ಫೇಸ್ಬುಕ್ ನಲ್ಲಿ ಪರಿಚಯವಾದ ಮಹಿಳೆಯ ಉಡುಗೊರೆಯನ್ನು ನಂಬಿ 3.53 ಲಕ್ಷ ರೂ ಕಳೆದುಕೊಂಡ ಖಾಸಗಿ ಕಂಪೆನಿ ಉದ್ಯೋಗಿ!
ಉಡುಪಿ : ಹುಟ್ಟುಹಬ್ಬದ ಉಡುಗೊರೆಯನ್ನು ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. 3.53 ಲಕ್ಷ ಹಣವನ್ನು ಕಳೆದುಕೊಂಡು ಮೋಸ ಹೋಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರೆಯ ಡೇವಿಡ್ ಪೌಲ್ ಕುಮಾರ್(53) ಎಂಬವರು ಮಲ್ಕಿಯ ಕೊಲ್ನಾಡ್ನಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಆ.24ರಂದು ಫೇಸ್ಬುಕ್ ಲನಲ್ಲಿ ಜೊನ್ ಶರ್ರಿ ಮಾಕ್ಸ್ವೆಲ್ ಎಂಬ ಮಹಿಳೆಯ ಪರಿಚಯವಾಗಿತ್ತು.
ಆ ಹೆಂಗಸು ಡೇವಿಡ್ ಪೌಲ್ ಅವರನ್ನು ನಂಬಿಸಿ ಹುಟ್ಟುಹಬ್ಬಕ್ಕೆ ಬೆಲೆ ಬಾಳುವ ಉಡುಗೊರೆ ಪಾರ್ಸೆಲ್ ಕಳುಹಿಸುವುದಾಗಿ ಹೇಳಿದ್ದರು. ಅದರಂತೆ ದೆಹಲಿ ಏರ್ಪೋರ್ಟಿನಿಂದ ಹೇಳಿಕೊಂಡು ಮಹಿಳೆಯೊಬ್ಬರು ಕರೆ ಮಾಡಿ, ವಿದೇಶದಿಂದ ಬಂದಿರುವ ಪಾರ್ಸೆಲ್ ಪಡೆಯಲು 58,000ರೂ. ಪಾವತಿಸ ಬೇಕೆಂದು ಹೇಳಿದ್ದು, ಅದರಂತೆ ಡೇವಿಡ್, ಅವರ ಬ್ಯಾಂಕ್ ಖಾತೆಗೆ ಆ ಹಣವನ್ನು ಪಾವತಿಸಿದ್ದರು. ಅದರ ನಂತರ ಆದಾಯ ತೆರಿಗೆ ಅಧಿಕಾರಿ ಹೇಳಿಕೊಂಡು ಕರೆ ಮಾಡಿ, ಹಣ ಪಾವತಿಸಲು ಹೇಳಿದ್ದು, ಅದರಂತೆ ಡೇವಿಡ್ 2,95,000ರೂ. ಹಣವನ್ನು ತನ್ನ ಖಾತೆಯಿಂದ ವರ್ಗಾಯಿಸಿದ್ದರು. ಹೀಗೆ ಇವರಿಂದ ಒಟ್ಟು 3,53,000ರೂ. ಹಣವನ್ನು ವಂಚನೆಯಿಂದ ಬ್ಯಾಂಕ್ ಮೂಲಕ ಪಡೆದು, ಪಾರ್ಸೆಲ್ ಕಳುಹಿಸದೆ, ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.