ಬಂಟ್ವಾಳ : ಜುಗಾರಿ ಅಡ್ಡೆಗೆ ಪೋಲೀಸ್ ದಾಳಿ; 33 ಮಂದಿ ಬಂಧನ

Spread the love

ಬಂಟ್ವಾಳ : ಜುಗಾರಿ ಅಡ್ಡೆಗೆ ಪೋಲೀಸ್ ದಾಳಿ; 33 ಮಂದಿ ಬಂಧನ

ಬಂಟ್ವಾಳ: ಅಕ್ರಮ ಜೂಜಾಟ ಅಡ್ಡೆಯೊಂದಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ನಿರೀಕ್ಷಕ ಶಿವಕುಮಾರ್ ಹಾಗೂ ಠಾಣಾಧಿಕಾರಿ ಹರೀಶ್ ‌ನೇತೃತ್ವದ ತಂಡ ಆಟದಲ್ಲಿ ನಿರತರಾಗಿದ್ದ 34 ಮಂದಿ ಆರೋಪಿಗಳ ಸಹಿತ ಆಟಕ್ಕೆ ಬಳಸಿದ ಲಕ್ಷಾಂತರ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಎಂಬಲ್ಲಿನ ಆರ್.ಸಿ.ಸಿ.ಮನೆಯೊಳಗೆ ಜುಗಾರಿ ಆಟ ಆಡಿಸುತ್ತಿದ್ದ ನಿಶಾಂತ್‌ ತಪ್ಪಿಸಿಕೊಂಡಿದ್ದು, ಜುಗಾರಿ ಆಟ ಆಡುತ್ತಿದ್ದ ಒಟ್ಟು 33 ಜನರನ್ನು ಬಂಧಿಸಿದ್ದು, ಜುಗಾರಿ ಆಟಕ್ಕೆ ಬಳಸಿದ ರೂಪಾಯಿ 7,81,420/-, ಇಸ್ಪೀಟ್‌ ಎಲೆಗಳು, 3 ಸ್ಟೀಲ್‌ ಟೇಬಲ್‌, 10 ಪ್ಲಾಸ್ಟಿಕ್‌ ಚೆಯರ್‌ ಗಳು, ಟೇಬಲ್‌ ಮೇಲೆ ಹಾಸಿದ್ದ ಬಟ್ಟೆ ಬಂಧಿತರಿಂದ ನಗದು ಸಹಿತ 7,90,220 ರೂ ಮೌಲ್ಯದ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳಾದ ನಿಶಾಂತ್ ರಾಜೇಶ್‌ (35), ಆನಂದ ಡಿ.ಸೋಜ (46), ಚೇತನ್‌ (39), ನಿತಿನ್‌ (34), ಪುಷ್ಪರಾಜ್‌ ಬಳ್ಳಾಲ್‌ (52), ನೌಷಾದ್‌ (37), ನಾಗೇಶ್‌ (36), ಅಬ್ದುಲ್‌ ಮಜೀದ್‌ (37), ಹರೀಶ್‌ (45), ಉಮೇಶ್‌ (52), ವಿನಾಯಕ (47) ಅಜಿತ್‌ ಕುಮಾರ್‌ (36) ರಾಘವೇಂದ್ರ (34), ಪ್ರವೀಣ್‌ ಕುಮಾರ್‌ (58), ಚೆನ್ನಕೇಶವ (42), ಭಾಸ್ಕರ (36), ವಿಘ್ನೇಶ (42), ಸಂಕೇತ್‌ (35), ಪವನ್‌ ರಾಜ್‌ (37), ಲೋಹಿತ್‌ (42), ಸತೀಶ್‌ ಇ., ಧೀರಜ್‌ಕುಮಾರ್‌ (26), ಚಿದಾನಂದ (30), ಪ್ರಸಾದ್‌ (37), ಸಂದೀಪ್‌ (34), ಅನಿಲ್‌ ಕುಮಾರ್‌ (30), ನಿತೀಶ್‌ (21), ಸತೀಶ್‌ (36) ಮುಸ್ತಫ ಕೆ.ಪಿ. (33), ಅರುಣ್‌ ಡಿ.ಸೋಜ (50), ರೋಹಿತಾಶ್ವ ಪೂಜಾರಿ ( 32), ವಿಜೇತ್‌ಕುಮಾರ್‌ (39), ನಿಖಿಲ್‌ (34) ಎಂಬವರ ವಿರುದ್ಧ ಎ.ಸಿ.ಜೆ. & ಜೆ.ಎಂ.ಎಫ್.‌ ಸಿ. ನ್ಯಾಯಾಲಯ, ಬಂಟ್ವಾಳ ರವರ ಡಿಸ್‌ ನಂ: 1770 /2024 ರ ಆದೇಶದಂತೆ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments