ಫೆ. 7 ಕರಾವಳಿಯ ಬ್ಯಾಂಕ್ ಗಳನ್ನು ಉಳಿಸಿ ಹೋರಾಟ ಸಮಿತಿಯಿಂದ ನೂತನ ಅಭಿಯಾನಕ್ಕೆ ಚಾಲನೆ

Spread the love

ಫೆ. 7 ಕರಾವಳಿಯ ಬ್ಯಾಂಕ್ ಗಳನ್ನು ಉಳಿಸಿ ಹೋರಾಟ ಸಮಿತಿಯಿಂದ ನೂತನ ಅಭಿಯಾನಕ್ಕೆ ಚಾಲನೆ

ಮಂಗಳೂರು: ಕರಾವಳಿಯ ಬ್ಯಾಂಕ್ ಗಳನ್ನು ಉಳಿಸಿ ಹೋರಾಟ ಸಮಿತಿಯಿಂದ ಫೆಬ್ರವರಿ 7 ರಂದು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಅಭಿಯಾನದ ಕರಪತ್ರ ಲೋಗೊ ಮತ್ತು ಜನಪತ್ರಿನಿಧಿಗಳಿಗೆ ಮನವಿ ಬಿಡುಗಡೆ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಸಮಿತಿ, ಕೇಂದ್ರ ಸರಕಾರವು ಕರಾವಳಿ ಮೂಲದ ಮತ್ತು ಕರಾವಳಿಯಲ್ಲೇ ಆಡಳೀತ ಕಚೇರಿಯನ್ನು ಹೊಂದಿರುವ ಕಾರ್ಪೋರೇಶನ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗಳನ್ನು ಇತರ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ನಿರ್ಧಾರ ಪ್ರಕಟಿಸಿದ್ದು ಇದರು ಕರಾವಳಿವಯ ಆರ್ಥಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಹಾಗೂ ಜನಸಾಮಾನ್ಯರ ಮತ್ತು ಸಣ್ಣ ಪುಟ್ಟ ವ್ಯವಹಾರವನ್ನು ನಡೆಸುವ ವ್ಯಾಪಾರಸ್ಥರ ಹಣಕಾಸಿ ವ್ಯವಹಾರಕ್ಕೂ ತೊಂದರೆ ಉಂಟಾಗುತ್ತದೆ.

ಕರಾವಳಿಯಲ್ಲಿ ಸ್ಥಾಪನೆಗೊಂಡು ದೇಶದ ಮತ್ತು ಕರಾವಳಿಯ ಹಿತದೃಷ್ಠಿಯಿಂದ ಸಿಂಡಿಕೇಟ್ ಮತ್ತು ಕಾರ್ಪೊರೇಶನ್ ಬ್ಯಾಂಕುಗಳು ಈ ಹಿಂದಿನಂತೆ ಸ್ವತಂತ್ರ ರಾಷ್ಟ್ರೀಕೃತ ಬ್ಯಾಂಕುಗಳಾಗಿ ಮುಂದುವರಿಯಬೇಕು ಬ್ಯಾಂಕ್ ವಿಲೀನದ ಆದೇಶವನ್ನು ಹಿಂಪಡೆಯುವ ನಿಟ್ಟಿನಲ್ಲಿ ಈಗಾಗಲೇ ಹಣಕಾಸು ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದೆ. ಆದರೆ ವಿಲೀನ ಪ್ರಕ್ರಿಯೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಮುಂದುವರಿಯುತ್ತಿದ್ದು, ಸರಕಾರದ ನಿರ್ಣಯವನ್ನು ವಾಪಾಸು ಪಡೆಯುವಂತೆ ಒತ್ತಾಯಿಸಿ ಕರಾವಳಿ ಜಿಲ್ಲೆಗಳಾದ ದಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಪ್ರತಿಭಟನೆ ಹಾಗೂ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗಳನ್ನು ಮಾಡಲು ನಿರ್ಧರಿಸಿದ್ದು ಈ ಹಿನ್ನಲೆಯಲ್ಲಿ ಕರಾವಳಿಯ ಉದ್ದಕ್ಕೂ ಪ್ರತಿಭಟನೆಗಳನ್ನು ನಡೆಸುವ ನಿಟ್ಟಿನಲ್ಲಿ ಕರಪತ್ರ ಮತ್ತು ಲಾಂಛನವನ್ನು ತಯಾರುಗೊಳಿಸಿದ್ದು ಅದರ ಬಿಡುಗಡೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಾಜಿ ಸಚಿವರಾದ ಸುಬ್ಬಯ್ಯ ಶೆಟ್ಟಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ| ಪೀಟರ್ ಪಾವ್ಲ್ ಸಲ್ಡಾನಾ ಭಾಗವಹಿಸಲಿದ್ದಾರೆ.


Spread the love