ಫೆಬ್ರವರಿ 21ರಂದು ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚಿನ ಬೆಳ್ಳಿ ಹಬ್ಬ ಸಂಬ್ರಮ

Spread the love

ಫೆಬ್ರವರಿ 21ರಂದು ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚಿನ ಬೆಳ್ಳಿ ಹಬ್ಬ ಸಂಬ್ರಮ

ಕಾರ್ಕಳ : ಕಾರ್ಕಳ ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚಿನ ಬೆಳ್ಳಿ ಹಬ್ಬ ಸಂಬ್ರಮ ಫೆಬ್ರವರಿ 21 ರಂದು ಆಚರಿಸಲು ಚರ್ಚಿನ ಭಕ್ತವೃಂದ ಸರ್ವ ಸಜ್ಜಾಗಿದೆ.

ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚಿನ ಆಗಿನ ಧರ್ಮಗುರುಗಳಾಗಿದ್ದ ವಂ ಜೊಕಿಂ ಇಮ್ಮಾನ್ಯವೆಲ್ ಡಿಸೋಜಾ ಹಿರ್ಗಾನ ಚರ್ಚಿನ ಕಾರಣಿಕರ್ತರಾಗಿದ್ದು, ಈ ಭಾಗದ ಕ್ರೈಸ್ತ ವಿಶ್ವಾಸಿಗಳ ಧಾರ್ಮಿಕ ಅವಶ್ಯಕತೆಗಳಿಗೆ ಅನುಗುಣವಾಗಿ 1977 ರಲ್ಲಿ ಚಿಕ್ಕ ದೇವಾಲಯವನ್ನು ಅಂದಿನ ಮಂಗಳೂರಿನ ಧರ್ಮಾಧ್ಯಕ್ಷರಾದ ದಿವಂಗತ ವಂ ಡಾ ಬಾಸಿಲ್ ಸಾಲ್ವದೊರ್ ಡಿಸೋಜಾ ಆಶೀರ್ವಚನ ಮಾಡಿದರು. 1991 ಸಪ್ಟೆಂಬರ್ 15 ರಂದು ಹಿರ್ಗಾನ ಚರ್ಚಿಗೆ ಅಧಿಕೃತ ಚರ್ಚಿನ ಮಾನ್ಯತೆ ದೊರೆತು ನೂತನ ಚರ್ಚಿನ ಪ್ರಥಮ ಧರ್ಮಗುರುವಾಗಿ ವಂ ಸಿಪ್ರಿಯನ್ ಪಿಂಟೊ ನೇಮಕಗೊಂಡರು. 1994 ಡಿಸೆಂಬರ್ 19 ರಂದು ನೂತನ ಚರ್ಚಿನ ಕೆಲಸ ಸಂಪೂರ್ಣಗೊಂಡು ಉದ್ಘಾಟನೆಗೊಂಡಿತು.

ಸಿಪ್ರಿಯನ್ ಪಿಂಟೊ ಅವರ ಬಳಿಕ 1998 ರಲ್ಲಿ ನೂತನ ಧರ್ಮಗುರುವಾಗಿ ವಂ ಜೋನ್ ಜೋಸೆಫ್ ಮಾರ್ಟಿಸ್ ಧರ್ಮಗುರುವಾಗಿ ಬಂದರು. ಅವರ ಬಳಿಕ ವಂ ಮೈಕಲ್ ಲೋಬೊ ಅವರು ಧರ್ಮಗುರುವಾಗಿ ಅಧಿಕಾರ ಸ್ವೀಕರಿಸಿ ಚರ್ಚಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದರು. ಚರ್ಚಿನಲ್ಲಿ ನೂತನ ಶಾಲೆಯನ್ನು ಆರಂಭಿಸಿ ಅಲ್ಲಿಂದ ಪದವಿ ವರೆಗಿನ ತರಗತಿಗಳನ್ನು ಆರಂಭಿಸಿದ ಕೀರ್ತಿ ಅವರದ್ದು. ಕಾರಣಾಂತರದಿಂದ ಪದವಿ ಕಾಲೇಜು ಮುಂದುವರೆಯದೆ ಹೋದರೂ ಹತ್ತನೆ ತರಗತಿಯ ತನಕ ಇಂದಿಗೂ ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಶಾಲೆಯಿಂದ ಲಭಿಸುತ್ತಿದೆ. ಅವರ ಬಳಿಕ ವಂ ತೋಮಸ್ ರೋಶನ್ ಡಿಸೋಜ ನೂತನ ಧರ್ಮಗುರುವಾಗಿ ಅಧಿಕಾರ ಸ್ವೀಕರಿಸಿ ಶಾಲೆ ಹಾಗೂ ಚರ್ಚಿನ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ಹರಿಸಿದರು. ಪ್ರಸ್ತುತ ವಂ ತೋಮಸ್ ರೋಶನ್ ಡಿಸೋಜ ಶಾಲೆಯ ಜವಾಬ್ದಾರಿಯನ್ನು ನೀಡಿದರೆ ಚರ್ಚಿನ ಧರ್ಮಗುರುವಾಗಿ ವಂ ಅನಿಲ್ ಕರ್ನೆಲಿಯೋ ಅವರು ಅಧಿಕಾರ ಸ್ವೀಕರಿಸಿದರು.

ರಜತಮಹೋತ್ಸವ ವರ್ಷದ ಸವಿನೆನಪಿಗಾಗಿ ವಂ ಅನಿಲ್ ಕರ್ನೆಲಿಯೋ ಹಾಗೂ ಚರ್ಚಿನ ಪಾಲನಾ ಮಂಡಳಿಯ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಚರ್ಚಿನ ಪ್ರಧಾನ ವೇದಿಕೆಯ ನವೀಕರಣ, ಮಾಡಿನ ದುರಸ್ತಿ, ಹೊಸ ಗೋಡೆಗಳಿಗೆ ಪ್ಲಾಸ್ಟರಿಂಗ್ ಹಾಗೂ ಶಾಲೆಯ ಉಪಯೋಗಕ್ಕೆ ನೂತನ ಆಟದ ಮೈದಾನವನ್ನು ನಿರ್ಮಿಸಲಾಗಿದೆ.

ಚರ್ಚಿನಲ್ಲಿ ಪ್ರಸ್ತುತ 194 ಕುಟುಂಬಗಳಿದ್ದು, ಎಂಟು ವಾಳೆಗಳನ್ನು ಹೊಂದಿದೆ. ಚರ್ಚಿನಿಂದ 5 ಧರ್ಮಗುರುಗಳು ಹಾಗು 11 ಧರ್ಮಭಗಿನಿಯರಾಗಿ ದೇಶ ವಿದೇಶಗಳಲ್ಲಿ ಸೇವೆ ನೀಡುತ್ತಿದ್ದಾರೆ.

ರಜತ ಮಹೋತ್ಸವದ ಆಚರಣೆಯು ಫೆಬ್ರವರಿ 21 ರಂದು ಬೆಳಿಗ್ಗೆ 9.30 ಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಇವರ ನೇತ್ರತ್ವದಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗಲಿದೆ. ಬಲಿಪೂಜೆ ಪೂಜೆಯ ಬಳಿಕ ಸಾರ್ವಜನಿಕ ಅಭಿನಂದನಾ ಸಮಾರಂಭ ಜರುಗಲಿದ್ದು, ಬಳಿಕ ಸಾರ್ವಜನಿಕ ಸಹಭೋಜನ ನಡೆಯಲಿದೆ.

ಸಂಜೆ 5.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಡಾ ಬ್ಯಾಪ್ಟಿಸ್ ಮಿನೇಜಸ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕ ಗೋಪಾಲ್ ಭಂಡಾರಿ, ಹಿರ್ಗಾನ ಗ್ರಾಮಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಕುಕ್ಕುಂದೂರು ಗ್ರಾಪಂ ಅಧ್ಯಕ್ಷೆ ಸುಮನಾ ರಾವ್,  ಗ್ರಾಪಂ ಸದಸ್ಯ ಜೋನ್ ಪಿಂಟೊ ಭಾಗವಹಿಸಿಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ತುಳು ಹಾಸ್ಯಮಯ ನಾಟಕ ಪೊಪ್ಪ ಪ್ರದರ್ಶನಗೊಳ್ಳಲಿದೆ ಎಂದು ಚರ್ಚಿನ ಧರ್ಮಗುರು ವಂ ಅನಿಲ್ ಕರ್ನೆಲಿಯೋ, ಉಪಾಧ್ಯಕ್ಷ ರೊಸಾರಿಯೊ ಕ್ಯಾಸ್ತಲಿನೊ, ಕಾರ್ಯದರ್ಶಿ ವನಿತಾ ವಾಝ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Spread the love