ಬಂಟ್ವಾಳ : ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ಅಧಿಕಾರಿಗಳು ದಾಳಿ – ಮೂರನೇ ಆರೋಪಿಯ ಬಂಧನ
ಬಂಟ್ವಾಳ : ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ಮಂಗಳೂರು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದ ತಪ್ಪಿಸಿಕೊಂಡ ಮೂರನೇ ಆರೋಪಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸ್ಥಳದ ಮಾಲಿಕರಾದ ನೊರ್ಬಟ್ ಡಿಸೋಜಾ ಎಂದು ಗುರುತಿಸಲಾಗಿದೆ
ಅಬಕಾರಿ ಜಂಟಿ ಆಯುಕ್ತ ಶೈಲಜಾ ಕೋಟೆ ನಿರ್ದೇಶನದಂತೆ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ ಬಂಟ್ವಾಳ ಉಪ ವಿಭಾಗದ ಉಪ ಅಧೀಕ್ಷಕರಾದ ಗೀತಾ ಅವರ ಮಾರ್ಗದರ್ಶನದಂತೆ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ವಿಜಯ್ ಕುಮಾರ್, ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಬಂಟ್ವಾಳ ತಾಲೂಕಿನ ಅಂಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ಕಳ್ಳಭಟ್ಟಿ ತಯಾರಿಸುವ ಸಾಮಗ್ರಿ, 950 ಕೇಜಿ ಬೆಲ್ಲ ಮತ್ತು 500 ಲೀಟರ್ ನಕಲಿ ಮದ್ಯ, 300 ಲೀಟರ್ ಬಟಾಟೆ ಮಿಶ್ರಣದ ಬೆಲ್ಲದ ಕೊಳೆಯನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಸದರಿ ಮನೆಯ ಮಾಲಿಕ ನೋರ್ಬಟ್ ಡಿಸೋಜಾ ತಪ್ಪಿಸಿಕೊಂಡಿದ್ದು ಆತನನ್ನು ಮಂಗಳವಾರ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.