಸಿ ಬಿ ಐ ಗೆ ನೀಡಿ ಸರಿಯಾದ ತನಿಖೆ ಮಾಡಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯನ್ನ ನೀಡಬೇಕು ಮತ್ತು ಫಾ|ಮಹೇಶ್ ಡಿಸೋಜಾರ ತಂದೆ ತಾಯಿಗಳಿಗೆ ನ್ಯಾಯವನ್ನು ಹಾಗೂ ಸಮಾಜದ ಪ್ರತಿಯೊಬ್ಬ ನಾಗರಿಕನಿಗೆ ಈ ಘಟನೆಯ ಸೂಕ್ತ ಕಾರಣ ನೀಡಬೇಕು. ಈ ಆತ್ಮಹತ್ಯೆ ಪ್ರಕರಣದಲ್ಲಿ ಸಮಾಜದ ಕೆಲವು ಗಣ್ಯ ವ್ಯಕ್ತಿಗಳು ಸೇರಿಕೊಂಡಿದ್ದಾರೆಂದು ಅಲ್ಲಿಯ ನಾಗರಿಕರ ಸಂಶಯವಾಗಿದೆ. ಮೃತ ಫಾ|ಮಹೇಶ್ ಡಿಸೋಜಾರ ಘಟನೆಯನ್ನು ಸಿಐಡಿ ಹಾಗೂ ಸಿಬಿಐ ಗೆ ನೀಡಿ ಸರಿಯಾದ ಎಫ್ ಐ ಆರ್ ಮಾಡಬೇಕು ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಮಾಹಿತಿ ಸೇವಾ ಸಮಿತಿಯು ಹಾಗೂ ಶಿರ್ವ ಮತ್ತು ಅಲ್ಲಿಯ ನೆರೆಕೆರೆಯ ಹಳ್ಳಿ ಜನರು ಸೇರಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸುನೀಲ್ ಕಾಬ್ರಾಲ್, ಸ್ಟೀಫನ್ ರಾಜೇಶ್ ಪಿರೇರಾ, ಪ್ರವೀಣ್ ಕೋರ್ಡ, ಜಾನ್ಸನ್ ಡಾಲ್ಫ್ರೇಡ್ ಕ್ಯಾಸ್ತಲಿನೋ, ಕೊನ್ರಾಡ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.