Home Mangalorean News Kannada News ಬಂಟರ ಸಂಘ ಕುವೈಟ್ – ‘ಬಂಟಾಯಾನ 2017’

ಬಂಟರ ಸಂಘ ಕುವೈಟ್ – ‘ಬಂಟಾಯಾನ 2017’

Spread the love

ಬಂಟರ ಸಂಘ ಕುವೈಟ್ – ‘ಬಂಟಾಯಾನ 2017’

ಬಂಟರ ಸಂಘ ಕುವೈಟ್ ಇದರ ಪ್ರಮುಖ ಕಾರ್ಯಕ್ರಮವಾದ ’ಬಂಟಾಯಾನ 2017’ ಶುಕ್ರವಾರ ಏಪ್ರಿಲ್ 28, 2017ರಂದು ಕೇಂಬ್ರಿಡ್ಜ್ ಇಂಗ್ಲೀಷ್ ಸ್ಕೂಲ್ ಆಡಿಟೋರಿಯಂ, ಮಂಗಾಫ್, ಕುವೈತ್ ನಲ್ಲಿ ನೆಡೆಯಲಿದೆ. ಹೆಸರಾಂತ ಸಾಹಿತಿ ಮತ್ತು ಸಂಶೋಧಕಿ ಡಾ|ಇಂದಿರಾ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕುವೈತಿನ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಕರಾವಳಿ ಕರ್ನಾಟಕದಲ್ಲಿ ಪ್ರಸಿದ್ಧವಾದ ಬಡುಗು ತಿಟ್ಟು ಶೈಲಿಯ ಯಕ್ಷಗಾನ ಪ್ರದರ್ಶನವಿರುತ್ತದೆ. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ತೀರ್ಥಹಳ್ಳಿ ಗೋಪಾಲ ಆಚಾರ್ಯ, ಸುಬ್ರಹ್ಮಣ್ಯ ಹೆಗ್ಡೆ ಯಲಗುಪ್ಪಾ, ಶ್ರೀಧರ್ ಭಟ್ ಕಾಸರಗೋಡು, ಅಶೋಕ್ ಭಟ್ ಸಿದ್ದಾಪುರ, ಖ್ಯಾತ ಭಾಗವತರಾದ ರಾಮಕೃಷ್ಣ ಹಿಲ್ಲೂರು, ಕೋಟ ಶಿವಾನಂದ ಮತ್ತು ಶಂಕರ ಭಾಗವತ್ ಇವರು ಪಾಲ್ಗೊಳ್ಳಲಿದ್ದಾರೆ.

ಚಿತ್ರಮಿತ್ರ ಖ್ಯಾತಿಯ ಶ್ರೀ ಪ್ರಶಾಂತ್ ಶೆಟ್ಟಿಯವರ ಕ್ಷಿಪ್ರ ಕಲಾ ಪ್ರದರ್ಶನವು ಸಂಗೀತ ಮತ್ತು ನೃತ್ಯದ ರಸದೌತಣದೊಂದಿಗೆ ನೆಡೆಯಲಿದೆ. ಬಹುವಿಧ ಮನರಂಜನಾ ಕಲಾವಿದ ಶ್ರೀ ಅಶೋಕ್ ಪೊಳಲಿ ಮತ್ತು ವಿಶ್ವಾಸ್ ಗುರುಪುರ ಇವರ ನೃತ್ಯ ಮತ್ತು ಹಾಡುಗಳು ನಡೆಯಲಿದೆ. ಯುವ ಉದಯೋನ್ಮುಖ ಬಂಟ ಪ್ರತಿಭೆ ಶ್ರೀ ಸಾಹಿಲ್ ರೈ ಅವರು ಸಂಪೂರ್ಣಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:
ಯದುನಾಥ್ ಆಳ್ವಾ @ 99558231,
ಉದಯ್ ಕುಮಾರ್ ಶೆಟ್ಟಿ @ 66071763,
ಜಯಶೀಲ್ ಶೆಟ್ಟಿ @ 65582402
ಪ್ರವೀಣ್ ಕುಮಾರ ಶೆಟ್ಟಿ @ 50278788,
ನಿರಂಜನ್ ಮಲ್ಲಿ @ 60392127,
ಶೋಧನ್ ಶೆಟ್ಟಿ @ 65945161,
ಸಂದೇಶ್ ಕುಮಾರ್ ಶೆಟ್ಟಿ @ 60081181
ಅಥವಾ ಇಮೇಲ್: managing@kuwaitbunts.org ಸಂಪರ್ಕಿಸಬಹುದು.

ವರದಿ: ಸುರೇಶ್ಶ್ಯಾಮ್ರಾವ್ ನೇರಂಬಳ್ಳಿ


Spread the love

Exit mobile version