ಫೈಸಲ್ ನಗರದಿಂದ ಬಜಾಲ್ ನಂತೂರ್ ಕಲ್ಲಕಟ್ಟೆಗೆ ಬಸ್ಸು ಓಡಿಸಲು ಮನವಿ
ಮಂಗಳೂರು : ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸ್ ಬಜಾಲ್ ಗ್ರಾಮದ ಫೈಸಲ್ ನಗರ ತನಕ ಓಡಾಡುತ್ತಿದ್ದು ಈ ಬಸ್ಸನ್ನು ಬಜಾಲ್ ನಂತೂರ್ ಕಲ್ಲಿಕಟ್ಟೆಗೆ ವಿಸ್ತರಿಸಲು ದಕ್ಷಿಣ ವಿಧಾನ ಸಭಾ ಕ್ಷೆತ್ರದ ಜಾತ್ಯಾತೀತ ಜನತಾದಳ ಪರವಾಗಿ ಅಧ್ಯಕ್ಷರಾದ ವಸಂತ್ ಪೂಜಾರಿಯವರು ಜಿಲ್ಲಾ ಅಧಿಕಾರಿಗಳಿಗೆ ಮನವಿಯನ್ನು ನೀಡಿದರು.
ಮನವಿಯನ್ನು ಸ್ವೀಕರಿಸಿದ ಅಪಾರ ಜಿಲ್ಲಾಧಿಕಾರಿ ಕುಮಾರರವರು ಮನವಿಯನ್ನು ಸ್ವೀಕರಿಸಿ ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹಾಗೂ ಆರ್.ಟಿ.ಒ ಕಚೇರಿಗೆ ಈ ಬಗೆ ಕ್ರಮ ಕೈಗೊಳ್ಳಲ್ಲು ಸೂಚಿಸಿದರು. ಆರ್.ಟಿ.ಒ ಕಚೇರಿಯ ಅಧಿಕಾರಿಗಳು ಈ ಬಗ್ಗೆ ರೂಟ್ ಸರ್ವೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಬರವಸೆಯನ್ನು ನೀಡಿದರು. ಸುಮಾರು ಒಂದು ಸಾವಿರಕ್ಕು ಅಧಿಕ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು ವಿಧ್ಯಾರ್ಥಿಗಳು, ವ್ರದ್ದರು, ಬಹಳ ಕಷ್ಟ ಪಡುತ್ತಿದ್ದು ಜನರ ಸಮಸ್ಯಗಳ ಬಗ್ಗೆ ಅಪಾರ ಜಿಲ್ಲಾಧಿಕಾರಗಳ ಗಮನಕ್ಕೆ ತರಲಾಯಿತು. ಈ ಪ್ರದೇಶದ ಜನರು ವಿಧಾನ ಸಭೆಯ ಚುನಾವಣೆಯಲ್ಲಿ ಮತದಾನಕ್ಕೆ ಬಹಿಷ್ಕಾರ ಹಾಕಲು ಮುಂದಾಗಿದ್ದು ಅವರಿಗೆ ಜಾತ್ಯಾತೀತ ಜನತಾದಳ ಆಡಳಿತಕ್ಕೆ ಬಂದಲ್ಲಿ ಈ ಸಮಸ್ಯಕ್ಕೆ ಪ್ರಮಾಣಿಕವಾಗಿ ಸ್ಪಂಧಿಸುವುದಾಗಿ ಬರವಸೆಯನ್ನು ಕೊಟ್ಟಿದೆವು. ಈ ಮನವಿಯನ್ನು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ಕೂಡ ನೀಡಲಾಗಿತದ್ದು. ಅವರು ಕೂಡ ಕ್ರಮ ಕೈಗೊಳ್ಳುವುದಾಗಿ ಬರವಸೆಯನ್ನು ನೀಡಿರುತ್ತಾರೆ.
ನಿಯೋಗದಲ್ಲಿ ಪಕ್ಷದ ನಾಯಕರಾದ ರಾಮ್ ಗಣೇಶ್, ಸುಶೀಲ್ ನೊರೊನ್ಹ, ಗೋಪಾಲ್ ಕ್ರಷ್ಣ ಅತ್ತಾವರ ಹಾಗೂ ಪುಷ್ಪ ರಾಜನ್ ಎನ್.ಪಿ, ಹಮೀದ್ ಬೇಂಗ್ರೆ,ನಾಗೇಶ್ ಕುಮಾರ್ ಉಪಸ್ಥಿತರಿದ್ದರು.