ಬಂಟ್ವಾಳದಲ್ಲಿ ನೀತಿ ಸಂಹಿತೆ ಉಲ್ಲಂಘನೆ; ಇಬ್ಬರು ಬಿಜೆಪಿ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು
ಬಂಟ್ವಾಳ : ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಕಲ್ಲೇರಿ ಎಂಬಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಇಬ್ಬರು ಬಿಜೆಪಿ ಕಾರ್ಯಕರ್ತರ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 8 ರಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳಾಧ ನಾರಯಣ ಶೆಟ್ಟಿ ಮತ್ತು ಜೊಯ್ ಲೊಬೊ ರವರು ನೀಡಿದ ದೂರಿನ ಅನ್ವಯ ಬಿಜೆಪಿ ಅರಳ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಉಮೇಶ್ ಹಾಗೂ ಕಾರ್ಯಕರ್ತ ಕಲ್ಲೇರಿಯ ರವಿ ಅರಸು ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
ಏಪ್ರಿಲ್ 7ರಂದು ಅರಳ ಗ್ರಾಮದ ಕಲ್ಲೆರಿ ಎಂಬಲ್ಲಿ ಬಿಜೆಪಿ ಪಕ್ಷದ ಕಾರ್ಯ ಕರ್ತರ ಸಭೆ ನಡೆಯುತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿದಾಗ ತೆರಳಿ ಪರಿಶೀಲಿಸಿದಾಗ ಬಿಜೆಪಿಪಕ್ಷದ ಕಾರ್ಯ ಕರ್ತರಾದ ರವಿ ಅರಸು ರವರ ಮನೆಯಲ್ಲಿ ಸಭೆಗೆ ಬಂದವರಿಗೆ ಕೇಸರಿ ಬಾತ್ ಅವಲಕ್ಕಿ ಮತ್ತು ಕಾಫಿಯನ್ನು ವಿತರಿಸುತ್ತಿದ್ದು ಕಂಡು ಬಂದಿದ್ದು ಅದನ್ನು ವಿತರಿಸದಂತೆ ತಡೆಹಿಡಿದಿರುತ್ತಾರೆ.
ಘಟನೆಗೆ ಸಂಬಂಧೀಸಿ ವೀಡಿಯೋ ಚಿತ್ರಿಕರಣ ಪರಿಶೀಲನೆ ನಡೆಸಿದ್ದು, ಇದರ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.