ಬಂಟ್ವಾಳ : ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಮಂಜೂರು

Spread the love

ಬಂಟ್ವಾಳ : ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಮಂಜೂರು

ಮ0ಗಳೂರು : ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧಾರ್ಮಿಕ ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಶಿಫಾರಸಿನಂತೆ ರೂ 9.35 ಲಕ್ಷ ಅನುದಾನ ಮಂಜೂರಾಗಿದೆ.

ನರಿಕೊಂಬು ಗ್ರಾಮದ ನಿನ್ನಿಪಡ್ಪು ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ಸೇವಾ ಸಮಿತಿ ಹಾಗೂ ಕರೋಪಾಡಿ ಗ್ರಾಮದ ಗುಬ್ಯ ಮಾಯಿಲರ ಕಾಲನಿ ಶ್ರೀ ಪಂಜುರ್ಲಿ ಧರ್ಮದೈವ ಆರಾಧನಾ ಸೇವಾ ಸಮಿತಿಗೆ ತಲಾ ರೂ.1.25 ಲಕ್ಷ, ಬಾಳ್ತಿಲ ಗ್ರಾಮದ ಶ್ರೀ ಸತ್ಯ ಸಾರಾಮಣಿ ದೈವದ ಸಮಿತಿ ಹಾಗೂ ಸಂಗಬೆಟ್ಟು ಗ್ರಾಮದ ಮುಗೇರುಗುಡ್ಡೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಗಳಿಗೆ ತಲಾ ರೂ.1 ಲಕ್ಷ, ಕೊಡಂಬೆಟ್ಟು ಗ್ರಾಮದ ರಾಮೊಟ್ಟು ಶ್ರೀ ಸತ್ಯಸಾರಾಮಣಿ ದೈವಸ್ಥಾನಕ್ಕೆ ರೂ.80 ಸಾವಿರ, ಸಂಗಬೆಟ್ಟು ಗ್ರಾಮದ ಮಾಲ್ಡಾಡುಪಲಿಕೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಕ್ಕೆ ರೂ.75ಸಾವಿರ, ಕನ್ಯಾನ ಬಂಡಿತ್ತಡ್ಕ ಶ್ರೀ ಚಾಮುಂಡೇಶ್ವರಿ ಅಣ್ಣಪ್ಪ ದೇವಸ್ಥಾನ, ಕನ್ಯಾನ ಮರ್ತನಾಡಿ ಶ್ರೀ ಆದಿಮುಗೇರ್ಕಳ ದೈವಸ್ಥಾನ ಕರೋಪಾಡಿ ಕಬ್ಬಿನಮೂಲೆ ಶ್ರೀ ಧರ್ಮದೈವ ದೈವರಾಧನಾ ಸೇವಾ ಸಮಿತಿ, ಕಡೇಶ್ವಾಲ್ಯ ಗ್ರಾಮದ ಕಲ್ಲಾಜೆಪಲ್ಕೆ ಭೂತಸ್ಥಾನ ಹಾಗೂ ಅಮ್ಟೂರು ಕೃಷ್ಣಾಪುರ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಗಳಿಗೆ ತಲಾ ರೂ.50 ಸಾವಿರ, ಬುಡೋಳಿ ಗ್ರಾಮದ ದಂಡೆಗೋಳಿ ಶ್ರೀ ದುಗಾಂಬಿಕಾ ಕ್ಷೇತ್ರಕ್ಕೆ ರೂ.40,800, ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಶ್ರೀ ಮಹಮ್ಮಾಯಿ ಮಂದಿರಕ್ಕೆ ರೂ.40 ಸಾವಿರ ಅನುದಾನ ಮಂಜೂರಾಗಿದೆ.


Spread the love