ಬಂಟ್ವಾಳ ಕಾರ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ತೆರವುಗೊಳಿಸಿದ ಜಿಲ್ಲಾಡಳಿತ
ಬಂಟ್ವಾಳ: ಬಂಟ್ವಾಳ ಕಸಬಾ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ಕೇಸುಗಳು ದೃಢಪಟ್ಟ ಹಿನ್ನಲೆಯಲ್ಲಿ ಕಸಬಾ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು. ಈಗ ಹೊಸ ಪಾಸಿಟಿವ್ ಕೇಸುಗಳು ಪತ್ತೆಯಾಗದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಶನಿವಾರ ಬಂಟ್ವಾಳ ಕಾರ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪೂರ್ವದ ಮುಖ್ಯ ರಸ್ತೆ ರಫೀಯಾ ಬೀದಿ ಪಶ್ಚಿಮದ ಎಸ್ ವಿ ಎಸ್ ಶಾಲಾ ಮೈದಾನ, ಉತ್ತರದ ಜನವಸತಿ ಪ್ರದೇಶ ಬಫರ್ ಝೋನ್ ನಲ್ಲಿ ಸೇರಿದೆ. ಈ ಪ್ರದೇಶದಲ್ಲಿ ಒಟ್ಟು 97 ಜನವಸತಿ ಮನೆಗಳಿದ್ದು, 15 ಕಚೇರಿಗಳು ಮತ್ತು ಅಂಗಡಿಗಳೀದ್ದು ಒಟ್ಟು 388 ಜನಸಂಖ್ಯೆಯನ್ನು ಹೊಂದಿದೆ.