ಫೆ. 6-14; ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಶ್ರೀ ಮನ್ಮಹಾರಥೋತ್ಸವ 

Spread the love

ಫೆ. 6-14; ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಶ್ರೀ ಮನ್ಮಹಾರಥೋತ್ಸವ 

ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಫೆಬ್ರವರಿ 6, ಗುರುವಾರದಿಂದ ಫೆಬ್ರವರಿ 14, ಶುಕ್ರವಾರದವರೆಗೆ ಶ್ರೀ ಮನ್ಮಹಾರಥೋತ್ಸವ, ಮಹಾರಂಗಪೂಜೆ, ಢಕ್ಕೆಬಲಿ, ತೆಪ್ಪೋತ್ಸವ ಮುಂತಾದ ಧಾರ್ಮಿಕ ವಿಧಿವಿದಾನಗಳು ನಡೆಯಲಿದೆ. ಪ್ರತೀ ದಿನ ಸಂಜೆ ಗಂಟೆ 7.30ಕ್ಕೆ ರಾತ್ರಿ ಬಲಿ, ಓಲಗ ಮಂಟಪ ಪೂಜೆ, ಫೆ.8, ಶನಿವಾರ 7.30ಕ್ಕೆ ಅಂಕುರಾರೋಹಣ, ಫೆ. 9, ರವಿವಾರ, ಪೂರ್ವಾಹ್ನ ಘಂ. 7-30ಕ್ಕೆ ಧ್ವಜಾರೋಹಣ. ಸಂಜೆ 4.30ಕ್ಕೆ ಕಾನಂಗಿ ವೆಂಕಟರಾಯರ ಮನೆಯಿಂದ ಹೂಕಾಯಿ ಮೆರವಣಿಗೆ, ರಾತ್ರಿ ಘಂ. 8.00ಕ್ಕೆ ಅಟ್ಟೆಬಲಿ. ಚಂದ್ರಮಂಡಲೋತ್ಸವ, ರಾತ್ರಿ ಘಂ. 10.00ಕ್ಕೆ ಮಹಾ ರಂಗಪೂಜೆ, ಭೂತ ಬಲಿ ನೆರವೇರಲಿದೆ.

ಫೆ.10, ಸೋಮವಾರ, ಸಂಜೆ ಘಂ. 6.00ಕ್ಕೆ ಪೀಠಪೂಜೆ, ರಾತ್ರಿಬಲಿ, ಗ್ರಾಮ ಕಟ್ಟೆಪೂಜೆ, ಫೆ.11,ಮಂಗಳವಾರ ಬೆÉಳಿಗ್ಗೆ ಘಂ. 11.00ಕ್ಕೆ, ಮಧ್ಯಾಹ್ನ ಘಂ.11.45ಕ್ಕೆ ಬ್ರಹ್ಮೋದನ, 12.15 ರಿಂದ ಮಹಾ ಅನ್ನಸಂತರ್ಪಣೆ. ರಾತ್ರಿ ಘಂ. 8.00ಕ್ಕೆ ಶ್ರೀ ಮನ್ಮಹಾರಥೋತ್ಸವ, ದರ್ಶನ ಸೇವೆ, ಓಲಗ ಮಂಟಪ ಪೂಜೆ, ತೊಟ್ಟಿಲೋತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರಗಲಿದೆ.

ಫೆ.12,ಬುಧವಾರ ಬೆಳಿಗ್ಗೆ ಘಂ. 7.00ಕ್ಕೆÀ, ಕವಾಟೋದ್ಘಾಟನೆ, ತುಲಾಭಾರ ಸೇವೆ ಅಪರಾಹ್ನ ಘಂ.3.00ಕ್ಕೆಕಟ್ಟೆ ಪೂಜೆ. ಸಂಜೆ ಘಂ. 6.00ಕ್ಕೆ, ತೆಪೆÇ್ಪೀತ್ಸವ, (ಕೆರೆಮಠದ ಸರೋವರದಲ್ಲಿ) ಅವಭೃತ, ಫೆ.13 ಗುರುವಾರ ಬೆಳಿಗ್ಗೆ ಘಂ. 8.00ಕ್ಕೆÀ, ಗಣಹೋಮ, ಸಂಪೆÇ್ರೀಕ್ಷಣೆ, ಶ್ರೀ ವರಮಹಾಲಕ್ಷ್ಮೀ ಪೂಜೆ, ಮಹಾಮಂತ್ರಾಕ್ಷತೆ. ಫೆ.14, ಶುಕ್ರವಾರ ಬೆಳಿಗ್ಗೆ ಘಂ. 9.00ಕ್ಕೆ ನಾಗಬನದಲ್ಲಿ ಆಶ್ಲೇಷಾ ಬಲಿ. ರಾತ್ರಿ ಘಂ. 7.00ಕ್ಕೆ ಹಾಲಿಟ್ಟು ಸೇವೆ ಮತ್ತು ಬ್ರಹ್ಮಮಂಡಲ- ಢಕ್ಕೆಬಲಿ ಸಂಪನ್ನಗೊಳ್ಳಲಿದೆ.

ಈ ಬಾರಿ ವಿಶೇಷತೆಯೆಂದರೆ ಉತ್ಸವದ ಪರ್ವಕಾಲದ ಏಳೂ ದಿನಗಳಲ್ಲಿ ಸಾಂಸ್ಕøತಿಕ ಸಂಭ್ರಮ ನಡೆಯಲಿದೆ, ಜ. 6. ಗುರುವಾರ ರಾತ್ರಿ ಗಂಟೆ 7.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ.

ಉದ್ಘಾಟಕರಾಗಿ ಕನ್ನರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ಅಧ್ಯಕ್ಷತೆಯನ್ನು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಅತಿಥಿಗಳಾಗಿ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ರಘುರಾಮ ಮಧ್ಯಸ್ಥ ಹಾಗೂ ಕಾರ್ತಿಕ್ ಗ್ರೂಪ್‍ನ ಪ್ರವರ್ತಕ ಹರಿಯಪ್ಪ ಕೋಟ್ಯಾನ್ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅಪ್ಪಿ ಶೇರಿಗಾರ್ತಿ. ಕೆ. ವಸಂತ ರಾವ್ ಕೊಡವೂರು ಹಾಗೂ ಲಕ್ಷ್ಮೀ ಗುರುರಾಜ್ ಇವರಿಗೆ ಶ್ರೀ ಶಂಕರನಾರಾಯಣಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಲಿದೆ. ಬಳಿಕ ನೃತ್ಯ ನೀಕೇತನ ಉಡುಪಿ ತಂಡದವರಿಂದ ನೂಪುರ ನಿನಾದ ನೃತ್ಯ ಕಾರ್ಯಕ್ರಮ ಜರಗಲಿದೆ.

ಫೆ.7, ಶುಕ್ರವಾರ ರಾತ್ರಿ ಗಂಟೆ 8ರಿಂದ 9ರವರೆಗೆ ಕುಮಾರಿ ಭಾವನಾ ಕೆರೆಮಠ ಇವರಿಂದ “ಅಹಲ್ಯೆ” ಏಕವ್ಯಕ್ತಿ ಪ್ರದರ್ಶನ, ಫೆ.8 ಶನಿವಾರದಂದು ಸಂಜೆ ಗಂಟೆ 5.30 ರಿಮದ 7.30ರವರೆಗೆ ಸಿಂಪನಿ ಸಂಗೀತ ಬಳಗ ಮಲ್ಪೆ ಇವರಿಂದÀ “ಸುಗಮ ಸಂಗೀತ”, ಫೆ.9 ರವಿವಾರ ಸಂಜೆ 5.30 ರಿಂದ 7.00 ರವರೆಗೆ ಶ್ರೀಮತಿ ವಾಣಿ ಸತೀಶ್ ರಾವ್ ಮತ್ತು ಬಳಗದವರಿಂದ “ಭಕ್ತಿ ಸಂಗೀತ”, ಫೆ.10 ಸೋಮವಾರ ಸಂಜೆ ಗಂಟೆ 4.30ರಿಂದ 5.30 “ಪ್ರವಚ£”À ವಿದ್ವಾನ್ ಅನಂತಕೃಷ್ಣ ಆಚಾರ್ಯರಿಂದ, 6.00ರಿಂದ 7.30ರವರೆಗೆ ಅಂಬಲಪಾಡಿಯ ಕುಮಾರಿ ಪ್ರಜ್ಞಾ ಅಡಿಗ ಇವರಿಂದ “ಭಕ್ತಿ ಲಹರಿ”, ಫೆ.11 ಮಂಗಳವಾರ ಪೂರ್ವಾಹ್ನ ಗಂಟೆ 11.00ರಿಂದ 01.00ರವರೆಗೆ ಕೊಡವೂರಿನ ಕೆ. ಸದಾನಂದ ಸೇರಿಗಾರ್ ಮತ್ತು ಬಳಗದವರಿಂದ “ಸ್ಯಾಕ್ಸೋಫೆÇೀನ್‍ವಾದನ” ಮಧ್ಯಾಹ್ನ ಗಂಟೆ 1.15 ರಿಂದ 2.30ರವರೆಗೆ ಮಲ್ಪೆ ನಾಗೇಶ್ ಮತ್ತು ಬಳಗದವರಿಂದ “ಭಜನಾ ಸೌರಭ”, ಸಂಜೆ ಗಂಟೆ 5.30 ರಿಂದ 7.30 ರವರೆಗೆ ಶ್ರೀಮತಿ ಜಯಶ್ರೀ ಅರವಿಂದ ಹಾಗೂ ಬಳಗ ಬೆಂಗಳೂರು ಇವರಿಂದ “ಭಕ್ತಿಗಾನ ಸುಧೆ” ಫೆ.12 ಬುಧವಾರ ರಾತ್ರಿ 9.30 ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಇವರಿಂದ ತುಳು ಯಕ್ಷಗಾನ ಬಯಲಾಟ “ನಾಗನಂದಿನಿ”, ಫೆ.14 ಶುಕ್ರವಾರ ಸಂಜೆ ಗಂಟೆ 6ರಿಂದ 7ರವರೆಗೆ ಶ್ರೀಮತಿ ಪೂರ್ಣಿಮಾ ಜನಾರ್ದನ್ ಕೊಡವೂರು ಇವರಿಂದ “ಶ್ರೀಶಂ ವೈಭವ” ಹರಿಕಥಾ ಕಾಲಕ್ಷೇಪ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love