Home Mangalorean News Kannada News ಫೈನಾನ್ಶಿಯರ್ ದರೋಡೆ ಪ್ರಕರಣ : ರೌಡಿಶೀಟರ್ ಬಂಧನ

ಫೈನಾನ್ಶಿಯರ್ ದರೋಡೆ ಪ್ರಕರಣ : ರೌಡಿಶೀಟರ್ ಬಂಧನ

Spread the love

ಫೈನಾನ್ಶಿಯರ್ ದರೋಡೆ ಪ್ರಕರಣ : ರೌಡಿಶೀಟರ್ ಬಂಧನ

ಮಂಗಳೂರು : ಮಳಲಿ ಹಗಲು ದರೋಡೆಯ ಪ್ರಕರಣದ ಆರೋಪಿ ರೌಡಿಶೀಟರ್ ನನ್ನು ಉಳಾಯಿಬೆಟ್ಟು ಸಮೀಪ ಮಂಗಳೂರು ಪೊಲೀಸರು ಬಂಧೀಸುವಲ್ಲಿ ಸೋಮವಾರ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಉಳಾಯಿಬೆಟ್ಟು ನಿವಾಸಿ ರೌಡಿಶೀಟರ್ ಮಹಮ್ಮದ್ ಖಾಲಿದ್ ಯಾನೆ ಕೊಯ (32) ಎಂದು ಗುರುತಿಸಲಾಗಿದೆ.

ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಳಾಯಿಬೆಟ್ಟು ಪಟ್ರಕೋಟಿ ನಿವಾಸಿ ಆಶ್ಲೇಷ್ (20), ಮುಳೂರು ಗ್ರಾಮ ಕಿನ್ನಿಕಂಬ್ಳ ಮಠದಗುಡ್ಡೆ ನಿವಾಸಿ ಅಬ್ದುಲ್ ಅಝೀಜ್ (19) ಗಂಜಿಮಠ ನಾರ್ಲಪದವು ನಿವಾಸಿ ಮುಹಮ್ಮದ್ ಮುಸ್ತಫಾ (23) ಎಂಬವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸೆಂಥಿಲ್ ಕುಮಾರ್ ಎಂಬವರು ಸಣ್ಣ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದು ಅವರ ಪರಿಚಯದ ಜನರಿಗೆ ಹಣದ ವ್ಯವಹಾರವನ್ನು ಮಾಡುತ್ತಾ ಪ್ರತೀ ಆದಿತ್ಯವಾರದಂದು ಕಲೆಕ್ಷನ್ ಬಗ್ಗೆ ಬರುತ್ತಿದ್ದು ಜುಲೈ 14 ರಂದು ಬೆಳಿಗ್ಗೆ 10:00 ಗಂಟೆಗೆ ತನ್ನ ಮನೆಯಾದ ಮರೊಳಿಯಿಂದ ತನ್ನ ಬೈಕಿನಲ್ಲಿ ಹೊರಟು ಬಿ.ಸಿ.ರೋಡ್ ಮಾರ್ಗವಾಗಿ ಪೊಳಲಿ ಅಡ್ಡೂರಿನಿಂದ ಮರಳು ಯಾರ್ಡ್ ರಸ್ತೆಯಲ್ಲಿ ಮಳಲಿ ಸೈಟಿಗೆ ಹೋಗುತ್ತಾ ಮಧ್ಯಾಹ್ನ ಸುಮಾರು 2:30 ಗಂಟೆಗೆ ಮಂಗಳೂರು ತಾಲೂಕು, ಮೊಗರು ಗ್ರಾಮದ, ಮಳಲಿ ಸೈಟ್ ಬಳಿ ಹೋಗುತ್ತಿರುವಾಗ ಎರಡು ಬೈಕ್ ನಲ್ಲಿ ಬಂದ ನಾಲ್ಕು ಯುವಕರು ಸೆಂಥಿಲ್ ಕುಮಾರ್ ರವರ ಬೈಕಿಗೆ ತಮ್ಮ ಬೈಕನ್ನು ಅಡ್ಡ ಇಟ್ಟು ನಿನ್ನಲ್ಲಿದ್ದ ಹಣ ಕೊಡು ಇಲ್ಲದಿದ್ದರೆ ಕೊಲ್ಲುತ್ತೇನೆ ಎಂದು ತಲವಾರು ತೋರಿಸಿ ಬೆದರಿಸಿ ಬೈಕಿನ ಬಾಕ್ಸನ್ನು ಹೊಡೆದು ಅದರಲ್ಲಿದ್ದ ನಗದು ರೂಪಾಯಿ 2,05.000/- ವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದು ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿ ರೌಡಿ ಶೀಟರ್ ಮಹಮ್ಮದ್ ಖಾಲಿದ್ @ ಕೋಯ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4 ಕೊಲೆಯತ್ನ ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣ, ಬಜಪೆ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣ ದಾಖಲಾಗಿದ್ದು ಈತನು ಗಡಿಪಾರುಗೊಂಡಿದ್ದರೂ ತಲೆಮರೆಸಿಕೊಂಡು ಇತರ ಸಹಚರರೊಂದಿಗೆ ಸೇರಿ ಮಳಲಿಯಲ್ಲಿ ಫೈನಾನ್ಸ್ ದಾರನನ್ನು ದರೋಡೆ ಮಾಡಿದ್ದು ಈತನನ್ನು ಈ ದಿನ ಬೆಳಿಗ್ಗೆ ಉಳಾಯಿಬೆಟ್ಟು ಬಳಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿ ದರೋಡೆ ಮಾಡಿದ ನಗದು ರೂ 50,000/-, ಎರಡು ಮೊಬೈಲ್ ಪೋನ್, ತಲವಾರು ಮತ್ತು ಚೂರಿಯನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್ ರವರ ಆದೇಶದಂತೆ ಹಾಗೂ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ. ಐ.ಪಿ.ಸಿ (ಕಾಮತ್ತುಸು) ಮತ್ತು ಲಕ್ಷ್ಮೀ ಗಣೇಶ್. ಕೆ.ಎಸ್.ಪಿ.ಎಸ್ (ಅ ಮತ್ತು ಸ) ರವರ ಹಾಗೂ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ ಐ.ಪಿ.ಎಸ್ ರವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವ ಮೂರ್ತಿ. ಪಿ.ಎಸ್.ಐ ರವರುಗಳಾದ ಸತೀಶ್ ಎಂ.ಪಿ, ಕಮಲ, ಸಹಾಯಕ ಉಪನಿರೀಕ್ಷಕರಾದ ಶ್ರೀ ರಾಮಚಂದ್ರ, ರಾಮ ಪೂಜಾರಿ, ಜನಾರ್ಧನಗೌಡ, ಹೆಚ್.ಸಿ. ಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್ ಶೆಟ್ಟಿ, ಸಂತೋಷ್ ಸುಳ್ಯ, ಪಿಸಿಗಳಾದ ಮಂಜುನಾಥ, ವಿನೋದ್, ತಿರುಪತಿ, ಮುಜಾಂಬಿಲ್, ಮುತ್ತಣ್ಣ, ಹೋಮ್ ಗಾರ್ಡ್ ಸತೀಶ್ ರವರು ಮತ್ತು ಮಂಗಳೂರು ಗ್ರಾಮಾಂತರ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love

Exit mobile version