ಫೆಡರೇಶನ್ ಕಪ್ನಲ್ಲಿ ದಾಖಲೆ ಮಾಡಿದವರಿಗೆ 25 ಸಾವಿರ: ಸಚಿವ ಜೈನ್

Spread the love

ಮಂಗಳೂರು: 19ನೇ ಫೆಡರೇಶನ್ ಕಪ್ನಲ್ಲಿ ದಾಖಲೆ ಮಾಡುವ ಕ್ರೀಡಾಪಟುಗಳಿಗೆ 25 ಸಾವಿರ ರೂ ಬಹುಮಾನವಾಗಿ ನೀಡಲಾಗುವುದೆಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

abhaychandra_DC_20150504

abhaychandra_DC_20150504-001

ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿ, ಈಗಾಗಲೇ ಗುಂಡೆಸೆತದಲ್ಲಿ ಹರ್ಯಾಣದ ಇಂದ್ರಜಿತ್ ಸಿಂಗ್ ಮತ್ತು ಈಟಿ ಎಸೆತದಲ್ಲಿ ದೇವೇಂದರ್ ಸಿಂಗ್ 19ನೇ ಫೆಡರೇಶನ್ ಕಪ್ನಲ್ಲಿ ಈವರೆಗೆ ದಾಖಲೆ ಮಾಡಿದವರಾಗಿದ್ದು ಅವರಿಗೆ ನಗದು ಪುರಸ್ಕಾರ ನೀಡಲಾಗುವುದು ಹಾಗೂ ಮುಂದೆ ದಾಖಲೆ ಮಾಡಿದವರಿಗೂ ನಗದು ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ.

ಕ್ರೀಡಾಂಗಣದ ಹೆಚ್ಚುವರಿ ಸಲಕರಣೆ ಉಡುಪಿ, ಮೂಡಬಿದಿರೆಗೆ:

19ನೇ ಫೆಡರೇಶನ್ ಕಪ್ ಕ್ರೀಡಾಕೂಟಕ್ಕಾಗಿ ತಂದಿರುವ ಕ್ರೀಡಾ ಸಲಕರಣೆಗಳನ್ನು ಕ್ರೀಡಾಕೂಟ ಮುಗಿದ ಬಳಿಕ ಮಂಗಳ ಕ್ರೀಡಾಂಗಣಕ್ಕೆ ಬೇಕಾದ ಸಲಕರಣೆಗಳನ್ನು ಇರಿಸಲಾಗುವುದು. ಉಳಿದ ಹೆಚ್ಚುವರಿ ಸಲಕರಣೆಗಳನ್ನು ಉಡುಪಿ, ಮೂಡಬಿದಿರೆ ಕ್ರೀಡಾಂಗಣಕ್ಕೆ ಬಳಸಲಾಗುವುದೆಂದು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭ ಮಾತನಾಡಿದ ದ.ಕ ಜಿಲ್ಲಾ ಅತ್ಲೆಥಿಕ್ ಅಸೋಸಿಯೇಶನ್ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಈ ಬಾರಿ ಫಡರೇಶನ್ ಕಪ್ ಗಾಗಿ ನಡೆದ ರಾಷ್ಟ್ರೀಯ ಕ್ರೀಡಾ ಕೂಟ ತಾಂತ್ರಿಕ ತಜ್ಞರ ಪರೀಕ್ಷೆಯಲ್ಲಿ 60 ಮಂದಿ ಪಾಸಾಗಿದ್ದು ಅದರಲ್ಲಿ 40 ಮಂದಿ ಕರ್ನಾಟಕದವರಾಗಿದ್ದಾರೆ. ಹಾಗೂ ಅದರಲ್ಲೂ 20 ಮಂದಿ ದ.ಕ ಜಿಲ್ಲೆಯವರಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ದ.ಕ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಬಾಳ ಉಪಸ್ಥಿತರಿದ್ದರು.

 

 


Spread the love