Home Mangalorean News Kannada News ಫೆ 1-8 ರವರೆಗೆ ಬಜರಂಗದಳ ಭರ್ತಿ ಅಭಿಯಾನ

ಫೆ 1-8 ರವರೆಗೆ ಬಜರಂಗದಳ ಭರ್ತಿ ಅಭಿಯಾನ

Spread the love

ಫೆ 1-8 ರವರೆಗೆ ಬಜರಂಗದಳ ಭರ್ತಿ ಅಭಿಯಾನ

ಉಡುಪಿ: ಬಜರಂಗದ ದಳ ವಿಶ್ವಹಿಂದು ಪರಿಷತ್ ಯುವ ವಿಭಾವಾಗಿ ಕಳೆದ 30 ವರ್ಷದಿಂದ ದೇಶದಾದ್ಯಂತ ನಿರ್ವಹಿಸುತ್ತಿದೆ. ಬಜರಂಗದಳ ದೇಶದಾದ್ಯಂತ 85 ಲಕ್ಷಕ್ಕೂ ಹೆಚ್ಚು ಸದಸ್ಯರುನ್ನು ಹೊಂದಿರುವಂತಹ ಸಂಘಟನೆಯಾಗಿದ್ದು, ಬಜರಂಗದಳ ಪ್ರತಿ 5 ವರ್ಷಕ್ಕೊಮ್ಮೆ ಹಿಂದು ಯುವಕರ ಸೇರ್ಪಡೆಯಾಗಿ ಭರ್ತಿ ಅಭಿಯಾನ ಹಮ್ಮಿಕೊಳ್ಳುತ್ತಿದ್ದು ಅದರಂತೆ ಈ ಬಾರಿಯ ಭರ್ತಿ ಅಭಿಯಾನವು ಫೆಬ್ರವರಿ 4 ರಿಂದ 18ರವರೆಗೆ ರಾಜ್ಯದಾದ್ಯಂತ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷದ್ ಉಡುಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಹೇಳಿದರು.

ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಶನಿವಾರ ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯದಲ್ಲಿ 3 ಲಕ್ಷ ತರುಣರನ್ನು ಬಜರಂಗದಳಕ್ಕೆ ಸೇರ್ಪಡೆಗೊಳಿಸುವ ಗುರಿಯನ್ನಿಟ್ಟುಕೊಂಡು ಯೋಜನೆಯನ್ನು ಯಶಸ್ವಿಗೊಳಿಸಲು ರಾಜ್ಯದಾದ್ಯಂತ 4000 ಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ.

ಇದಾದ ಬಳಿಕ ರಾಜ್ಯದಾದ್ಯಂತ ಎಲ್ಲಾ ತಾಲೂಕುಗಳಲ್ಲಿ ನೂತನವಾಗಿ ಸೇರ್ಪಡೆಗೊಂಡ ತರುಣರಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಂಡು ಅವರಲ್ಲಿ ದೇಶಭಕ್ತಿ ಮತ್ತು ಧರ್ಮ ಶೃದ್ಧೆಯ ಜಾಗೃತಿಯನ್ನು ಮೂಡಿಸಲಾಗುವುದು.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಕೂಡ ವಿಶ್ವ ಹಿಂದು ಪರಿಷದ್ – ಭಜರಂಗದಳದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಕೂಡ 40 ಸಾವಿರ ಹೊಸ ಯುವಕರನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಫೆಬ್ರವಿರ 5ರಿಂದ ಭರ್ತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಅಲ್ಲದೆ 9845044922 ಮೊಬೈಲ್ ಸಂಖ್ಯೆಗೆ ಹೆಸರು, ಜಿಲ್ಲೆ, ತಾಲೂಕು ವಿವರದ ಎಸ್ ಎಮ್ ಎಸ್ ಕಳುಹಿಸುವ ಮುಖಾಂತರವೂ ಸೇರ್ಪಡೆಗೊಳ್ಳುವ ಅವಕಾಶವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಿನೇಶ್ ಮೆಂಡನ್, ದಿನೇಶ್ ಶೆಟ್ಟಿ ಹೆಬ್ರಿ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version