Home Mangalorean News Kannada News ಫೆ.18: ಸಚಿವ ಸತೀಶ್ ಜಾರಕಿಹೊಳಿ ದ.ಕ.ಜಿಲ್ಲಾ ಪ್ರವಾಸ

ಫೆ.18: ಸಚಿವ ಸತೀಶ್ ಜಾರಕಿಹೊಳಿ ದ.ಕ.ಜಿಲ್ಲಾ ಪ್ರವಾಸ

Spread the love

ಫೆ.18: ಸಚಿವ ಸತೀಶ್ ಜಾರಕಿಹೊಳಿ ದ.ಕ.ಜಿಲ್ಲಾ ಪ್ರವಾಸ

ಮಂಗಳೂರು : ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಫೆ.18ರಂದು ದ.ಕ ಜಿಲ್ಲೆಗೆ ಆಗಮಿಸಲಿದ್ದಾರೆ. ಅಂದು ಪೂ. 11ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನೆಹರೂ ವಿಚಾರ ವೇದಿಕೆಯ ವತಿಯಿಂದ ನಡೆಯುವ ಗಾಂಧಿ-ಅಂಬೇಡ್ಕರ್- ನೆಹರೂ ಸ್ವಾತಂತ್ರ್ಯ ಸಂವಿಧಾನ ದೂರ ದೃಷ್ಟಿ ಎಂಬ ವಿಚಾರಗೋಷ್ಠಿಯಲ್ಲಿ ಭಾಗವಹಿಸುವರು.

ಮಧ್ಯಾಹ್ನ 1ಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ, 3ಕ್ಕೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು ಎಂದು ಪ್ರಕಟನೆ ತಿಳಿಸಿದೆ.


Spread the love

Exit mobile version