ಬಂಟ್ವಾಳ: ಹಾಸ್ಪಿಟಲ್ ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

Spread the love

ಬಂಟ್ವಾಳ: ಹಾಸ್ಪಿಟಲ್ ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ: ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಬಂಟ್ವಾಳ ಪುದು ವ್ಯಕ್ತಿಯೋರ್ವರಿಗೆ ಹಾಸ್ಪಿಟಲ್ ಕ್ವಾರಂಟೈನ್ ವಿಧಿಸಿದ್ದು ಸರಕಾರದ ಆದೇಶ ಉಲ್ಲಂಘಿಸಿ ಅಂತರ್ ರಾಜ್ಯ ಪ್ರಯಾಣ ಮಾಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಪುದು ಗ್ರಾಮದ ನಿವಾಸಿ ಮೊಹಮ್ಮದ್ ಅಶ್ರಪ್ ಎಂಬವನು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಲಾಕ್ ಡೌನ್ ಘೋಷಣೆಯಾದ ನಂತರ ಏಪ್ರಿಲ್ 11 ರಂದು ಲಾರಿ ಮೂಲಕ ಮಂಗಳೂರು ಬಂದು ಆತನ ಸಂಬಂಧಿಕರ ಮನೆಯಾದ ಬಂಟ್ವಾಳ ಸಜಿಪಮೂಡ ಗ್ರಾಮದ ಬೊಳ್ಳಾಯಿ ಎಂಬಲ್ಲಿ ತಂಗಿರುವುದಾಗಿದೆ.

ಏಪ್ರೀಲ್ 15ರಂದು ಸ್ಥಳಿಯರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿ ಆತನನ್ನು ಹಾಸ್ಪಿಟಲ್ ಕ್ವಾರೆಂಟೈನ್ ಗೆ ದಾಖಲಿರುತ್ತಾರೆ ಹಾಗೂ ಸರಕಾರದ ಆದೇಶವನ್ನು ಉಲ್ಲಂಘಿಸಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದ್ದರೂ ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಪಡದೆ ನಿರ್ಲಕ್ಷ್ಯ ವಹಿಸಿ ಅಂತರ್ ರಾಜ್ಯ ಪ್ರಯಾಣಿಸಿದ್ದು ಆತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 269, 270 ಐಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


Spread the love